ಮೂಡಲಗಿ :ತೋಟಗಾರಿಕಾ 10ನೇ ಅಂತರ ಮಹಾವಿದ್ಯಲಯಗಳ ಕ್ರೀಡಾಕೂಟ ಉದ್ಘಾಟನೆ
ತೋಟಗಾರಿಕಾ 10ನೇ ಅಂತರ ಮಹಾವಿದ್ಯಲಯಗಳ ಕ್ರೀಡಾಕೂಟ ಉದ್ಘಾಟನೆ
ಮೂಡಲಗಿ ಅ 6 : ದೈಹಿಕ ಶಿಕ್ಷಕರು ವಿದ್ಯಾರ್ಥಿಗಳ ಆರೋಗ್ಯದ ಬೆನ್ನೆಲುಬು. ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸುವಂತೆ ದೈಹಿಕ ಶಿಕ್ಷಕರು ಪ್ರೇರೇಪಿಸಬೇಕು ಎಂದು ಬಾಗಲಕೋಟ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ. ಎಮ್. ಇಂದಿರೇಶ. ಹೇಳಿದರು.
ಅವರು ಅರಬಾಂವಿ ಕಿತ್ತೂರು ರಾಣಿ ಚನ್ನಮ್ಮಾ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡ ತೋಟಗಾರಿಕಾ 10ನೇ ಅಂತರ ಮಹಾವಿದ್ಯಲಯಗಳ ಕ್ರೀಡಾಕೂಟವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಾಗಲಕೋಟ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಡೀನ್ ಡಾ. ಎಸ್.ಐ.ಅಥಣಿ ಮಾತನಾಡಿ, ಈ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡುವ ತಂಡಗಳನ್ನು ಜನೆವರಿ, 2019 ರಲ್ಲಿ ಜರುಗುವ ಅಖಿಲ ಭಾರತೀಯ ಕೃಷಿ ವಿಶ್ವವಿದ್ಯಾಲಯಗಳ ಕ್ರೀಡಾಕೂಟಕ್ಕೆ ಆಯ್ಕೆ ಮಾಡಲಾಗುವುದು ಎಂದರು.
ವೇದಿಕೆಯಲ್ಲಿ ತೋಟಗಾರಿಕಾ ವ್ಯವಸ್ಥಾಪನಾ ಮಂಡಳಿ ಸದಸ್ಯ ಶಂಕರಪ್ಪ ಬಸಪ್ಪ ಮಲಾಲಿ. ವಿಸ್ತರಣಾ ನಿರ್ದೇಶಕ ಡಾ. ವೈ. ಕೆ. ಕೋಟಿಕಲ್, ವಿಜಯಕುಮಾರ ಜೋತೆನ್ನವರ. ಡಾ. ಹೆಚ್.ಬಿ. ಪಾಟೀಲ ಡಾ. ಸಿ. ಎನ್. ಹಂಚಿನಮನಿ, ಕ್ರೀಡಾಕೂಟದ ಸಂಯೋಜಕ ಡಾ. ಎಸ್.ಜಿ.ಪ್ರವೀಣಕುಮಾರ, ಉಪಸ್ಥಿತರಿದ್ದರು.
ಕಿತ್ತೂರು ರಾಣಿ ಚನ್ನಮ್ಮಾ ತೋಟಗಾರಿಕಾ ಮಹಾವಿದ್ಯಾಲಯ, ಅರಭಾವಿಯ ಡೀನ್ ಹಾಗೂ ಕ್ರೀಡಾ ಸಂಘಟನಾ ಕಾರ್ಯದರ್ಶಿ ಡಾ. ನಾಗೇಶ ನಾಯ್ಕ ಇವರು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ವಿದ್ಯಾರ್ಥಿನಿಯರಾದ ಐಶ್ವರ್ಯ, ಪೂಜಾ ಹಾಗೂ ಸಂಗಡಿಗರು ಪ್ರಾರ್ಥನೆ ಹಾಗೂ ರೈತ ಗೀತೆಯನ್ನು ನಡೆಸಿಕೊಟ್ಟರು. ವಿದ್ಯಾರ್ಥಿನಿ ಜಶ್ವಿತಾ ಕ್ರೀಡಾಪಟುಗಳಿಗೆ ಕ್ರೀಡಾ ಪ್ರತಿಜ್ಞಾವಿಧಿಯನ್ನು ಎಲ್ಲಾ ಬೋಧಿಸಿದರು
ಈ ಕ್ರೀಡಾಕೂಟದಲ್ಲಿ 9 ತೋಟಗಾರಿಕಾ ವiಹಾವಿದ್ಯಾಲಯಗಳ ದೈಹಿಕ ಶಿಕ್ಷಕರು ಎಲ್ಲ ತಂಡಗಳ ಮುಖ್ಯಸ್ಥರು ಹಾಗೂ ಕಿತ್ತೂರು ರಾಣಿ ಚನ್ನಮ್ಮಾ ತೋಟಗಾರಿಕಾ ಮಹಾವಿದ್ಯಾಲಯದ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಸಹಾಯಕ ಪ್ರಾಧ್ಯಾಪಕರಾದ ಡಾ. ವಂದನಾ ನಿರೂಪಿಸಿದರು, ಸಹ ಪ್ರಾಧ್ಯಾಪಕರಾದ ಡಾ. ಕಾಂತರಾಜು, ವಿ. ವಂದಿಸಿದರು.