ಗೋಕಾಕ:ದೇವಿಯ ನಿತ್ಯ ಆರಾದನೆಯಿಂದ ಏನೆಲ್ಲಾ ಇಷ್ಟಾರ್ಥಗಳನ್ನು ಪಡೆಯಲು ಸಾಧ್ಯ : ಮಂಜುನಾಥ ಶರಣರು
ದೇವಿಯ ನಿತ್ಯ ಆರಾದನೆಯಿಂದ ಏನೆಲ್ಲಾ ಇಷ್ಟಾರ್ಥಗಳನ್ನು ಪಡೆಯಲು ಸಾಧ್ಯ : ಮಂಜುನಾಥ ಶರಣರು
ಬೆಟಗೇರಿ: ದೇವಿಯ ನಿತ್ಯ ಆರಾದನೆಯಿಂದ ಏನೆಲ್ಲಾ ಇಷ್ಟಾರ್ಥಗಳನ್ನು ಪಡೆಯಲು ಸಾಧ್ಯ. ಶ್ರೀದೇವಿಯು ಮಹಾಶಕ್ತಿ ಸ್ವರೂಪಿಣಿಯಾಗಿದ್ದಾಳೆ ಎಂದು ಗೋಕಾಕ ತಾಲೂಕಿನ ಮಮದಾಪೂರ ಮೌನ ಮಲ್ಲಿಕಾರ್ಜುನ ಮಠದ ಮಂಜುನಾಥ ಶರಣರು ಹೇಳಿದರು.
ಸಮೀಪದ ಮಮದಾಪೂರ ಮೌನ ಮಲ್ಲಿಕಾರ್ಜುನ ಮಠದಲ್ಲಿ ಶರನ್ನವರಾತ್ರಿಯ ಅಂಗವಾಗಿ ಆಯೋಜಿಸಿರುವ ಶ್ರೀ ದೇವಿ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಶ್ರೀ ದೇವಿಯ ಲೀಲಾಮಯ ಚರಿತ್ರೆ, ಶಕ್ತಿ, ಇಷ್ಟಾರ್ಥ ಸಿದ್ದಿಸುವ ಭಕ್ತಿಯ ಆರಾದನೆಯ ಕುರಿತು ಭಕ್ತ ಜನರಿಗೆ ಹೇಳಿದರು.
ಸತತ ಹದಿನೈದು ದಿನಗಳಿಂದ ಸ್ಥಳೀಯ ಶ್ರೀ ಮಠದಲ್ಲಿ ಪ್ರತಿ ದಿನ ಸಂಜೆ 8 ಗಂಟೆಯಿಂದ 9 ಗಂಟೆ ತನಕ ಶ್ರೀ ದೇವಿ ಪುರಾಣ ಪ್ರವಚನ ಕಾರ್ಯಕ್ರಮವನ್ನು ಮಂಜುನಾಥ ಶರಣರು ನೆರವೇರಿಸಿಕೊಟ್ಟರು. ಇಲ್ಲಿಯ ಮೌನ ಮಲ್ಲಿಕಾರ್ಜುನ ಮಠದ ಮೌನ ಮಲ್ಲಿಕಾರ್ಜುನ ಮಹಾ ಶಿವಯೋಗಿಗಳು ಪುರಾಣ ಪ್ರವಚನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಂತ-ಶರಣರು, ಆಧ್ಯಾತ್ಮ ಪ್ರವೀಣರು, ಗಣ್ಯರು ಸೇರಿದಂತೆ ಆಗಮಿತ ನಾಡಿನ ಸಕಲ ಹರ, ಗುರು, ಚರಮೂರ್ತಿಗಳು, ಶ್ರೀ ದೇವಿ ಪುರಾಣ ಪ್ರವಚನ ಕಾರ್ಯಕ್ರಮದ ಆಯೋಜಕ ಸಮಿತಿ ಪದಾಧಿಕಾರಿಗಳು, ಸದಸ್ಯರು, ಅಪಾರ ಸಂಖ್ಯೆಯಲ್ಲಿ ಶ್ರೀಮಠದ ಭಕ್ತರು, ಪ್ರವಚನಾಸಕ್ತರು ಈ ವಿಶೇಷ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.