ಗೋಕಾಕ:ಸಿಡಿಲು ಬಡಿದು ಮೃತಪಟ್ಟ ಕುಟುಂಬಗಳಿಗೆ ತಲಾ 5 ಲಕ್ಷ ರೂ.ಗಳ ಪರಿಹಾರ ಧನ ವಿತರಣೆ
ಸಿಡಿಲು ಬಡಿದು ಮೃತಪಟ್ಟ ಕುಟುಂಬಗಳಿಗೆ ತಲಾ 5 ಲಕ್ಷ ರೂ.ಗಳ ಪರಿಹಾರ ಧನ ವಿತರಣೆ
ಗೋಕಾಕ ಅ 19 : ಕಳೆದ ದಿ.16 ರಂದು ಸಂಜೆ ಸುರಿದ ಭಾರಿ ಗುಡುಗು ಸಿಡಿಲಿನ ಮಳೆಯಿಂದ ಸಿಡಿಲು ಬಡಿದು ಮೃತಪಟ್ಟ ತಾಲೂಕಿನ ತಪಸಿ ಗ್ರಾಮದ ವಾರೆಪ್ಪ ನಾಗಪ್ಪ ಕಟ್ಟಿಕಾರ ಹಾಗೂ ಬಿಲಕುಂದಿ ಗ್ರಾಮದ ಶೋಭಾ ಅವ್ವಣ್ಣಾ ಕಳ್ಳಿಗುದ್ದಿ ಅವರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ.ಗಳ ಪರಿಹಾರ ಧನವನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಿತರಿಸಿದರು.
ನಂತರ ಮಾತನಾಡಿದ ಅವರು, ಮೃತಪಟ್ಟ ಕುಟುಂಬಗಳಿಗೆ ಸಾಂತ್ವನ ಹೇಳಿದರು. ಸಿಡಿಲು ಬಡಿದು ಮೃತಪಟ್ಟ ಕುಟುಂಬಗಳಿಗೆ ಒಟ್ಟು 10 ಲಕ್ಷ ರೂ.ಗಳು ಕಂದಾಯ ಇಲಾಖೆಯಿಂದ ಬಿಡುಗಡೆಯಾಗಿದೆ. ಈ ಪರಿಹಾರ ಧನವನ್ನು ಕುಟುಂಬದ ಉಪಜೀವನಕ್ಕಾಗಿ ವಿನಿಯೋಗಿಸಿಕೊಳ್ಳುವಂತೆ ಕುಟುಂಬಸ್ಥರಿಗೆ ಹೇಳಿದರು.
ತಹಶೀಲ್ದಾರ ಜಿ.ಎಸ್. ಮಳಗಿ, ಮುಖಂಡ ಡಾ||ರಾಜೇಂದ್ರ ಸಣ್ಣಕ್ಕಿ, ತಹಶೀಲ್ದಾರ ಗ್ರೇಡ್-2 ಲಕ್ಷ್ಮಣ ಭೋವಿ, ಗೋಸಬಾಳ ಗ್ರಾಪಂ ಅಧ್ಯಕ್ಷ ಶಿವಲಿಂಗ ಬಳಿಗಾರ, ಕೌಜಲಗಿ ನಾಡಕಚೇರಿಯ ಉಪತಹಶೀಲ್ದಾರ ಎಂ.ಐ. ಹಿರೇಮಠ, ಲಕ್ಷ್ಮಣ ಅರಬನ್ನವರ, ಮುತ್ತೆಪ್ಪ ಮನ್ನಾಪೂರ, ರಾಯಪ್ಪ ತಿರಕನ್ನವರ, ಲಕ್ಷ್ಮಣ ಯಳ್ಳೂರ, ಬಸಪ್ಪ ಕಟ್ಟಿಕಾರ, ವಿಠ್ಠಲ ಕಂಬಾರ, ಲಕ್ಕಪ್ಪ ಕಟ್ಟಿಕಾರ, ಲಕ್ಕಪ್ಪ ಕುರೇರ, ಗಣಪತಿ ಕಟ್ಟಿಕಾರ, ಬಸಪ್ಪ ಕಳ್ಳಿಗುದ್ದಿ, ಪ್ರಭು ಇಟ್ನಾಳ, ಯಮನಪ್ಪ ಕಳ್ಳಿಗುದ್ದಿ, ಭೀಮಶೆಪ್ಪ ಕಳ್ಳಿಗುದ್ದಿ, ಮುಂತಾದವರು ಉಪಸ್ಥಿತರಿದ್ದರು.