ಗೋಕಾಕ:ದಿ.13ರಂದು ನವರಾತ್ರಿ ಹಬ್ಬದ ನಿಮಿತ್ಯ ವೈಸ್ ಆಫ್ ಪ್ರಭಾನಗರ ಕಾರ್ಯಕ್ರಮ
ದಿ.13ರಂದು ನವರಾತ್ರಿ ಹಬ್ಬದ ನಿಮಿತ್ಯ ವೈಸ್ ಆಫ್ ಪ್ರಭಾನಗರ ಕಾರ್ಯಕ್ರಮ
ಗೋಕಾಕ ಅ 9 : ತಾಲೂಕಿನ ಪ್ರಭಾ ನಗರ ಶುಗರ್ ಪ್ಯಾಕ್ಟರಿ ಶಿಂಗಳಾಪೂರದಲ್ಲಿ ದಿ.13ರಂದು ರಾತ್ರಿ 9 ಗಂಟೆಗೆ ನವರಾತ್ರಿ ನಾಡಹಬ್ಬ ಉತ್ಸವ ನಿಮಿತ್ಯ ಜಾರಕಿಹೊಳಿ ಸಹೋದರರ ಪ್ರೋತ್ಸಾಹದಡಿಯಲ್ಲಿ ಪ್ರಭಾ ನಗರ ಗೆಳೆಯರ ಬಳಗದ ವತಿಯಿಂದ ಪ್ರಥಮ ಬಾರಿಗೆ “ವೈಸ್ ಆಫ್ ಪ್ರಭಾನಗರ 2018” ಕನ್ನಡ ಚಿತ್ರಗೀತೆ (ಸೋಲೊ ಟ್ರ್ಯಾಕ್ ಸಿಂಗಿಂಗ್) ಸ್ಪರ್ಧೆ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭಕ್ಕೆ ವಿಶೇಷ ಅತಿಥಿಯಾಗಿ ಝೀ ಟಿವಿ ಸರಿಗಮಪ ಪ್ರತಿಭೆ ಲಕ್ಷ್ಮೀ ತಳವಾರ ಘೋಡಗೇರಿ ಆಗಮಿಸುವರು. ಅಧ್ಯಕ್ಷತೆಯನ್ನು ಮಡ್ಡೆಪ್ಪ ನಿಡಗುಂದಿ ವಹಿಸುವರು. ಉದ್ಘಾಟನೆಯನ್ನು ಭೀಮಶಿ ಈರಪ್ಪಗೋಳ ಉದ್ಘಾಟಿಸುವರು. ಜನಾರ್ಧನ ಅಥಣಿ ಜ್ಯೋತಿ ಬೆಳಗಿಸುವರು. ಪರುಶರಾಮ ಈರಪ್ಪಗೋಳ, ವಿಠ್ಠಲ ಮಾರ್ಯಾಗೋಳ, ದೇವಾನಂದ ಮಾಳಗಿ, ವಿಜಯ ಹಿರೇಹೊಳಿ,ಸಂತೋಷ ಕಟ್ಟಿಕಾರ ಉಪಸ್ಥಿತರಿರುವರು.
ಪ್ರಥಮ ಬಹುಮಾನ 7777/-ರೂ ನಗದು, ವಿ.ಎಂ.ಸೂರ್ಯವಂಶಿ, ಟ್ರೋಪಿಯನ್ನು ಮಹೆಬೂಬ ಮುಲ್ಲಾ ಇವರಿಂದ, ದ್ವೀತೀಯ ಬಹುಮಾನ 5555/- ರೂ. ನಗದು ಮಲ್ಲಿಕಾರ್ಜುನ, ವಾಳವೇಕರ ಪೆಂಡಾಲ ಸಪ್ಲಾಯರ್ ಗೋಕಾಕ ಹಾಗೂ ಟ್ರೋಪಿಯನ್ನು ಆನಂದ ಮಗದುಮ್ ಇವರಿಂದ, ತೃತೀಯ ಬಹುಮಾನ 3333/- ರೂ ನಗದು ಪ್ರಕಾಶ ಮೇಟಿ ಹಾಗೂ ಟ್ರೋಪಿ ಆನಂದ ಮಗದುಮ್ ಇವರಿಂದ ನೀಡಲಾಗುತ್ತದೆ.
ಸಂಚಾಲಕರಾಗಿ ಜಯಾನಂದ ಮಾದರ ಮತ್ತು ನಾರಾಯಣ ಜಾಧವ ಕಾರ್ಯ ನಿರ್ವಹಿಸುವರು. ಹೆಚ್ಚಿನ ಮಾಹಿತಿಗಾಗಿ ಲಕ್ಷ್ಮಣ ಗುಡದಾರ ಮೋ: 8971795027, ಗೋಪಾಲ ಬಿಲಕುಂದಿ ಮೋ: 9632835897 ಸಂಪರ್ಕಿಸಲು ಪ್ರಕಟನೆಯಲ್ಲಿ ತಿಳಿಸಿದ್ದಾರೆ.