RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ಸರ್ಕಾರದಿಂದ ವಿಶ್ವಕರ್ಮ ಸಮುದಾಯದವರಿಗೆ ಸಿಗಬೇಕಾದ ಸಹಾಯ, ಸವಲತ್ತುಗಳಿಗೆ ಒಗ್ಗಟಿನಿಂದ ಹೋರಾಡೋಣಾ

ಗೋಕಾಕ:ಸರ್ಕಾರದಿಂದ ವಿಶ್ವಕರ್ಮ ಸಮುದಾಯದವರಿಗೆ ಸಿಗಬೇಕಾದ ಸಹಾಯ, ಸವಲತ್ತುಗಳಿಗೆ ಒಗ್ಗಟಿನಿಂದ ಹೋರಾಡೋಣಾ 

ಸರ್ಕಾರದಿಂದ ವಿಶ್ವಕರ್ಮ ಸಮುದಾಯದವರಿಗೆ ಸಿಗಬೇಕಾದ ಸಹಾಯ, ಸವಲತ್ತುಗಳಿಗೆ ಒಗ್ಗಟಿನಿಂದ ಹೋರಾಡೋಣಾ

ಬೆಟಗೇರಿ ಅ 9 : ಕರ್ನಾಟಕ ರಾಜ್ಯ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ವಿಶ್ವಕರ್ಮ ಸಮಾಜದ ಸಮಗ್ರ ಸಂಘಟನೆ ಹಾಗೂ ನಿಖರ ಜನಸಂಖ್ಯೆಯ ಜನಗಣತಿಯ ಅಗತ್ಯವಿದ್ದು, ವಿಶ್ವಕರ್ಮ ಸಮುದಾಯದ ಪ್ರತಿಯೊಬ್ಬರ ಸಹಾಯ ಸಹಕಾರ ಅತ್ಯಂತ ಅವಶ್ಯಕವಾಗಿದೆ ಎಂದು ಬೆಳಗಾವಿ ಜಿಲ್ಲಾ ವಿಶ್ವಕರ್ಮ ಯುವ ಮಿಲನ(ರಿ) ಘಟಕದ ಅಧ್ಯಕ್ಷ ಸಿದ್ಧಾರೂಢ ಬಡಿಗೇರ ಹೇಳಿದರು.
ಸಮೀಪದ ಕಲ್ಲೋಳಿ ಪಟ್ಟಣದ ಮೌನೇಶ್ವರ ದೇವಾಲಯದ ಸಭಾಂಗಣದಲ್ಲಿ ಬೆಳಗಾವಿ ಜಿಲ್ಲಾ ಹಾಗೂ ಗೋಕಾಕ ತಾಲೂಕಾ ವಿಶ್ವಕರ್ಮ ಯುವ ಮಿಲನ(ರಿ) ಘಟಕದ ಸಹಯೋಗದಲ್ಲಿ ಇದೇ ಸೋಮವಾರ ಅ.8 ರಂದು ನಡೆದ ಗೋಕಾಕ ಮತ್ತು ಮೂಡಲಗಿ ತಾಲೂಕಿನ ವಿಶ್ವಕರ್ಮ ಸಮುದಾಯದ ನಾಗರಿಕರ ಸಭೆಯ ಅಧ್ಯಕ್ಷತೆ ವಹಿಸಿದ ಅವರು ವಿಶ್ವಕರ್ಮ ಸಮಾಜದ ಜನಸಂಖ್ಯೆಯ ನಿಖರ ಜನಗಣತಿ ಮಾಹಿತಿ ಪತ್ರ ವಿತರಿಸಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ವಿಶ್ವಕರ್ಮ ಸಮುದಾಯದವರಿಗೆ ಸಿಗಬೇಕಾದ ಹಲವಾರು ಸಹಾಯ, ಸವಲತ್ತುಗಳ ಕುರಿತು ಎಲ್ಲರೂ ಒಗ್ಗಟ್ಟಾಗಿ ಹೊರಾಟ ಮಾಡೋಣ ಎಂದರು.
ಗೋಕಾಕ ತಾಲೂಕಾ ವಿಶ್ವಕರ್ಮ ಯುವ ಮಿಲನ(ರಿ)ಘಟಕದ ಅಧ್ಯಕ್ಷ ಶಿವರಾಜ ಪತ್ತಾರ ಸಭೆಯ ನೇತೃತ್ವ ವಹಿಸಿದ್ದರು. ಗೋಕಾಕ ತಾಲೂಕಾ ವಿಶ್ವಕರ್ಮ ಯುವ ಮಿಲನ(ರಿ) ಘಟಕದ ಸಂಚಾಲಕ ಸಂತೋಷ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೋಕಾಕ ಮತ್ತು ಮೂಡಲಗಿ ತಾಲೂಕಿನ ವಿಶ್ವಕರ್ಮ ಸಮುದಾಯದ ಹಿರಿಯ ನಾಗರಿಕರು, ಯುವಕರು ಬೆಳಗಾವಿ ಜಿಲ್ಲಾ ಹಾಗೂ ಗೋಕಾಕ ತಾಲೂಕಾ ವಿಶ್ವಕರ್ಮ ಯುವ ಮಿಲನ(ರಿ)ಘಟಕದ ಅಧ್ಯಕ್ಷರು, ಪದಾಧಿಕಾರಿಗಳ ಜೋತೆ ಹಲವಾರು ವಿಷಯಗಳ ಕುರಿತು ಚರ್ಚಿಸಿದರು.
ರಾಮಚಂದ್ರ ಬಡಿಗೇರ, ಲಕ್ಷ್ಮಣ ಬಡಿಗೇರ, ಮೌನೇಶ ಬಡಿಗೇರ, ಮಾರುತಿ ಬಡಿಗೇರ, ಬಾಳಪ್ಪ ಬಡಿಗೇರ, ಬೆಳಗಾವಿ ಜಿಲ್ಲಾ ಹಾಗೂ ಗೋಕಾಕ ತಾಲೂಕಾ ವಿಶ್ವಕರ್ಮ ಯುವ ಮಿಲನ(ರಿ) ಘಟಕದ ಪದಾಧಿಕಾರಿಗಳು, ಸದಸ್ಯರು, ಗೋಕಾಕ ಮತ್ತು ಮೂಡಲಗಿ ತಾಲೂಕಿನ ವಿಶ್ವಕರ್ಮ ಸಮುದಾಯದ ಹಿರಿಯ ನಾಗರಿಕರು, ಗಣ್ಯರು, ಯುವಕರು, ಮತ್ತೀತರರು ಇದ್ದರು.
ನಾರಾಯಣ ಪತ್ತಾರ ಸ್ವಾಗತಿಸಿದರು. ಅನಿಲ ಪತ್ತಾರ ಕಾರ್ಯಕ್ರಮ ನಿರೂಪಿಸಿದರು. ಮಹಾಂತೇಶ ಬಡಿಗೇರ ವಂದಿಸಿದರು.

Related posts: