ಗೋಕಾಕ:ವೀರ ಯೋಧ ಉಮೇಶ ನಿಧನಕ್ಕೆ ಮಿಡಿದ ಗೋಕಾಕ : ಮುಗಿಲು ಮುಟ್ಟಿದ ಆಕ್ರಂದನ , ಸಕಲ ಸರಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ
ವೀರ ಯೋಧ ಉಮೇಶ ನಿಧನಕ್ಕೆ ಮಿಡಿದ ಗೋಕಾಕ : ಮುಗಿಲು ಮುಟ್ಟಿದ ಆಕ್ರಂದನ , ಸಕಲ ಸರಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ
ಗೋಕಾಕ ಅ 22 : ಮಣಿಪುರ ರಾಜ್ಯದ ಇಂಪಾಲ್ ದಲ್ಲಿ ಹುತಾತ್ಮನಾದ ಗೋಕಾಕಿನ ವೀರ ಯೋಧ ಉಮೇಶ ಹೆಳವರ ನ ಅಂತ್ಯಕ್ರಿಯೆ ಸೋಮವಾರ ಮಧ್ಯಾಹ್ನ ನಗರದ ರುಧ್ರಭೂಮಿಯಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿತು
ಬೆಳಿಗ್ಗೆ ಸಾಂಬ್ರಾ ವಿಮಾನ ನಿಲ್ದಾಣದಿಂದ ಗೋಕಾಕಿನ ಅಂಬೇಡ್ಕರ್ ನಗರದಲ್ಲಿರುವ ವೀರ ಯೋಧನ ಮನೆಗೆ ಮೃತದೇಹವನ್ನು ತರಲಾಯಿತು. ನಂತರ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕೊಡಲಾಯಿತು .
ಹರಿದುಬಂದ ಜನಸಾಗರ : ಮೃತಯೋಧ ಉಮೇಶ ಹೇಳವರ ಅಂತ್ಯಕ್ರಿಯೆಗೆ ತಾಲೂಕಿನಾದ್ಯಂತ ಸಾಗರೋಪವಾಗಿ ಜನರು ಕಿಕ್ಕಿರಿದು ತುಂಬಿ ವೀರ ಯೋಧನ ಅಂತಿಮ ದರ್ಶನ ಪಡೆದು , ವೀರ ಜವಾನ ಉಮೇಶ ಅಮರ ರಹೇ ಎಂಬ ಘೋಷ್ಯವಾಕ್ಯಗಳನ್ನು ಮೋಳಗಿಸಿದರು . ಕಿಕ್ಕಿರಿದು ತುಂಬಿದ ಜನರನ್ನು ಚದುರಿಸಲು ನಗರ ಪೊಲೀಸರು ಹರ ಸಾಹಸ ಪಟ್ಟರು
ಮೃತ ಯೋಧನ ಅಂತಿಮ ದರ್ಶನ ಪಡೆದ ಗಣ್ಯರು ಮತ್ತು ಅಧಿಕಾರಿಗಳು : ಮೃತ ಯೋಧ ಗೋಕಾಕಿನ ಉಮೇಶ ಹೆಳವರ ಅಂತಿಮ ಯಾತ್ರೆಯಲ್ಲಿ ನಗರದ ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಮುರಘರಾಜೇಂದ್ರ ಮಹಾಸ್ವಾಮಿಗಳು , ಸಂಸದ ಸುರೇಶ ಅಂಗಡಿ , ಜಿಲ್ಲಾಧಿಕಾರಿ ಎಸ್.ಬಿ ಬೋಮ್ಮನಹಳ್ಳಿ , ಎಸ್.ಪಿ ಸುಧೀರಕುಮಾರ ರೆಡ್ಡಿ , ಸಿ.ಆರ್.ಪಿ.ಎಫ್ ಡಿಐಜಿ, ಕಮಾಂಡೋ ಡಿಐಜಿ , ಅಶೋಕ ಪೂಜಾರಿ , ಎಂಪಿಎಂಸಿ ನಿರ್ದೇಶಕ ಬಸವರಾಜ ಸಾಯನ್ನವರ , ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ , ಯುವ ಧುರೀಣ ಸಂತೋಷ ಜಾರಕಿಹೊಳಿ ,ನಗರಸಭೆ ಸದಸ್ಯರಾದ ಅಬ್ಬಾಸ ದೇಸಾಯಿ , ಜಯಾನಂದ ಹುಣಶ್ಯಾಳಿ , ಬಸವರಾಜ ಆರೇನ್ನವರ ನಗರದ ಪ್ರಮುಖ ದುರ್ಗಪ್ಪಾ ಶಾಸ್ತ್ರಿ ಗೋಲ್ಲರ , ಕರವೇ ಸ್ವಾಭಿಮಾನಿ ಬಣದ ಯಶೋಧಾ ಬೀರಡಿ , ಕೃಷ್ಣಾ ಖಾನಪ್ಪನವರ , ನಗರದ ವಿವಿಧ ಸಂಘಟನೆಗಳ ಪ್ರಮುಖರು ಯೋಧನ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡು ವೀರಯೋಧನಿಗೆ ಅಂತಿಮ ವಿದಾಯ ಹೇಳಿದರು
ಯೋಧನ ಅಂತ್ಯಕ್ರಿಯೆ ಯಿಂದ ದೂರ ಉಳಿದ ಸಚಿವ ರಮೇಶ : ರಾಜ್ಯದಲ್ಲಿ ಲೋಕಸಭೆ ಮತ್ತು ವಿಧಾನಸಭೆಗೆ ಉಪ ಚುನಾವಣೆ ನಡೆಯುತ್ತಿರುವದರಿಂದ ಪ್ರಚಾರದಲ್ಲಿ ನಿರತವಾಗಿರುವ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಮಣಿಪುರ ರಾಜ್ಯದ ಇಂಪಾಲ್ ದಲ್ಲಿ ಹುತಾತ್ಮನಾದ ಗೋಕಾಕಿನ ಯೋಧ ಉಮೇಶ ಹೇಳವರ ಅವರ ಅಂತಿಮ ಸಂಸ್ಕಾರದಿಂದ ದೂರ ಉಳಿದು ಸಾರ್ವಜನಿಕರ ಚರ್ಚೆಗೆ ಗ್ರಾಸವಾದರು