RNI NO. KARKAN/2006/27779|Wednesday, November 6, 2024
You are here: Home » breaking news » ಮೂಡಲಗಿ:ಸಾಕ್ಷರತೆಯಲ್ಲಿ ಶೇ ನೂರರಷ್ಟು ಸಾಧನೆಗೈದರೆ ಮಾತ್ರ ನನ್ನ ಮನಸ್ಸಿಗೆ ನೆಮ್ಮದಿ : ಶಾಸಕ ಬಾಲಚಂದ್ರ

ಮೂಡಲಗಿ:ಸಾಕ್ಷರತೆಯಲ್ಲಿ ಶೇ ನೂರರಷ್ಟು ಸಾಧನೆಗೈದರೆ ಮಾತ್ರ ನನ್ನ ಮನಸ್ಸಿಗೆ ನೆಮ್ಮದಿ : ಶಾಸಕ ಬಾಲಚಂದ್ರ 

ಸಾಕ್ಷರತೆಯಲ್ಲಿ ಶೇ ನೂರರಷ್ಟು ಸಾಧನೆಗೈದರೆ ಮಾತ್ರ ನನ್ನ ಮನಸ್ಸಿಗೆ ನೆಮ್ಮದಿ : ಶಾಸಕ ಬಾಲಚಂದ್ರ

ಮೂಡಲಗಿ ಅ 6 : ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ(ಆರ್‍ಎಂಎಸ್‍ಎ) ಯೋಜನೆಯಡಿ ಮೂಡಲಗಿ ವಲಯದ 151 ಶಾಲಾ ಕೊಠಡಿಗಳ ನಿರ್ಮಾಣಕ್ಕಾಗಿ 12 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ತಾಲೂಕಿನ ತುಕ್ಕಾನಟ್ಟಿ ಗ್ರಾಮದ ಕೆರಿಸಿದ್ಧೇಶ್ವರ ವನದಲ್ಲಿ ಶನಿವಾರದಂದು ಜರುಗಿದ ಗುರುಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 2004 ರಿಂದ ಇಲ್ಲಿಯವರೆಗೆ ಒಟ್ಟು 45 ಕೋಟಿ ರೂ. ಅನುದಾನದಲ್ಲಿ ಶಾಲಾ ಕೊಠಡಿಗಳನ್ನು ನಿರ್ಮಾಣಗೊಳಿಸಲಾಗಿದೆ ಎಂದು ಹೇಳಿದರು.
ಮೂಡಲಗಿ ಶೈಕ್ಷಣಿಕ ವಲಯ ರಾಜ್ಯದಲ್ಲಿಯೇ ಮುಂಚೂಣಿಗೆ ತರಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಸತತ ಮೂರು ವರ್ಷ ರಾಜ್ಯದಲ್ಲಿಯೇ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶದಲ್ಲಿ ಪ್ರಥಮ ಸ್ಥಾನ ಪಡೆದಿರುವ ಹೆಗ್ಗಳಿಕೆ ಮೂಡಲಗಿ ವಲಯದ್ದಾಗಿದೆ. ಪ್ರತಿಯೊಬ್ಬರೂ ಸಾಕ್ಷರರನ್ನಾಗಿ ಪರಿವರ್ತಿಸುವ ಮಹತ್ವಾಕಾಂಕ್ಷೆಯಿಂದ ಶಿಕ್ಷಣಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಲಾಗುತ್ತಿದೆ. ಮೂಡಲಗಿ ವಲಯವನ್ನು ಶೇ 100 ರಷ್ಟು ವಿದ್ಯಾವಂತರನ್ನಾಗಿ ರೂಪಿಸುವ ಜವಾಬ್ದಾರಿಯನ್ನು ಶಿಕ್ಷಕರು ನಿರ್ವಹಿಸಿದರೆ ನಮ್ಮ ಪ್ರಯತ್ನಕ್ಕೆ ಫಲ ಸಿಕ್ಕಂತಾಗುತ್ತದೆ. ಶೇ ನೂರರಷ್ಟು ಸಾಕ್ಷರತೆಯಲ್ಲಿ ಸಾಧನೆಗೈದರೆ ಮಾತ್ರ ನನ್ನ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಸಂಪೂರ್ಣ ಸಾಕ್ಷರತೆಯ ಕನಸನ್ನು ನನಸು ಮಾಡಲು ಎಲ್ಲರೂ ಶಕ್ತಿ ಮೀರಿ ಶ್ರಮಿಸುವಂತೆ ಅವರು ಕೋರಿದರು. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜಯಂತಿ ನಿಮಿತ್ಯ ನಡೆಯುತ್ತಿರುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಬಹು ವಿಜ್ರಂಭನೆಯಿಂದ ಕಳೆದ 15 ವರ್ಷಗಳಿಂದ ಆಚರಿಸುತ್ತಿದ್ದೇವೆ. ರಾಷ್ಟ್ರದ ಶಿಲ್ಪಿಯಾಗಿರುವ ಶಿಕ್ಷಕರಿಂದ ಈ ಸಮಾಜ ಪರಿವರ್ತನೆಯಾಗಲು ಸಾಧ್ಯವಿದೆ. ಡಾ.ರಾಧಾಕೃಷ್ಣನ್ ಅವರ ತತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ಪಾಲಿಸುವ ಮೂಲಕ ರಾಷ್ಟ್ರ ನಾಯಕನಿಗೆ ಗೌರವ ಸಲ್ಲಿಸಲು ಮುಂದಾಗುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕರೆ ನೀಡಿದರು.

ತುಕ್ಕಾನಟ್ಟಿ ಗ್ರಾಮದಲ್ಲಿ ಶನಿವಾರದಂದು ಜರುಗಿದ ಗುರುಸ್ಮರಣೆ ಕಾರ್ಯಕ್ರಮವನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಉದ್ಘಾಟಿಸಿ ಮಾತನಾಡಿದರು.

ಮೂಡಲಗಿ ವಲಯದಿಂದ ರಾಜ್ಯಕ್ಕೆ ಎಲ್ಲ ವಿಧದಲ್ಲೂ ಕೊಡುಗೆಗಳನ್ನು ನೀಡಲು ಶಿಕ್ಷಕರು ಪ್ರಾಮಾಣಿಕ ಪ್ರಯತ್ನ ನಡೆಸಬೇಕು. ಪ್ರತಿಯೊಬ್ಬರೂ ವಿದ್ಯಾವಂತರಾದರೆ ಮಾತ್ರ ಸಮಾಜ ಸುಧಾರಿಸಲು ಸಾಧ್ಯವಿದೆ. ಅದರಲ್ಲೂ ಶಿಕ್ಷಣದಿಂದ ಹಿಂದುಳಿದಿರುವ ತುಕ್ಕಾನಟ್ಟಿ ಜಿಲ್ಲಾ ಪಂಚಾಯತಿ ಕ್ಷೇತ್ರವನ್ನು ಸಂಪೂರ್ಣ ಸಾಕ್ಷರರನ್ನಾಗಿ ಮಾಡುವ ಸಂಕಲ್ಪ ಮಾಡಿದ್ದು, ಮುಂದಿನ ಗುರು ಸ್ಮರಣೆ ಕಾರ್ಯಕ್ರಮವು ಸಹ ಈ ವ್ಯಾಪ್ತಿಯ ದುರದುಂಡಿ ಗ್ರಾಮದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
2004 ರಿಂದ ಇಲ್ಲಿಯವರೆಗೆ ಒಟ್ಟು 22 ಹೊಸ ಸರ್ಕಾರಿ ಪ್ರೌಢ ಶಾಲೆಗಳನ್ನು ಆರಂಭಿಸಲಾಗಿದೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿಯೇ ಅತ್ಯಧಿಕ ಸರ್ಕಾರಿ ಪ್ರೌಢ ಶಾಲೆಗಳನ್ನು ಹೊಂದಿರುವ ವಲಯ ನಮ್ಮದಾಗಿದೆ. ಇದರ ಜೊತೆಗೆ ಒಟ್ಟು 9 ವಸತಿ ಶಾಲೆಗಳು ಹಾಗೂ ಒಂದು ವಸತಿ ರಹಿತ ಶಾಲೆಯನ್ನು ಮಂಜೂರು ಮಾಡಿಸಲಾಗಿದೆ. ಸರ್ಕಾರಿ ಶಾಲೆಗಳಲ್ಲಿಯೂ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿರುವುದರಿಂದ 50 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದು ಹೆಮ್ಮೆಯಾಗಿದೆ. ಕೌಜಲಗಿ, ಬಳೋಬಾಳ ಹಾಗೂ ಹಳ್ಳೂರ ಗ್ರಾಮಗಳಲ್ಲಿ ಹೊಸ ಪಿಯುಸಿ ಕಾಲೇಜುಗಳನ್ನು ಆರಂಭಿಸಲಾಗಿದೆ. ಮೂಡಲಗಿ ಪಟ್ಟಣಕ್ಕೆ ಸರ್ಕಾರಿ ಪದವಿ ಮಹಾವಿದ್ಯಾಲಯವನ್ನು ವಿದ್ಯಾರ್ಥಿಗಳಿಗೆ ಅರ್ಪಿಸಲಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ನಿವೃತ್ತ ಶಿಕ್ಷಕರು, ಸಾಧಕ ಶಿಕ್ಷಕರು-ವಿದ್ಯಾರ್ಥಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ ಸತ್ಕರಿಸಿ, ಗೌರವಿಸಿದರು.
ಕಾರ್ಯಕ್ರಮದ ಸಾನಿಧ್ಯವನ್ನು ತುಕ್ಕಾನಟ್ಟಿಯ ಶಾಂತಾನಂದ ಭಾರತಿ ಮಹಾಸ್ವಾಮಿಗಳು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಜಿಪಂ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ತಾಪಂ ಅಧ್ಯಕ್ಷೆ ಸುನಂದಾ ಕರದೇಸಾಯಿ, ಉಪಾಧ್ಯಕ್ಷ ಯಲ್ಲಪ್ಪ ನಾಯಿಕ, ಜಿಪಂ ಸದಸ್ಯ ಗೋವಿಂದ ಕೊಪ್ಪದ, ತುಕ್ಕಾನಟ್ಟಿ ಗ್ರಾಪಂ ಅಧ್ಯಕ್ಷೆ ಪಾರ್ವತಿ ನಾವಿ, ತಾಪಂ ಸದಸ್ಯ ಪರಶುರಾಮ ಗದಾಡಿ, ಗ್ರಾಪಂ ಮಾಜಿ ಅಧ್ಯಕ್ಷ ಸಿದ್ದಪ್ಪ ಹಮ್ಮನವರ, ತಾಪಂ ಮಾಜಿ ಅಧ್ಯಕ್ಷೆ ಸುಲೋಚನಾ ಶಿವಪ್ಪ ಮರ್ದಿ, ಪ್ರಕಾಶ ಬಾಗೇವಾಡಿ, ಭರಮಪ್ಪ ಉಪ್ಪಾರ, ಭೀಮಶಿ ಗದಾಡಿ, ಗ್ರಾಪಂ ಉಪಾಧ್ಯಕ್ಷೆ ಯಲ್ಲವ್ವ ಅಂಬಲಿ, ನಾಗನೂರ ಪಪಂ ಅಧ್ಯಕ್ಷೆ ಶೋಭಾ ಬಬಲಿ, ಘಯೋನೀಬಮ ಮಂಡಳ ಅಧ್ಯಕ್ಷ ಅಶೋಕ ಖಂಡ್ರಟ್ಟಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ಜಿಪಂ ಮಾಜಿ ಸದಸ್ಯರಾದ ಶಂಕರ ಬಿಲಕುಂದಿ, ವಿಠ್ಠಲ ಸವದತ್ತಿ, ಸುಧೀರ ಜೋಡಟ್ಟಿ, ಪರಮೇಶ ಹೊಸಮನಿ,

ಭೀಮಶಿ ಮಗದುಮ್ಮ, ಬಸವಂತ ಕಮತಿ, ರಾಮಣ್ಣಾ ಹುಕ್ಕೇರಿ, ಮುತ್ತೆಪ್ಪ ಕುಳ್ಳೂರ, ಹಣಮಂತ ತೇರದಾಳ, ಸುಭಾಸ ಕುರಬೇಟ, ಸಂತೋಷ ಸೋನವಾಲ್ಕರ, ನಿಂಗಪ್ಪ ಫಿರೋಜಿ, ರವಿ ಪರುಶೆಟ್ಟಿ, ಮಂಜುನಾಥ ಸಣ್ಣಕ್ಕಿ, ತಹಶೀಲ್ದಾರ ಜಿ.ಎಸ್. ಮಳಗಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ವ್ಹಿ. ಕಲ್ಲಪ್ಪನವರ, ಮೂಡಲಗಿ ಸಿಡಿಪಿಓ ವಾಯ್.ಎಂ. ಗುಜನಟ್ಟಿ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಮುಖಂಡರು ಹಾಗೂ ಶಿಕ್ಷಣ ಇಲಾಖೆಯ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಚಿಕ್ಕೋಡಿ ಉಪನಿರ್ದೇಶಕರ ಕಛೇರಿಯ ಇಓ ಅಜೀತ ಮನ್ನಿಕೇರಿ ಪ್ರಾಸ್ತಾವಿಕ ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಪಾರ ಕೊಡುಗೆ ನೀಡುತ್ತಿದ್ದಾರೆ. ಈ ವರ್ಷವೂ ಸಹ ಸ್ವಂತ ಹಣದಲ್ಲಿ ಸಾವಿರ ಬಿಸಿಯೂಟ ಮಹಿಳಾ ಸಿಬ್ಬಂದಿಯವರಿಗೆ ಸೀರೆಗಳನ್ನು ಗುರುಸ್ಮರಣೆ ಕಾರ್ಯಕ್ರಮದ ನೆನಪಿಗಾಗಿ ಕೊಡುಗೆ ನೀಡಿದ್ದಾರೆ. ತಮ್ಮ ತಾಯಿ-ತಂದೆ ಸ್ಮರಣಾರ್ಥ ಶ್ರೀಮತಿ ಭೀಮವ್ವಾ ಲಕ್ಷ್ಮಣರಾವ್ ಜಾರಕಿಹೊಳಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್‍ನಿಂದ 327 ಅತಿಥಿ ಶಿಕ್ಷಕರಿಗೆ 96 ಲಕ್ಷ ರೂ.ಗಳ ಗೌರವ ಧನವನ್ನು ವಿತರಿಸಿ ಶಿಕ್ಷಣ ಪ್ರೇಮಿಯಾಗಿದ್ದಾರೆ. ಇಂತಹ ಹೃದಯವಂತ ಶಾಸಕರನ್ನು ಪಡೆದಿರುವುದು ನಾವೆಲ್ಲ ಧನ್ಯರು ಎಂದು ಶ್ಲಾಘಿಸಿದರು.
ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಸಿ. ಗಂಗಾಧರ ಸ್ವಾಗತಿಸಿದರು.

Related posts: