ಮೂಡಲಗಿ:ನವರಾತ್ರಿ ಉತ್ಸವಕ್ಕೆ ನಾಟ್ಯಂಜಲಿ ನೃತ್ಯಸಂಘದ ಕಲಾವಿದರಿಂದ ಚಾಲನೆ
ನವರಾತ್ರಿ ಉತ್ಸವಕ್ಕೆ ನಾಟ್ಯಂಜಲಿ ನೃತ್ಯಸಂಘದ ಕಲಾವಿದರಿಂದ ಚಾಲನೆ
ಮೂಡಲಗಿ ಅ 11 : ಪಟ್ಟಣದ ಬಸವಮಂಟಪದಲ್ಲಿ ನವರಾತ್ರಿ ಉತ್ಸವ ಸಮಿತಿಯಿಂದ ನವರಾತ್ರಿ ಉತ್ಸವದ ಅಂಗವಾಗಿ ಅಯೋಜಿಸಿರುವ ಮನೋರಂಜನೆ ಕಾರ್ಯಕ್ರಮಕ್ಕೆ ಬುಧವಾರ ಸಂಜೆ ಚಾಲನೆ ನೀಡಲಾಯಿತು.
ಗೋಕಾಕಿನ ನಾಟ್ಯಂಜಲಿ ನೃತ್ಯಸಂಘದ ಕಲಾವಿದರಿಂದ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ವಿವಿಧ ಕಡೆಗಳಿಂದ ಆಗಮಿಸಿದ ಕಲಾವಿದರಿಂದ ಭರತನಾಟ್ಯ ಕಾರ್ಯಕ್ರಮ ಜರುಗಿತು. ಜಾನಪದ ಗಾಯಕರಾದ ಅಯೂಬ ಕಲಾರಕೊಪ್ಪ ತಮ್ಮ ಜಾನಪದ ಹಾಡಿನ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಈ ಸಂದರ್ಭದಲ್ಲಿ, ನಾಟ್ಯ ಸಂಘದ ಹನುಮಂತ ಗೋಕಾವಿ, ಕೃಷಿ ಅಧಿಕಾರಿ ಆರ್.ಜಿ ನಾಗನ್ನವರ, ಕೃಷ್ಣ ನಾಶಿ, ಜಗದೀಶ ತೇಲಿ, ಆನಂದ ಗಿರಡ್ಡಿ, ಚೇತನ ನಿಶಾನಿಮಠ, ಕುಮಾರ ಗಿರಡ್ಡಿ, ಅಜ್ಜಪ್ಪ ಅಂಗಡಿ, ಅಜ್ಜಪ್ಪ ಬಳೆಗಾರ, ಯಲ್ಲಪ್ಪ ಪೂಜೇರಿ, ಬಸವರಾಜ ತಳವಾರ ಹಾಗೂ ಉತ್ಸವ ಕಮಿಟಿಯ ಸರ್ವ ಸದಸ್ಯರು ನೂರಾರು ಭಕ್ತರು ಪಾಲ್ಗೋಂಡಿದ್ದರು. ಶಿಕ್ಷಕ ಬಸವರಾಜ ಸಸಾಲಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಇಂದಿನ ಕಾರ್ಯಕ್ರಮ: ಸುನೀಲ ಸಣ್ಣಕ್ಕಿ, ಶಿವಾಜಿ ಸಾಳಂಕೆ ತಂಡದವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.