ಮೂಡಲಗಿ:ಮಹಾವಿದ್ಯಾಲಯದ ಹೆಚ್ಚುವರಿ ಕೊಠಡಿಗಳ ಕಾಮಗಾರಿಗೆ ಗುದ್ದಲಿ ಪೂಜೆ
ಮಹಾವಿದ್ಯಾಲಯದ ಹೆಚ್ಚುವರಿ ಕೊಠಡಿಗಳ ಕಾಮಗಾರಿಗೆ ಗುದ್ದಲಿ ಪೂಜೆ
ಮೂಡಲಗಿ ಅ 19 : ಇಲ್ಲಿಯ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಹೆಚ್ಚುವರಿ ಕೊಠಡಿಗಳ ಕಾಮಗಾರಿಗೆ ಗುರುವಾರದಂದು ಗುದ್ದಲಿ ಪೂಜೆ ನೆರವೇರಿಸಲಾಯಿತು.
ಸ್ಥಳೀಯ ಶಿವಬೋಧರಂಗ ಮಠದ ಶ್ರೀಧರ ಸ್ವಾಮೀಜಿಯವರು ಗುದ್ದಲಿ ಪೂಜೆ ನೆರವೇರಿಸಿದರು.
ಕಾಲೇಜಿನ ಸಲಹಾ ಸಮೀತಿ ಸದಸ್ಯರಾದ ಚಂದ್ರು ಗಾಣಿಗ, ಗೊಡಚೆಪ್ಪ ಮುರಗೇರ, ಸಿದ್ದು ಕೋಟಗಿ, ಸಿದ್ದು ಕಪ್ಪಲಗುದ್ದಿ, ಸಂಜು ಮೋಕಾಶಿ, ಪ್ರಾಂಶುಪಾಲ ಡಾ.ಆರ್.ಬಿ. ಕೊಕಟನೂರ, ಎನ್‍ಎಸ್‍ಎಫ್ ಅತಿಥಿ ಗೃಹದ ದಾಸಪ್ಪ ನಾಯಿಕ, ಕೆಂಪಣ್ಣಾ ಕೊಣ್ಣೂರ, ಮುಂತಾದವರು ಉಪಸ್ಥಿತರಿದ್ದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದ ಬೆಂಗಳೂರು ಕಾಲೇಜು ಶಿಕ್ಷಣ ಇಲಾಖೆಯಿಂದ ಮಹಾವಿದ್ಯಾಲಯದ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕಾಗಿ 2 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ 18 ಕೊಠಡಿಗಳು ನಿರ್ಮಾಣವಾಗಲಿವೆ. ಈಗಾಗಲೇ ಬಾಲಚಂದ್ರ ಜಾರಕಿಹೊಳಿ ಅವರು ಮಹಾವಿದ್ಯಾಲಯಕ್ಕೆ 50 ಲಕ್ಷ ರೂ. ವೆಚ್ಚದ ಗ್ರಂಥಾಲಯ ಕಟ್ಟಡ ಹಾಗೂ 68 ಲಕ್ಷ ರೂ. ವೆಚ್ಚದ ಹೆಚ್ಚುವರಿ ಕೊಠಡಿ ಕಾಮಗಾರಿಗಳು ಪ್ರಗತಿಯಲ್ಲಿವೆ.