ಗೋಕಾಕ:ನಾಲ್ಕು ಮರಿಗಳಿಗೆ ಜನ್ಮ ನೀಡಿದ ಮೇಕೆ..!!
ನಾಲ್ಕು ಮರಿಗಳಿಗೆ ಜನ್ಮ ನೀಡಿದ ಮೇಕೆ..!!
ಬೆಟಗೇರಿ ಅ 10 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಪ್ರಗತಿಪರ ರೈತ ಭೀಮಶೆಪ್ಪ ತಮ್ಮಣ್ಣ ಹೊಂಗಲ ಇವರು ಸಾಕಿದ ಮೇಕೆಯೊಂದು. ಮೂರು ಗಂಡು, ಒಂದು ಹೆಣ್ಣು ಮೇಕೆ ಸೇರಿ ಒಟ್ಟು ನಾಲ್ಕು ಮರಿಗಳಿಗೆ ಸೋಮವಾರ ಅ.8 ರಂದು ಜನ್ಮ ನೀಡಿ ಆಶ್ಚರ್ಯ ಮೂಡಿಸಿದೆ.
ಕಳೆದ ಭಾರಿ ಇದೇ ಆಡು ಮೂರು ಮರಿಗಳಿಗೆ ಜನ್ಮ ನೀಡಿತ್ತು. ಈ ಸಲ ನಾಲ್ಕು ಮರಿಗಳಿಗೆ ಜನ್ಮ ನೀಡಿ ವಿಸ್ಮಯ ಮೂಡಿಸಿದೆ ಎಂದು ಮೇಕೆ ಮಾಲೀಕ ಭೀಮಶೆಪ್ಪ ಹೊಂಗಲ ಅವರು ಹೇಳುವ ಮಾತು. ಮೇಕೆ ಮೂರು ಮರಿಗಳಿಗೆ ಜನ್ಮ ನೀಡುವದು ಸಾಮಾನ್ಯ ಸಂಗತಿ ಆದರೆ ಇಲ್ಲಿಯ ಭೀಮಶೆಪ್ಪ ಹೊಂಗಲ ಅವರ ಸಾಕಿದ ಮೇಕೆ ನಾಲ್ಕು ಮರಿಗಳಿಗೆ ಜನ್ಮ ನೀಡುವದು ವಿಶೇಷವಾಗಿದೆ. ಈ ನಾಲ್ಕು ಮೇಕೆ ಮರಿಗಳು ಆರೋಗ್ಯವಾಗಿವೆ ಎಂದು ಸ್ಥಳೀಯ ಪಶು ಚಿಕಿತ್ಸಾ ಕೇಂದ್ರದ ವೈದ್ಯಾಧಿಕಾರಿ ಧರೆಪ್ಪ ಹೊಸಮನಿ ತಿಳಿಸಿದ್ದಾರೆ.