RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ದೇಶದ ಇತಿಹಾಸದಲ್ಲಿ ಮುಂಚೂಣಿ ಹೆಸರುಗಳಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲಬಹುದ್ದೂರ್ ಶಾಸ್ತ್ರಿ ಅವರ ಹೆಸರುಗಳು ಸೇರುತ್ತವೆ

ಗೋಕಾಕ:ದೇಶದ ಇತಿಹಾಸದಲ್ಲಿ ಮುಂಚೂಣಿ ಹೆಸರುಗಳಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲಬಹುದ್ದೂರ್ ಶಾಸ್ತ್ರಿ ಅವರ ಹೆಸರುಗಳು ಸೇರುತ್ತವೆ 

ದೇಶದ ಇತಿಹಾಸದಲ್ಲಿ ಮುಂಚೂಣಿ ಹೆಸರುಗಳಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲಬಹುದ್ದೂರ್ ಶಾಸ್ತ್ರಿ ಅವರ ಹೆಸರುಗಳು ಸೇರುತ್ತವೆ

ಬೆಟಗೇರಿ ಅ 2 : ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಭಾರತ ದೇಶದ ಇತಿಹಾಸದಲ್ಲಿ ಮುಂಚೂಣಿ ಹೆಸರುಗಳಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲಬಹುದ್ದೂರ್ ಶಾಸ್ತ್ರಿ ಅವರ ಹೆಸರುಗಳು ಸೇರುತ್ತವೆ. ಉಭಯ ಮಹಾನ್ ಪುರುಷರ್ ಬದುಕಿನ ತತ್ವಾದರ್ಶಗಳನ್ನು ಇಂದು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಬೆಳಗಾವಿ ಜಿಪಂ ಮಾಜಿ ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಕಲ್ಲೋಳಿಯ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿಯ ಶಾಖೆಯಲ್ಲಿ ಮಂಗಳವಾರ ಅ.2 ರಂದು ನಡೆದ ಮಹಾತ್ಮ ಗಾಂಧಿ ಮತ್ತು ಲಾಲಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಉಭಯ ನೇತಾರರ ಭಾವ ಚಿತ್ರಕ್ಕೆ ಪೊಜೆ, ಪುಷ್ಪಾರ್ಪನೆ ನೆರವೇರಿಸಿ ಮಾತನಾಡಿ, ಮಹಾತ್ಮ ಗಾಂಧಿಯವರ 150ನೇ ಜಯಂತಿಗೆ ಸ್ವಚ್ಛ ಭಾರತ ಪರಿಕಲ್ಪನೆಯನ್ನು ಸಾಕಾರಗೊಳಿಸಿ ಅದನ್ನು ಕೊಡುಗೆಯಾಗಿಸಬೇಕು ಅಂಬುವದು ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯಾಗಿದೆ ಎಂದು ಅಭಿಪ್ರಾಯ ಪಟ್ಟರು.
ಇಲ್ಲಿಯ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಈರಣ್ಣ ಮಲ್ಲಪ್ಪ ದೇಯನ್ನವರ, ಶ್ರೀಕಾಂತ ಕರೆಪ್ಪಗೋಳ, ಈಶ್ವರ ಮುಧೋಳ, ಮಾಯಪ್ಪ ಬಾಣಸಿ, ನಿಂಗಪ್ಪ ನೀಲಣ್ಣವರ, ವಿಠಲ ಕೋಣಿ, ರಾಮಪ್ಪ ಮುಧೋಳ, ಬಸಪ್ಪ ಗೌಡರ, ಅಜ್ಜಪ್ಪ ಪೇದನ್ನವರ ಸೇರಿದಂತೆ ಸ್ಥಳೀಯ ಸಹಕಾರಿ ಶಾಖೆಯ ಸಲಹಾ ಸಮಿತಿ ಸದಸ್ಯರು, ಶಾಖಾ ವ್ಯವಸ್ಥಾಪಕ ಪರಪ್ಪ ಗಿರೆಣ್ಣವರ, ಸಿಬಂ್ಬದಿ, ಗ್ರಾಹಕರು, ಇತರರು ಇದ್ದರು.

Related posts: