ಗೋಕಾಕ:ಬೆಳ್ಳಂಬೆಳಿಗ್ಗೆ ಗೋಕಾಕ ಶಿಕ್ಷಣ ಸಂಸ್ಥೆಗೆ ಶಾಕ್ ನೀಡಿದ ಆಯಾಗಳು : ಶಾಲಾ ಕೋಠಡಿಗಳಿಗೆ ಬಿಗಿ ಜಡಿದು ಧಿಡೀರ್ ಪ್ರತಿಭಟನೆ
ಬೆಳ್ಳಂಬೆಳಿಗ್ಗೆ ಗೋಕಾಕ ಶಿಕ್ಷಣ ಸಂಸ್ಥೆಗೆ ಶಾಕ್ ನೀಡಿದ ಆಯಾಗಳು : ಶಾಲಾ ಕೋಠಡಿಗಳಿಗೆ ಬಿಗಿ ಜಡಿದು ಧಿಡೀರ್ ಪ್ರತಿಭಟನೆ
ಗೋಕಾಕ ಅ 5 : ವೇತನ ( ಇನ್ಕ್ರೀಮೆಂಟ್ ) ಹೆಚ್ಚಿಸುವಂತೆ ಆಗ್ರಹಿಸಿ ಗೋಕಾಕ ಶಿಕ್ಷಣ ಸಂಸ್ಥೆಯ 30 ಕ್ಕೂ ಆಯಾಗಳು ಶುಕ್ರವಾರ ಬೆಳ್ಳಂಬೆಳಿಗ್ಗೆ ಧಿಡೀರ್ ಪ್ರತಿಭಟನೆ ನಡೆಸಿದರು
ಶುಕ್ರವಾರ ಎಂದಿನಂತೆ ಮಕ್ಕಳನ್ನು ಶಾಲೆಗೆ ಬಿಡಲು ಬಂದಿದ್ದ ಪಾಲಕರಿಗೆ ಬಿಗ್ ಶಾಕ್ ನೀಡಿದ ಆಯಾಗಳು ಶಾಲೆಯ ಮುಖ್ಯ ದ್ವಾರ ಮತ್ತು ಶಾಲೆಯ ಎಲ್ಲಾ ಕೋಠಡಿಗಳಿಗೆ ಬೀಗ ಜಡಿದು ಶಾಲಾ ಆವರಣದಲ್ಲಿ ಕುಳಿತು ಧರಣಿ ನಡೆಸಿದರು
ದಿಢೀರ್ ನಡೆಯುತ್ತಿದ ಪ್ರತಿಭಟನೆಯಿಂದ ಆತಂಕಗೊಂಡ ಪಾಲಕರು ಏನು ವಿಷಯ ಎಂದು ತಿಳಿದುಕೊಂಡು ಆಯಾಗಳ ಬೇಡಿಕೆಯನ್ನು ಬೆಂಬಲಿಸಿದರು .
ಒಂದು ತಾಸಿಗೂ ಹೆಚ್ಚು ಕಾಲ ಶಾಲಾ ಕೋಠಡಿ ಮತ್ತು ಮುಖ್ಯದ್ವಾರಕ್ಕೆ ಬಿಗ್ ಜಡಿದಿದ್ದ ಪರಿಣಾಮ ಮಕ್ಕಳ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು . ಬಿಗ್ ಹಾಕಿದ್ದರಿಂದ ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಜಮಾವನೆಗೊಂಡ ಪರಿಣಾಮ ಸ್ವಲ್ಪ ನುಕ್ಕು ನುಗಿಲು ಉಂಟಾಗಿ ವಿದ್ಯಾರ್ಥಿಗಳು ಹೈರಾಣಾದರು .
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಗೋಕಾಕ ಶಿಕ್ಷಣ ಸಂಸ್ಥೆಯ ಜ್ಞಾನ ದೀಪ ಶಾಲೆಯ ಪ್ರಾಚಾರ್ಯ ಆರ್.ಭರಭರಿ ಅವರು ಆಯಾಗಳ ಮನವೊಲಿಸಲು ಹರಸಾಹಸ ಪಟ್ಟರು ಅವರ ಮನವೊಲಿಕ್ಕೆಗೆ ಜಗ್ಗದ ಆಯಾಗಳುಗಳು ಸ್ಥಳಕ್ಕೆ ಸಂಸ್ಥೆಯ ಅಧ್ಯಕ್ಷ ವಿಶ್ವನಾಥ್ ಕಡಕೋಳ ಬರಬೇಕೆಂದು ಪಟ್ಟು ಹಿಡಿದರು . ನಂತರ ಪ್ರಾಚಾರ್ಯ ಭರಭರಿ ಅವರೊಂದಿಗೆ ಚರ್ಚಿಸಿದ ಆಯಾಗಳು ಸಂಸ್ಥೆಯ ಕಾಲೇಜು ವಿಭಾಗದಲ್ಲಿ ಕೆಲಸ ಮಾಡುವ ಆಯಾಗಳಿಗೆ ಈ ಬಾರಿ 200 ರೂ ಇನ್ಕ್ರೀಮೆಂಟ್ ಹೆಚ್ಚಿಸಲಾಗಿದೆ ಆದರೆ ಪೂರ್ವ ಪ್ರಾಥಮಿಕ, ಪ್ರಾಥಮಿಕ ಮತ್ತು ಪ್ರೌಢಶಾಲೆ ವಿಭಾಗಗಳಲ್ಲಿ ಕೆಲಸ ಮಾಡುವ ಆಯಾಗಳಿಗೆ ಕೇವಲ 60 ರೂ ಇನ್ಕ್ರೀಮೆಂಟ್ ಹೆಚ್ಚಿಸಿ ಸಂಸ್ಥೆ ಮಲತಾಯಿ ಧೋರಣೆ ತೋರಿದೆ , ಪ್ರತಿ ಬಾರಿ ರಜೆಯಲ್ಲಿ ಒಂದು ತಿಂಗಳದ ವೇತನ ಹಾಕಿ ಕೊಡಲಾಗುತ್ತಿತ್ತು ಆದರೆ ಕಳೆದ ರಜಾ ದಿನಗಳಿಂದ ಇದನ್ನು ಕೈಬಿಡಲಾಗಿದೆ . ಆದಷ್ಟು ಬೇಗ ಕಾಲೇಜಿನ ಆಯಾಗಳಂತೆ ರೂ 200 ಇನ್ಕ್ರೀಮೆಂಟ್ ಹಾಕಿ ರಜಾದಿನಗಳಲ್ಲಿ ಒಂದು ತಿಂಗಳ ವೇತನ ನೀಡುವಂತೆ ಸಂಸ್ಥೆಯ ಅಧ್ಯಕ್ಷರಿಗೆ ಮನವರಿಕೆ ಮಾಡುವಂತೆ ಪ್ರಾಚಾರ್ಯ ಭರಭರಿ ಅವರನ್ನು ಪ್ರತಿಭಟನಾಕಾರರು ವಿನಂತಿಸಿದರು . ಸಂಸ್ಥೆಯ ಅಧ್ಯಕ್ಷ ರೊಂದಿಗೆ ಈ ವಿಷಯವನ್ನು ಚರ್ಚಿಸಲಾಗುವದೆಂದು ಹೇಳಿದ ನಂತರ ಆಯಾಗಳು ತಮ್ಮ ಪ್ರತಿಭಟನೆಯನ್ನು ಹಿಂಪಡೆದರು