ಘಟಪ್ರಭಾ:ಕಿತ್ತೂರ ರಾಣಿ ಚನ್ನಮ್ಮ ಪ್ರತಿಮೆಗೆ ಅವಮಾನ ಕರವೇ ಪ್ರತಿಭಟನೆ
ಕಿತ್ತೂರ ರಾಣಿ ಚನ್ನಮ್ಮ ಪ್ರತಿಮೆಗೆ ಅವಮಾನ ಕರವೇ ಪ್ರತಿಭಟನೆ
ಘಟಪ್ರಭಾ ಅ 4 : ವೀರರಾಣಿ ಹಾಗೂ ನಾಡ ತಾಯಿ ಆರು ಕೋಟಿ ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿರುವ ಕಿತ್ತೂರ ರಾಣಿ ಚನ್ನಮ್ಮ ಅವರ ಪ್ರತಿಮೆಗೆ ಬೆಳಗಾವಿ ತಾಲೂಕಿನ ನಾವಗೆ ಗ್ರಾಮದಲ್ಲಿ ಮಸಿ ಬಳಿಯುವ ಮೂಲಕ ಅವಮಾನಿಸಿದ್ದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಧುಪದಾಳ ಘಟಕದ ವತಿಯಿಂದ ಪ್ರತಿಭಟನೆಯನ್ನು ಮಾಡಲಾಯಿತು.
ಗುರುವಾರದಂದು ಸಮೀಪದ ಧುಪದಾಳ ಗ್ರಾಮದ ಮುಖ್ಯ ವೃತ್ತದಲ್ಲಿ ಸೇರಿದ ಕರವೇ ಕಾರ್ಯಕರ್ತರು ನಾಡದ್ರೋಹಿಗಳ ವಿರುದ್ಧ ಘೋಷಣೆ ಕೂಗಿ ತಮ್ಮ ಅಕ್ರೋಶವನ್ನು ವ್ಯಕ್ತಪಡಿಸಿದರು.
ನಂತರ ತಾಲೂಕಾ ಸಂಚಾಲಕ ರಹೆಮಾನ ಮೊಕಾಶಿ ಮಾತನಾಡಿ ಈ ಕೃತ್ಯವೆಸಗಿದ ನಾಡದ್ರೋಹಿಗಳನ್ನು ಶೀಘ್ರದಲ್ಲಿ ಬಂಧಿಸಿ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. ನಂತರ ಘಟಪ್ರಭಾ ಪಿಎಸ್‍ಐ ದೇವಾನಂದ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಕರವೇ ಕಾರ್ಯಕರ್ತರಾದ ರವಿ ನಾಂವಿ, ವಸಂತ ತಳಗೇರಿ, ಶೆಟ್ಟೆಪ್ಪ ಗಾಡಿವಡ್ಡರ, ಅಮೀರಖಾನ ಜಗದಾಳ, ಅಜಿತ್ ಮಲ್ಲಾಪೂರೆ, ರಾಜು ಗಾಡಿವಡ್ಡರ, ರಾಮಪ್ಪ ದೇಮನ್ನವರ, ಎಸ್.ಎಸ್. ನಾಯಿಕ, ಸುನೀಲ ಕೊಟಬಾಗಿ, ಶಂಕರ ಗಾಡಿವಡ್ಡರ, ವಿಠ್ಠಲ ಗಾಡಿವಡ್ಡರ, ತಮಣ್ಣಾ ಗಾಡಿವಡ್ಡರ, ರಮೇಶ ಗಾಡಿವಡ್ಡರ, ಶಂಕರ ಕರಿಗಾರ,ಕೆಂಚಪ್ಪ ಮಲ್ಲಾಪೂರ, ದೇವಪ್ಪ ತಳಗೇರಿ, ಲಾಜಿಮ ಮೊಕಾಶಿ ಸೇರಿದಂತೆ ಅನೇಕರು ಇದ್ದರು.