RNI NO. KARKAN/2006/27779|Thursday, November 7, 2024
You are here: Home » breaking news » ಗೋಕಾಕ:ಶಿಕ್ಷಣ ಮತ್ತು ಆಧ್ಯಾತ್ಮ ಒಂದೇ ನಾಣ್ಯದ ಎರೆಡು ಮುಖಗಳು : ಜಾವೇದ ಗೋಕಾಕ

ಗೋಕಾಕ:ಶಿಕ್ಷಣ ಮತ್ತು ಆಧ್ಯಾತ್ಮ ಒಂದೇ ನಾಣ್ಯದ ಎರೆಡು ಮುಖಗಳು : ಜಾವೇದ ಗೋಕಾಕ 

ಶಿಕ್ಷಣ ಮತ್ತು ಆಧ್ಯಾತ್ಮ ಒಂದೇ ನಾಣ್ಯದ ಎರೆಡು ಮುಖಗಳು : ಜಾವೇದ ಗೋಕಾಕ

ಗೋಕಾಕ ಅ 6 : ಶಿಕ್ಷಣ ಮತ್ತು ಆಧ್ಯಾತ್ಮ ಒಂದೇ ನಾಣ್ಯದ ಎರೆಡು ಮುಖಗಳು ಎಂದು ಅಂಜುಮನ್ ಕಮೀಟಿಯ ಅಧ್ಯಕ್ಷ ಜಾವೇದ ಗೋಕಾಕ  ಹೇಳಿದರು

ಶನಿವಾರದಂದು  ಇಲ್ಲಿಯ ತಂಜೀಮ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕರ್ನಾಟಕ ಮುಸ್ಲಿಂ ವಿಕಾಸ್ ಪರಿಷತ್ ಜಿಲ್ಲಾ ಘಟಕ  ಹಮ್ಮಿಕೊಂಡಿದ್ದ ಉಚಿತ ಸುನ್ನತೆ ಇಬ್ರಾಹಿಂ (ಖತನಾ) ಕ್ಯಾಂಪಗೆ ಚಾಲನೆ ನೀಡಿ ಮಾತನಾಡಿದರು

ಆದಾತ್ಮದ ಜೊತೆಗೆ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಿ ಮಕ್ಕಳನ್ನು ಸಾಮಾಜದ ಮುಖ್ಯವಾಹಿನಿಗೆ ಬರಲು ಪಾಲಕರು ಸಹಕರಿಸಿದರೆ ಸದೃಢ ಸಮಾಜ ನಿರ್ಮಿಸಲು ಸಾಧ್ಯ . ಕಳೆದ ಸುಮಾರು ಒಂದು ದಶಕದಿಂದ ಇಲ್ಲಿಯ ಕರ್ನಾಟಕ ಮುಸ್ಲಿಂ ವಿಕಾಸ ಪರಿಷತ್ ಸಂಸ್ಥೆಯು ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವದು ಶ್ಲಾಘನೀಯ ಅವರ ಈ ಸಮಾಜಿಕ ಕಾರ್ಯ ಹೀಗೆಯೇ ಮುಂದುವರೆಯಲ್ಲಿ ಎಂದು ಶುಭ ಹಾರೈಸಿದರು. 

ಶಿಬಿರದಲ್ಲಿ ಭಾಗವಹಿಸಿ ಆರ್ಶಿವಚನ ನೀಡುತ್ತಿರುವ ಮುಫ್ತಿ ಖಾಜಾ ಸುಳೇಬಾವಿ

ದಿವ್ಯ ಸಾನಿಧ್ಯವನ್ನು ವಹಿಸಿದ ಮುಫ್ತಿ ಖ್ವಾಜಾ ಸುಳೇಬಾವಿ ಅವರು ಆರ್ಶಿವಚನ ನೀಡಿದರು .

ಮುಂಜಾನೆಯಿಂದ ನಡೆದ ಉಚಿತ ಶಿಬಿರದಲ್ಲಿ ಸುಮಾರು 200 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ಈ ಶಿಬಿರದ ಸದುಉಪಯೋಗ ಪಡೆದುಕೊಂಡರು

ಈ ಸಂದರ್ಭದಲ್ಲಿ ಸಂಸ್ಥೆಯ ಮುಖಂಡರಾದ ಅಬ್ಬಾಸ ಕೆ ದೇಸಾಯಿ , ಸಾಧಿಕ ಹಲ್ಯಾಳ , ನಗರಸಭೆ ಸದಸ್ಯ ಅಬ್ಬಾಸ ದೇಸಾಯಿ ,  ಮಹಾರಾಷ್ಟ್ರ ಸಾಂಗಲಿಯ ಡಾ.ಇಕಬಾಲ ಶರೀಕಮಸಲತ್ತ , ಡಾ‌. ಇಸಾಕ ಔರಂಗವಾಲೇ , ನೂರೆಇಲಾಹಿ ಜಮಾದಾರ , ಜಹಾಂಗೀರ ಜಮಾದಾರ , ಮುಸ್ತಾಕ ಖಂಡಾಯತ, ಖಾಜಾ ಮತ್ತೆ , ಮುಗುಟ ಪೈಲವಾನ , ಮೊಶಿನ ಮಕಾನದಾರ , ಸೈಯದ ಮುಲ್ಲಾ , ಯಾಕುಬ ಮುಜಾವರ , ರಪೀಕ ಗುಳೇದಗುಡ್ಡ , ಮಲ್ಲಿಕ ಅರಳಿಕಟ್ಟಿ , ಇಮ್ರಾನ ಪುಲತಾಂಬೆ , ದಾದಾಪೀರ ಅಥಣಿ , ಇಮ್ರಾನ ಗೊಟೇದ , ಸೊಹೇಲ ಸೈಯದ , ಸೇರಿದಂತೆ ಅನೇಕರು ಉಪಸ್ಥಿತರಿದ್ದರು

Related posts: