RNI NO. KARKAN/2006/27779|Thursday, December 12, 2024
You are here: Home » breaking news » ಘಟಪ್ರಭಾ:ನ.1 ರಂದು ಕರಾಳ ದಿನಾಚರಣೆಗೆ ಅನುಮತಿ ನೀಡಬಾರದು: ಯುವ ಸೇನೆ ಒತ್ತಾಯ

ಘಟಪ್ರಭಾ:ನ.1 ರಂದು ಕರಾಳ ದಿನಾಚರಣೆಗೆ ಅನುಮತಿ ನೀಡಬಾರದು: ಯುವ ಸೇನೆ ಒತ್ತಾಯ 

ನ.1 ರಂದು ಕರಾಳ ದಿನಾಚರಣೆಗೆ ಅನುಮತಿ ನೀಡಬಾರದು: ಯುವ ಸೇನೆ ಒತ್ತಾಯ

ಘಟಪ್ರಭಾ ಅ 16 : ನ.1 ರಂದು ಕರಾಳ ದಿನಾಚರಣೆಗೆ ಮುಂದಾಗಿರುವ ನಾಡ ದ್ರೋಹಿ ಎಂ.ಇ.ಎಸ್ ಸಂಘಟನೆಗೆ ಸರ್ಕಾರ ಅನುಮತಿ ನೀಡಬಾರದು ಎಂದು ಕರ್ನಾಟಕ ಯುವ ಸೇನೆ ಜಿಲ್ಲಾಧ್ಯಕ್ಷ ವೀರಣ್ಣಾ ಸಂಗಮನವರ ಒತ್ತಾಯಿಸದರು.
ಅವರು ಸೋಮವಾರ ಧುಪದಾಳ ಪ್ರವಾಸಿ ಮಂದಿರದಲ್ಲಿ ಜರುಗಿದ ಕರ್ನಾಟಕ ಯುವ ಸೇನೆ ಸಂಘಟನೆಯ ಕರ್ನಾಟಕ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತ, ನಾಡ ದ್ರೋಹಿ ಎಂ.ಇ.ಎಸ್‍ನವರು ಪದೇ ಪದೇ ಗಡಿ ವಿಚಾರವನ್ನು ಮುಂದಿಟ್ಟುಕೊಂಡು ಕ್ಯಾತೆ ತೆಗೆಯುತ್ತಿದ್ದಾರೆ. ಸರ್ಕಾರ ಈ ಸಂಘಟನೆಯನ್ನು ಕೂಡಲೇ ನಿಷೇಧಿಸಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ರಾಜ್ಯ ಉಪಾಧ್ಯಕ್ಷ ಕೆಂಪಣ್ಣಾ ಚೌಕಶಿ ಮಾತನಾಡಿ, ರಾಜ್ಯದಲ್ಲಿ ಗಡಿ ಹಾಗೂ ಭಾಷೆ ವಿಚಾರ ಬಂದಾಗ ಎಲ್ಲರೂ ಒಂದಾಗಬೇಕು. ನಾಡ ದ್ರೋಹಿ ಎಂ.ಇ.ಎಸ್‍ನವರು ಆಚರಿಸಲು ನಿರ್ಧಸಿರುವ ಕರಾಳ ದಿನಾಚರಣೆ ವಿರುದ್ಧವಾಗಿ ಈ ಭಾರಿ ರಾಜ್ಯೋತ್ಸವನ್ನು ಅದ್ದೂರಿಯಾಗಿ ಆಚರಿಸಲಾಗುವುದು. ನ.1 ರಂದು ತಾಯಿ ಭುವನೇಶ್ವರಿಯ ಭಾವ ಚಿತ್ರದ ಭವ್ಯ ಮೆರವಣಿಗೆಯನ್ನು ಸಂಘಟನೆಯಿಂದ ಹಮ್ಮಿಕೊಳ್ಳುಲಾಗುವುದು. ಅಲ್ಲದೇ ರಾಜ್ಯೋತ್ಸವ ಆಚರಿಸಿಕೊಂಡು ಬಂದಿರುವ ಕನ್ನಡಪರ ಸಂಘಟನೆಗಳಿಗೆ ಸರ್ಕಾರ ಹೆಚ್ಚಿನ ಅನುದಾನ ನೀಡಿ ಪ್ರೋತ್ಸಾಹಿಸಬೇಕೆಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ತಾಲೂಕಗಳ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಬೈಲಹೊಂಗಲ ತಾಲೂಕಾಧ್ಯಕ್ಷರಾಗಿ ಸುರೇಶ ಕೊಂಡುರ, ಉಪಾಧ್ಯಕ್ಷರಾಗಿ ರಮೇಶ ಸಂಕನ್ನವರ, ಪ್ರಧಾನ ಕಾರ್ಯದರ್ಶಿಯಾಗಿ ರವಿ ಸಂಕನ್ನವರ ಮತ್ತು ಹುಕ್ಕೇರಿ ತಾಲೂಕಾಧ್ಯಕ್ಷರಾಗಿ ಸಲೀಮ ಮುಲ್ಲಾ ಉಪಾಧ್ಯಕ್ಷರಾಗಿ ರಮಜಾನ ಮುಜಾವರ, ಪ್ರ.ಕಾರ್ಯದರ್ಶಿಯಾಗಿ ಮೋಶಿನ ಮುಲ್ಲಾ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಭರಮಣ್ಣಾ ಗಾಡಿವಡ್ಡರ, ಅಖಿಲೇಶ ಕಪರಟ್ಟಿ, ಸುರೇಶ ಚಿಗಡೊಳ್ಳಿ, ಫರೀದಾ ಮುಲ್ಲಾ, ದಸ್ತಗೀರ ಜಮಾದಾರ, ಪ್ರಶಾಂತ ದಡ್ಡಿಮನಿ, ಶಂಕರ ಮುಗ್ಗನ್ನವರ, ಸಾಯಣ್ಣಾ ಕೋಮಾರಿ, ನೀತಿನ ದೇಶಪಾಂಡೆ, ರಾಮು ನಾಯಿಕ, ಪಾಂಡುರಂಗ ಹಿಪ್ಪರಗಿ, ರಾಜು ಕೊಂಡೂರ, ಸುರೇಶ ಡೊಕ್ಕನ್ನವರ, ಯಲ್ಲಪ್ಪಾ ಕೊಂಡೂರ, ಸಾಹಿಪ ಮುಜಾವರ ಸೇರಿದಂತೆ ಅನೇಕರು ಇದ್ದರು.

Related posts: