RNI NO. KARKAN/2006/27779|Friday, October 18, 2024
You are here: Home » breaking news » ಘಟಪ್ರಭಾ:ಭೂತಾನ ರಾಷ್ಟ್ರದಲ್ಲಿ ಕನ್ನಡ ಭಾಷೆಯ ಬಗ್ಗೆ ಮಾತನಾಡಲು ಅವಕಾಶ ದೊರೆತಿರುವದು ಕರವೇ ಹೆಮ್ಮೆ : ಖಾನಪ್ಪನವರ

ಘಟಪ್ರಭಾ:ಭೂತಾನ ರಾಷ್ಟ್ರದಲ್ಲಿ ಕನ್ನಡ ಭಾಷೆಯ ಬಗ್ಗೆ ಮಾತನಾಡಲು ಅವಕಾಶ ದೊರೆತಿರುವದು ಕರವೇ ಹೆಮ್ಮೆ : ಖಾನಪ್ಪನವರ 

ಭೂತಾನ ರಾಷ್ಟ್ರದಲ್ಲಿ ಕನ್ನಡ ಭಾಷೆಯ ಬಗ್ಗೆ ಮಾತನಾಡಲು ಅವಕಾಶ ದೊರೆತಿರುವದು ಕರವೇ ಹೆಮ್ಮೆ : ಖಾನಪ್ಪನವರ

ಘಟಪ್ರಭಾ ಅ 20 : ಭೂತಾನ ರಾಷ್ಟ್ರದಲ್ಲಿ ಕನ್ನಡ ಭಾಷೆಯ ಬಗ್ಗೆ ಮಾತನಾಡಲು ಅವಕಾಶ ದೊರಕಿರುವುದು ಕರ್ನಾಟಕ ರಕ್ಷಣಾ ವೇದಿಕೆಯ ಹೆಮ್ಮೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಗೋಕಾಕ ತಾಲೂಕಾ ಅಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದರು.
ಭೂತಾನ ರಾಷ್ಟ್ರದ ಥಿಂಪೂ ನಗರದಲ್ಲಿ ಅಗಷ್ಟ 27 ರಂದು ಜರಗುವ ಭೂತಾನ ರಾಷ್ಟ್ರೀಯ ಸಾಂಸ್ಕøತಿಕ ಉತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕವಿಗೋಷ್ಠಿ ಮತ್ತು ವಿಚಾರಗೋಷ್ಠಿಯಲ್ಲಿ ಭಾಗವಹಿಸಲು ತೆರಳುತ್ತಿರುವ ತಾಲೂಕಾಧ್ಯಕ್ಷ ಮತ್ತು ಕಾರ್ಯದರ್ಶಿ ಅವರಿಗೆ ಶನಿವಾರದಂದು ತಾಲೂಕಿನ ಧುಪದಾಳ ಗ್ರಾಮದ ಕರವೇ ಘಟಕದ ವತಿಯಿಂದ ಗ್ರಾಮದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸತ್ಕಾರ ಮತ್ತು ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಕಳೆದ 13 ವರ್ಷಗಳಿಂದ ಕನ್ನಡ ನಾಡು, ನುಡಿ, ನೆಲ, ಜಲ ಭಾಷೆಯ ರಕ್ಷಣೆಗೆ ಸಕ್ರಿಯವಾಗಿ ದುಡಿಯುತ್ತಿರುವ ಪರಿಣಾಮ ಇಂದು ಹೊರ ರಾಷ್ಟ್ರದಲ್ಲಿ ಕನ್ನಡದ ಬಗ್ಗೆ ಮಾತನಾಡಲು ಅವಕಾಶ ದೊರೆತಿರುವುದು ಸುದೈವ. ದೊರೆತ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಭೂತಾನ ರಾಷ್ಟ್ರದಲ್ಲಿ ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸಲು ಪ್ರಮಾಣಿಕವಾಗಿ ಪ್ರಯತ್ನಿಸಲಾಗುವುದೆಂದು ಖಾನಪ್ಪನವರ ಹೇಳಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಸಾಧಿಕ ಹಲ್ಯಾಳ, ಬಸವರಾಜ ಹತ್ತರಕಿ, ರಾಜು ಕೆಂಚನಗುಡ್ಡ, ಮಹಾಂತಯ್ಯ ಹಿರೇಮಠ, ರಹೇಮಾನ ಮೋಕಾಶಿ, ಶೆಟ್ಟೆಪ್ಪ ಗಾಡಿವಡ್ಡರ, ರವಿ ನಾಂವಿ, ಅಜೀತ ಮಲ್ಲಾಪೂರ, ಅಮೀರಖಾನ ಜಗದಾಳ, ರಾಜು ಗಾಡಿವಡ್ಡರ, ತಮ್ಮಣ್ಣ ಗಾಡಿವಡ್ಡರ, ಸಾಕಿಬ ಮುಲ್ಲಾ, ಪರಶುರಾಮ ಗಾಡಿವಡ್ಡರ, ಭೀಮಶಿ ಗಾಡಿವಡ್ಡರ, ಶಂಕರ ಗಾಡಿವಡ್ಡರ, ಅನೀಲ ಗಾಡಿವಡ್ಡರ ಸೇರಿದಂತೆ ಅನೇಕರು ಇದ್ದರು.

Related posts: