ಮೂಡಲಗಿ:ಡಾ. ಅಶೋಕ ದಳವಾಯಿಯವರು ವಿಶ್ವ ಆಹಾರ ಪ್ರಶಸ್ತಿ ಪ್ರಧಾನ ಸಮ್ಮೇಳನಕ್ಕೆ ಆಯ್ಕೆ
ಡಾ. ಅಶೋಕ ದಳವಾಯಿಯವರು ವಿಶ್ವ ಆಹಾರ ಪ್ರಶಸ್ತಿ ಪ್ರಧಾನ ಸಮ್ಮೇಳನಕ್ಕೆ ಆಯ್ಕೆ
ಮೂಡಲಗಿ ಅ 15 : ಅಕ್ಟೋಬರ 17,18 & 19 ರಂದು ಅಮೇರಿಕೆಯ ಅಯೋವಾ ರಾಜ್ಯದ ಡೆಸ್ಮೋನ್ ನಗರದಲ್ಲಿ ವಿಶ್ವ ಆಹಾರ ಪ್ರತಿಷ್ಟಾನದವರು ಜಾಗತಿಕ ಮಟ್ಟದಲ್ಲಿ ಕೃಷಿ ಕ್ಷೇತ್ರದಲ್ಲಿ ಅತ್ಯುನ್ನತ ಸಾದನೆಗೈದವರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ” ಜಾಗತಿಕ ಕೃಷಿ ಬಿಕ್ಕಟ್ಟು ಮತ್ತು ಸವಾಲುಗಳು ” ಕುರಿತು ವಿಷಯ ಮಂಡಿಸಲು ಭಾರತ ಸರಕಾರದ ಕಾರ್ಯದರ್ಶಿಯಾಗಿರುವ ಡಾ. ಅಶೋಕ ದಳವಾಯಿಯವರು ಭಾರತೀಯ ಪ್ರತಿನಿಧಿಯಾಗಿ ದಿಕ್ಸೂಚಿ ಭಾಷಣಕಾರರಾಗಿ ಆಯ್ಕೆಯಾಗಿದ್ದಾರೆ.
ಪ್ರತಿವರ್ಷ ವಿಶ್ವ ಆಹಾರ ಪ್ರತಿಷ್ಠಾನದ ಜಾಗತಿಕ ಮಟ್ಟದಲ್ಲಿ ಕೃಷಿ ಕ್ಷೇತ್ರದಲ್ಲಿ ಅತ್ಯುನ್ನತ ಸಾದನೆಗೈದವರನ್ನು ಗುರುತಿಸಿ ಬ್ರಿಟಿಷ್ ವಿಜ್ಞಾನಿ ಲಾರೆನ್ಸ ಎಚ್ ಮತ್ತು ದಕ್ಷಿಣ ಆಪ್ರಿಕಾದ ಡೆವಿಡ್ ನಬಾರೊ ಅವರಿಗೆ ಸಂಯುಕ್ತವಾಗಿ ಘೋಷಿಸಲಾಗಿದೆ. ಈ ಪ್ರಶಸ್ತಿಯು ಕೃಷಿ ಕ್ಷೇತ್ರದಲ್ಲಿ ನೋಬೆಲ್ ಪಾರಿತೋಷಕಕ್ಕೆ ಪರ್ಯಾಯ ಪ್ರಶಸ್ತಿಯಂದು ಪರಿಗಣಿಸಲಾಗಿದೆ. ದಳವಾಯಿಯವರು ಪ್ರಧಾನಮಂತ್ರಿಯ ಮಹತ್ವಾಕಾಂಕ್ಷೆಯ ಯೋಜನೆಯಾದ ರೈತರ ಆದಾಯ ದ್ವಿಗುಣ ಸಮೀತಿಯ ಅದ್ಯಕ್ಷರಾಗಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಅವರನ್ನು ಈ ಸಮ್ಮೇಳನಕ್ಕೆ ಆಹ್ವಾನಿಸಲಾಗಿದೆ.