ಗೋಕಾಕ:ಕ್ರಾಂತಿ ವೀರ ಭಗತ್‍ಸಿಂಗ ಮತ್ತು ಅಹಿಂಸಾವಾದಿ ಮಹಾತ್ಮ ಗಾಂಧಿಜೀ ಅವರು ದೇಶದ ಎರಡು ಕಣ್ಣುಗಳಾಗಿದ್ದರು
ಕ್ರಾಂತಿ ವೀರ ಭಗತ್‍ಸಿಂಗ ಮತ್ತು ಅಹಿಂಸಾವಾದಿ ಮಹಾತ್ಮ ಗಾಂಧಿಜೀ ಅವರು ದೇಶದ ಎರಡು ಕಣ್ಣುಗಳಾಗಿದ್ದರು
ಗೋಕಾಕ:ಅ 1: ಕ್ರಾಂತಿ ವೀರ ಭಗತ್‍ಸಿಂಗ ಮತ್ತು ಅಹಿಂಸಾವಾದಿ ಮಹಾತ್ಮ ಗಾಂಧಿಜೀ ಅವರು ದೇಶದ ಎರಡು ಕಣ್ಣುಗಳಾಗಿದ್ದರು. ವಿಚಾರಧಾರೆಗಳು ಬೇರೆಯಾದರೂ ಗುರಿ ಸ್ವಾತಂತ್ರ ಗಳಿಸುವುದೇ ಆಗಿತ್ತೆಂದು ಆರ್‍ಎಸ್‍ಎಸ್‍ನ ಹಿರಿಯ ಚಿಂತಕ ಪ್ರಕಾಶ ನಾಯಿಕ ಹೇಳಿದರು.
ರವಿವಾರದಂದು ಸಂಜೆ ನಗರದ ಮುಪ್ಪಯ್ಯನ ಮಠದಲ್ಲಿ ಶ್ರೀರಾಮ ಸೇನೆಯ ನಗರ ಘಟಕದ ವತಿಯಿಂದ ಹಮ್ಮಿಕೊಂಡ ಕ್ರಾಂತಿ ವೀರ ಭಗತ್‍ಸಿಂಗ್ ಅವರ ಜಯಂತಿ ಉತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಭಗತ್‍ಸಿಂಗ್ ಬದುಕಿದ್ದರೆ ಧರ್ಮದ ಹೆಸರಿನಲ್ಲಿ ದೇಶವನ್ನು ಒಡೆಯುತ್ತಿರಲಿಲ್ಲ, ದೇಶ ಭಕ್ತನಾಗಿ ಧರ್ಮಕ್ಕಿಂತ ದೇಶ ಮುಖ್ಯವೆಂಬ ಧೇಯ್ಯದೊಂದಿಗೆ ಕಾಂತ್ರಿಕಾರಿಯಾಗಿ ಅಲ್ಪಾವಧಿಯಲ್ಲಿ ದೇಶದ ಸ್ವಾತಂತ್ರಕ್ಕಾಗಿ ಅವರು ಮಾಡಿದ ಹೋರಾಟ ಅವಿಸ್ಮರಣಿಯವಾಗಿದೆ. ಇಂದಿನ ಯುವಕರು ದುಶ್ಚಟಗಳಿಂದ ದೂರವಾಗಿ ಉತ್ತಮ ಸಂಸ್ಕಾರವಂತರಾಗಿ, ದೇಶಪ್ರೇಮಿಗಳಾಗಿ ಬಲಿಷ್ಠ ಭಾರತ ನಿರ್ಮಾಣಕ್ಕೆ ಪಣ ತೊಡಬೇಕಾಗಿದೆ ಎಂದು ಕರೆ ನೀಡಿದರು.
ಮಹಾತ್ಮ ಗಾಂಧೀಜಿ ರಾಷ್ಟ್ರಪಿತನಲ್ಲ, ಅವರು ನಮ್ಮ ದೇಶದ ಸುಪುತ್ರರು. ಅವರಿಗಿಂತ ಮುಂಚೆ ಹಲವಾರು ಮಹಾತ್ಮರು, ವೀರರು ಭವ್ಯಭಾರತ ನಿರ್ಮಾಣಕ್ಕಾಗಿ ಶ್ರಮಿಸಿದ್ದಾರೆ. ಅದ್ಬುತ್ವವಾದ ಭಾರತ ದೇಶದಲ್ಲಿ ಎಲ್ಲ ಧರ್ಮದ ಜನಾಂಗಿಯರಿದ್ದು, ಅವರ ಆಚರಣೆಗಳು ಬೇರೆ ಬೇರೆಯಾಗಿದ್ದರು, ಅವರೆಲ್ಲರೂ ಭಾರತೀಯರು. ದೇಶಪ್ರೇಮಿಗಳಾಗಿ ದೇಶದ ಅಭಿವೃದ್ದಿಗೆ ಶ್ರಮಿಸಬೇಕೆಂದು ಹೇಳಿದರು.
ಶ್ರೀರಾಮ ಸೇನೆಯ ಬೆಳಗಾವಿ ಜಿಲ್ಲಾಧ್ಯಕ್ಷ ರಮಾಕಾಂತ ಕೊಂಡುಸ್ಕರ್ ಅವರು ಮಾತನಾಡಿ, ಭಗತ್‍ಸಿಂಗ್ ಜಯಂತಿಯಂದು ಇಂದಿನ ಯುವ ಜನಾಂಗ ಶಪಥ ಮಾಡಿ ದೇಶ, ಧರ್ಮ, ತಂದೆ-ತಾಯಿ ರಕ್ಷಣೆಗಾಗಿ ಹಗಲಿರುಳು ಕಾರ್ಯ ಪ್ರವೃತ್ತರಾಗಬೇಕು. ನಾಡು ಕಟ್ಟುವ ಕಾರ್ಯದಲ್ಲಿ ಯುವ ಪಡೆ ಸದಾ ಜಾಗೃತರಾಗಿ, ಸ್ವಾರ್ಥಿಗಳಾಗದೇ ದೇಶಕ್ಕಾಗಿ ತ್ಯಾಗಿಗಳಾಗಿ ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ನಗರದ ಮುಪ್ಪಯ್ಯನ ಮಠದ ಶ್ರೀ ರಾಚೂಟಿ ದೇವರು ಹಾಗೂ ತವಗದ ಅಭಿನವ ಬಾಳಯ್ಯ ಮಹಾಸ್ವಾಮಿಗಳು ವಹಿಸಿದ್ದರು.
ವೇದಿಕೆ ಮೇಲೆ ಇಲ್ಲಿಯ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ವಿ.ದೇಮಶೆಟ್ಟಿ ಹಾಗೂ ಬಸವಸೇನೆಯ ಜಿಲ್ಲಾಧ್ಯಕ್ಷ ಆನಂದ ಗೋಟಡಕಿ, ಕೆಎಲ್‍ಇ ನಿರ್ದೇಶಕ ಜಯಾನಂದ ಮುನವಳ್ಳಿ, ಆರ್‍ಎಸ್‍ಎಸ್ ಮುಖಂಡ ಮಲ್ಲಿಕಾರ್ಜುನ ಚುನಮರಿ, ಹರೀಶ ಶಾನಭಾಗ, ಶ್ರೀರಾಮ ಸೇನೆ ಮುಖಂಡ ರವಿ ಕೊಕತಕರ, ನಗರ ಘಟಕದ ಅಧ್ಯಕ್ಷ ರಾಜು ಜಾಧವ, ಕಾರ್ಯದರ್ಶಿ ಸುನೀಲ ಮುರ್ಕಿಭಾಂವಿ, ಬಸು ಪಡತಾರೆ ಇದ್ದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ಸಂಗ್ಗೋಳಿ ರಾಯಣ್ಣನ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮೆರವಣಿಗೆ ಮೂಲಕ ಸಾವಿರಾರು ಕಾರ್ಯಕರ್ತರು ಮುಪ್ಪಯನ ಮಠಕ್ಕೆ ತೆರಳಿದರು.