RNI NO. KARKAN/2006/27779|Saturday, October 19, 2024
You are here: Home » breaking news » ಖಾನಾಪುರ:ವನ್ಯಜೀವಿಗಳ ರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರಿಕನ‌ ಕರ್ತವ್ಯವಾಗಿದೆ : ಎಂ. ಕೆ. ಪಾತ್ರೋಟ

ಖಾನಾಪುರ:ವನ್ಯಜೀವಿಗಳ ರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರಿಕನ‌ ಕರ್ತವ್ಯವಾಗಿದೆ : ಎಂ. ಕೆ. ಪಾತ್ರೋಟ 

ವನ್ಯಜೀವಿಗಳ ರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರಿಕನ‌ ಕರ್ತವ್ಯವಾಗಿದೆ : ಎಂ. ಕೆ. ಪಾತ್ರೋಟ

ಖಾನಾಪುರ ಅ 3 : ಬೆಳಗಾವಿ ವಿಭಾಗ ನಾಗರಗಾಳಿ ಉಪ ವಿಭಾಗ ವ್ಯಾಪ್ತಿಯ ನಾಗರಗಾಳಿ ಹಾಗೂ ಗೋಲಿಹಳ್ಳಿ ವಲಯದ ವತಿಯಿಂದ ಬುಧವಾರದಂದು ಮುಂಜಾನೆ ಅಳ್ನಾವರದ ರೈಲ್ವೆ ನಿಲ್ದಾಣದಲ್ಲಿ ವನ್ಯಜೀವಿ ಸಪ್ತಾಹವನ್ನು ಹಮ್ಮಿಕ್ಕೊಳ್ಳಲಾಯಿತು .

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಾಗರಗಾಳಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ. ಕೆ. ಪಾತ್ರೋಟ ವನ್ಯಜೀವಿಗಳ ರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರಿಕನ‌ ಕರ್ತವ್ಯವಾಗಿದೆ ಪ್ರತಿಯೊಬ್ಬರು ವನ್ಯ ಜೀವಿಗಳನ್ನು ಪ್ರೀತಿಸುವ ಪ್ರವೃತ್ತಿಯನ್ನು ಹೊಂದಬೇಕು ಅಂದಾಗ ಮಾತ್ರ ನಾವು ವನ್ಯಜೀವಿಗಳನ್ನು ಉಳಿಸಿ ಬೆಳೆಸಲು ಸಾಧ್ಯ . ಭಾರತೀಯ ಸಂವಿಧಾನದ ವಿಧಿ 51A (g) ಪ್ರಕಾರ ವನ್ಯಜೀವಿಗಳ ರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರಿಕನ‌ ಕರ್ತವ್ಯ ಇದರ ಬಗ್ಗೆ ಜಾಗೃತಿ ಮೂಡಿಸಲು ಸಾರ್ವಜನಿಕರ ಸಹಕರಿಸಬೇಕು ರೈಲಿನಲ್ಲಿ ಪ್ರವಾಸ ಮಾಡುವಾಗ ಆಹಾರ ತ್ಯಾಜ್ಯಗಳನ್ನು ಅರಣ್ಯದಲ್ಲಿ ಹಾಗೂ ರೈಲು ಹಳಿ ಪಕ್ಕದಲ್ಲಿ ಎಸೆಯದೆ ಡಸ್ಟ್ ಬೀನಗಳಲ್ಲಿ ಹಾಕಿ ಸಹಕರಿಸಬೇಕು . ರೈಲು ಹಳಿಗಳ ಪಕ್ಕದಲ್ಲಿ ಅಥವಾ ಅರಣ್ಯದಲ್ಲಿ ಎಸೆದರೆ ಆಹಾರ ತಿನ್ನಲು ಬಂದ ಪ್ರಾಣಿಗಳು ರೈಲ್ಲಿಗೆ ಸಿಲುಕಿ ಮೃತಪಟ್ಟ ಘಟನೆಗಳು ಜರುಗುತ್ತಿವೆ. ಪ್ರತಿಯೊಬ್ಬ ರೈಲು ಪ್ರಯಾಣಿಕ ಹೀಗಾಗದಂತೆ ಮುತೂರ್ವಜಿ ವಹಿಸಿ ಸಹಕರಿಸಬೇಕೆಂದು ಪಾತ್ರೋಟ ಹೇಳಿದರು .

ಅಳ್ನಾವರದ ರೈಲ್ವೆ ನಿಲ್ದಾಣದಲ್ಲಿ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ” ವನ್ಯಪ್ರಾಣಿಗಳನ್ನು ಪ್ರೀತಿಸಿ ಮತ್ತು ರಕ್ಷಿಸಿ” ಆಹಾರ ತ್ಯಾಜ್ಯಗಳನ್ನು ಅರಣ್ಯದಲ್ಲಿ ಹಾಗೂ ರೈಲು ಹಳಿ ಪಕ್ಕದಲ್ಲಿ ಎಸೆಯಬೇಡಿ” ” ಎಂಬ ಘೋಷಣಾ ವಾಕ್ಯಗಳೊಂದಿಗೆ ಪ್ರಯಾಣಿಕರಿಗೆ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು
ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿಗಳಾದ ಎಂ.ಬಿ.ಕುಸನಾಳ (ನಾಗರಗಾಳಿ) ಹಾಗೂ ರತ್ನಾಕರ ಓಬನ್ನವರ ( ಗೋಲಿಹಳ್ಳಿ) ಮತ್ತು ಗೋಧೋಳಿ ಸಹ್ಯಾದ್ರಿ ಪ್ರೌಢಶಾಲಾ ಮಕ್ಕಳು ಮತ್ತು ಶಾಲಾ ಶಿಕ್ಷಕರು, ರೈಲ್ವೆ ಸಿಬ್ಬಂದಿ , ಮತ್ತು ಅರಣ್ಯ ಸಿಬ್ಬಂದಿಗಳು ಉಪಸ್ಥಿತರಿದ್ದರು

Related posts: