ಗೋಕಾಕ:ವಿದ್ಯಾರ್ಥಿಗಳು ಕಾನೂನುಗಳ ಅರಿವು ಹೊಂದಿ ಇತರರಲ್ಲೂ ಅರಿವು ಮೂಡಿಸಬೇಕು : ಗುರುನಾಥ ಚವ್ಹಾಣ
ವಿದ್ಯಾರ್ಥಿಗಳು ಕಾನೂನುಗಳ ಅರಿವು ಹೊಂದಿ ಇತರರಲ್ಲೂ ಅರಿವು ಮೂಡಿಸಬೇಕು : ಗುರುನಾಥ ಚವ್ಹಾಣ
ಗೋಕಾಕ ಅ 5 : ಇಂದಿನ ವಿದ್ಯಾರ್ಥಿಗಳೇ ಮುಂದಿನ ಬಾವಿ ಪ್ರಜೆಗಳಾಗಿದ್ದು, ತಾವು ಕಾನೂನುಗಳ ಅರಿವು ಹೊಂದಿ ಇತರರಲ್ಲೂ ಅರಿವು ಮೂಡಿಸುವಂತೆ ನಗರ ಪೋಲಿಸ್ ಠಾಣೆಯ ಪಿಎಸ್‍ಐ ಗುರುನಾಥ ಚವ್ಹಾಣ ಹೇಳಿದರು.
ಶುಕ್ರವಾರದಂದು ನಗರದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಶಾಲೆಯಲ್ಲಿ ಶಹರ ಪೋಲಿಸ ಠಾಣೆಯವರು ಹಮ್ಮಿಕೊಂಡ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಕಾನೂನು ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ವಿದ್ಯಾರ್ಥಿ ಜೀವನೆಂಬುದು ಅಮೂಲ್ಯವಾದದದ್ದು, ತಾವು ಕಾನೂನನ್ನು ಪಾಲನೆ ಮಾಡುದನ್ನು ವಿದ್ಯಾರ್ಥಿ ದೆಸೆಯಿಂದಲೆ ರೂಢಿಯಲ್ಲಿ ತರುವುದರಿಂದ ಇತರರಿಗೂ ಮಾದರಿಯಾಗಿರಿ ಎಂದು ಹೇಳಿದರಲ್ಲದೇ, ಸಂಚಾರಿ ನಿಯಮ, ಸೈಬರ್ ಕ್ರೈಮ್, ಬಾಲಕಾರ್ಮಿಕ ಪದ್ದತಿ, ಬಾಲಕಿಯರ ಹಾಗೂ ಮಹಿಳೆಯರ ಮೇಲೆ ದೌರ್ಜನ್ಯ, ಪೋಕ್ಸೋ ಕಾಯ್ದೆಗಳ ಕುರಿತು ವಿದ್ಯಾರ್ಥಿಗಳ ಸವಿಸ್ತಾರವಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಎಸ್.ಜಿ.ಬೆಟಗಾರ, ಮುಖ್ಯೋಪಾಧ್ಯಯರಾದ ಬಿ.ಕೆ.ಕುಲಕರ್ಣಿ, ಎಚ್.ವಿ.ಪಾಗನೀಸ್, ಪಿ.ವಿ.ಚಚಡಿ ಇದ್ದರು. ಶಿಕ್ಷಕ ಎಸ್.ಬಿ.ಬೆಕ್ಕನ್ನವರ ಸ್ವಾಗತಿಸಿ ವಂದಿಸಿದರು.