ಘಟಪ್ರಭಾ:ಹವಾಲ್ದಾರ್ ದುಂಡಪ್ಪ ಎಂ. ಬೆಳವಿ ನಿಧನ
ಹವಾಲ್ದಾರ್ ದುಂಡಪ್ಪ ಎಂ. ಬೆಳವಿ ನಿಧನ
ಘಟಪ್ರಭಾ ಅ 23 ಙ: ಸಮೀಪದ ಶಿರಢಾಣ ಗ್ರಾಮದ ನಿವಾಸಿ ಹಾಗೂ ಪೊಲೀಸ ಅಧಿಕಾರಿಗಳಾದ ದುಂಡಪ್ಪ ಎಂ.ಬೆಳವಿ (58) ಅವರು ಅನಾರೋಗ್ಯದಿಂದಾಗಿ ಬಳಲುತ್ತಿದ್ದು ಮಂಗಳವಾರದಂದು ನಿಧನರಾದರು.
ಮೃತರು ಪತ್ನಿ,ಓರ್ವ ಪುತ್ರ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ದುಂಡಪ್ಪ ಬೆಳವಿ ಅವರು ಸದ್ಯ ಬೆಳಗಾವಿಯ ಡಿಸಿಆರ್‍ಬಿಯಲ್ಲಿ ಹವಾಲ್ದಾರ್ ರಾಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ30 ವರ್ಷಗಳಿಂದ ಪೊಲೀಸ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಘಟಪ್ರಭಾ ಪೊಲೀಸ ಠಾಣೆಯಲ್ಲಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಮೃತರ ಅಂತ್ಯಕ್ರೀಯೆಯು ಶಿರಢಾಣ ಗ್ರಾಮದ ತಮ್ಮ ಸ್ವಂತ ತೋಟದಲ್ಲಿ ಪೊಲೀಸ ಇಲಾಖೆಯ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು. ಅಂತ್ಯಕ್ರೀಯೆಯಲ್ಲಿ ಗಣ್ಯರು, ಪೊಲೀಸ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು,ಗ್ರಾಮಸ್ಥರು ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.