RNI NO. KARKAN/2006/27779|Friday, October 18, 2024
You are here: Home » breaking news » ಮೂಡಲಗಿ:ಗುರ್ಲಾಪೂರ ಅಭಿವೃದ್ಧಿಗಾಗಿ ಸರ್ಕಾರದ ವಿವಿಧ ಯೋಜನೆಗಳನ್ನು ಅನುಷ್ಠಾನ ಮಾಡಲಾಗುವುದು : ಶಾಸಕ ಬಾಲಚಂದ್ರ

ಮೂಡಲಗಿ:ಗುರ್ಲಾಪೂರ ಅಭಿವೃದ್ಧಿಗಾಗಿ ಸರ್ಕಾರದ ವಿವಿಧ ಯೋಜನೆಗಳನ್ನು ಅನುಷ್ಠಾನ ಮಾಡಲಾಗುವುದು : ಶಾಸಕ ಬಾಲಚಂದ್ರ 

ಗುರ್ಲಾಪೂರ ಅಭಿವೃದ್ಧಿಗಾಗಿ ಸರ್ಕಾರದ ವಿವಿಧ ಯೋಜನೆಗಳನ್ನು ಅನುಷ್ಠಾನ ಮಾಡಲಾಗುವುದು : ಶಾಸಕ ಬಾಲಚಂದ್ರ

ಮೂಡಲಗಿ ಅ 15 : ಗುರ್ಲಾಪೂರ ಪಟ್ಟಣದ ಅಭಿವೃದ್ಧಿಗಾಗಿ ಸರ್ಕಾರದ ವಿವಿಧ ಯೋಜನೆಗಳನ್ನು ಅನುಷ್ಠಾನ ಮಾಡಲಾಗುವುದು. ಕಳೆದ ಪುರಸಭೆ ಚುನಾವಣೆಯಲ್ಲಿ ಪಟ್ಟಣದ ಮೂರು ವಾರ್ಡಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿರುವುದರಿಂದ ನಮಗೆ ಆನೆಬಲ ಬಂದಂತಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹರ್ಷ ವ್ಯಕ್ತಪಡಿಸಿದರು.
ಶನಿವಾರ ರಾತ್ರಿ ಇಲ್ಲಿಯ ಮಾರುತಿ ದೇವರ ಮಂಟಪದಲ್ಲಿ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಗಳಿಸಿದ ನಿಮಿತ್ಯ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು, ಗುರ್ಲಾಪೂರದಲ್ಲಿ ಸ್ಪರ್ಧಿಸಿದ ಮೂರೂ ವಾರ್ಡುಗಳಲ್ಲಿ ಎಲ್ಲ ಬಿಜೆಪಿ ಅಭ್ಯರ್ಥಿಗಳು ಗೆಲ್ಲಿಸಿರುವುದರಿಂದ ಮತದಾರರಿಗೆ ಚಿರಋಣಿಯಾಗಿರುವುದಾಗಿ ಹೇಳಿದರು.
ಮೂಡಲಗಿ ಪುರಸಭೆಯ ವ್ಯಾಪ್ತಿಯಲ್ಲಿ ಒಳಪಟ್ಟಿರುವ ಗುರ್ಲಾಪೂರ ಪಟ್ಟಣದ ಅಭಿವೃದ್ಧಿಯಲ್ಲಿ ಗ್ರಾಮಸ್ಥರು ನಮ್ಮೊಂದಿಗೆ ಸಹಕರಿಸಬೇಕು. ಈ ಹಿಂದೆ ನೀಡಿರುವ ಸಹಕಾರವನ್ನು ಮುಂದೆಯೂ ನೀಡಬೇಕು. ಸಮಗ್ರ ಮೂಡಲಗಿ ಪಟ್ಟಣದ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಂಡಿರುವುದಾಗಿ ಹೇಳಿದರು.
ಚುನಾವಣೆಯಲ್ಲಿ ಪ್ರತಿಯೊಬ್ಬರೂ ನಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಸಾಕಷ್ಟು ಪರಿಶ್ರಮಿಸಿದ್ದಾರೆ. ಕಾರ್ಯಕರ್ತರ ಒಗ್ಗೂಡಿಕೆ ಹಾಗೂ ಮುಖಂಡರ ಒಗ್ಗಟ್ಟಿನಿಂದ 21, 22 ಹಾಗೂ 23 ರ ವಾರ್ಡಗಳಲ್ಲಿ ಪಕ್ಷ ಜಯಗಳಿಸಲು ಕಾರಣವಾಯಿತು. ಪಟ್ಟಣದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದ್ದು, ಬದ್ಧತೆಯ ಆಧಾರದಲ್ಲಿ ಗುರ್ಲಾಪೂರದ ಸರ್ವಾಂಗೀಣ ಪ್ರಗತಿಗಾಗಿ ಶ್ರಮಿಸುವ ವಾಗ್ದಾನ ಮಾಡಿದರು.
ಮೂಡಲಗಿ ಪುರಸಭೆ ಮಾಜಿ ಅಧ್ಯಕ್ಷರಾದ ವೀರಣ್ಣಾ ಹೊಸೂರ, ಕಮಲವ್ವ ಹಳಬರ, ಪ್ರಭಾಶುಗರ ನಿರ್ದೇಶಕ ಮಲ್ಲಿಕಾರ್ಜುನ ಕಬ್ಬೂರ, ನೂತನ ಪುರಸಭೆ ಸದಸ್ಯರಾದ ಸಂತೋಷ ಸೋನವಾಲಕರ, ಗಂಗವ್ವ ಮುಗಳಖೋಡ, ಯಲ್ಲವ್ವ ಹಳ್ಳೂರ, ಆನಂದ ಟಪಾಲ, ಮುಖಂಡರಾದ ಸಿದ್ಧು ಗಡೇಕರ, ಶಿವಲಿಂಗ ಪುಠಾಣಿ, ರವಿ ಶಾಬನ್ನವರ, ವಿಠ್ಠಲ ಜಾಧವ, ಲಕ್ಷ್ಮಣ ಹಳ್ಳೂರ, ಶಿವಾನಂದ ಹಳ್ಳೂರ, ರಾಜು ಕುಲಗೋಡ, ಶ್ರೀಶೈಲ ಮುಗಳಖೋಡ, ಸುರೇಶ ನೇಮಗೌಡರ, ಲಕ್ಷ್ಮಣ ಗೌರಾಣಿ, ಅಶೋಕ ಕೌಜಲಗಿ, ಮಹಾದೇವ ರಂಗಾಪೂರ, ದೇವರಮನಿ, ಮಲ್ಲಪ್ಪ ಮುತ್ತೆಪ್ಪಗೋಳ, ಶಿವಬಸು ದಂಡಿನವರ, ಸದಾಶಿವ ನೇಮಗೌಡರ, ಭೀಮಪ್ಪ ಮರಾಠೆ, ಪ್ರಕಾಶ ಮುಗಳಖೋಡ, ಶಂಕರ ಹಳಂಗಳಿ, ಅಡಿವೆಪ್ಪ ಫಾಲಬಾಂವಿ, ಶಿವದುಂಡು ಕೊಂಗಾಲಿ, ಡಾ.ಎಸ್.ಎಸ್. ಪಾಟೀಲ, ಜಿಪಂ ಮಾಜಿ ಸದಸ್ಯ ಭೀಮಶಿ ಮಗದುಮ್ಮ, ಘಯೋಮನೀಬ ಮಹಾಮಂಡಳ ಅಧ್ಯಕ್ಷ ಅಶೋಕ ಖಂಡ್ರಟ್ಟಿ, ಮುಂತಾದವರು ಉಪಸ್ಥಿತರಿದ್ದರು.

Related posts: