ಬೆಳಗಾವಿ:ನ.1 ರಂದು ಕರಾಳ ದಿನಾಚರಣೆ ಆಚರಿಸಲು ಜಿಲ್ಲಾಧಿಕಾರಿಗೆ ಎಂಇಎಸ್ ಮನವಿ
ನ.1 ರಂದು ಕರಾಳ ದಿನಾಚರಣೆ ಆಚರಿಸಲು ಜಿಲ್ಲಾಧಿಕಾರಿಗೆ ಎಂಇಎಸ್ ಮನವಿ
ಬೆಳಗಾವಿ ಅ 15 : ಜಿಲ್ಲೆಯಲ್ಲಿ ಮತ್ತೆ ಕ್ಯಾತೆ ತಗೆದಿರುವ ಎಂಇಎಸ್ ನವೆಂಬರ್ 1 ರಂದು ಕರಾಳ ದಿನಾಚಾರಣೆ ಆಚರಣೆ ಮಾಡಲು ಬೆಳಗಾವಿ ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿಕೊಂಡಿದೆ
,ರಾಜ್ಯ ಪುನರ್ ರಚನೆಯಲ್ಲಿ ಮರಾಠಿ ಭಾಷಿಕರಿಗೆ ಅನ್ಯಾಯವಾಗಿದೆ. ಹಾಗಾಗಿ ನ. 1ರಂದು ಕರಾಳ ದಿನಾಚರಣೆ ಆಚರಿಸಲು ಅನುಮತಿ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡರು. ಎಂಇಎಸ್ ಮುಖಂಡರಾದ ಮಾಜಿ ಶಾಸಕ ಮನೋಹರ ಕಿಣೇಕರ್, ದೀಪಕ್ ದಳವಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಕರಾಳ ದಿನಕ್ಕೆ ಅನುಮತಿ ಕೊಡುವ ಬಗ್ಗೆ ಪೊಲೀಸ್ ಆಯುಕ್ತರ ಜೊತೆಗೆ ಚರ್ಚೆ ನಡೆಸುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.