RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಶ್ರೀರಾಮನ ಆದರ್ಶದ ಅದ್ಬುತ್ ವ್ಯಕ್ತಿತ್ವವನ್ನು ಜಗತ್ತಿಗೆ ಪರಿಚಯಿಸಿದ ಮಹಾನ ವ್ಯಕ್ತಿ ಶ್ರೀ ವಾಲ್ಮೀಕಿ ಮಹರ್ಷಿ :ಲಕ್ಷ್ಮಣ ಚಂದರಗಿ

ಗೋಕಾಕ:ಶ್ರೀರಾಮನ ಆದರ್ಶದ ಅದ್ಬುತ್ ವ್ಯಕ್ತಿತ್ವವನ್ನು ಜಗತ್ತಿಗೆ ಪರಿಚಯಿಸಿದ ಮಹಾನ ವ್ಯಕ್ತಿ ಶ್ರೀ ವಾಲ್ಮೀಕಿ ಮಹರ್ಷಿ :ಲಕ್ಷ್ಮಣ ಚಂದರಗಿ 

ಶ್ರೀರಾಮನ ಆದರ್ಶದ ಅದ್ಬುತ್ ವ್ಯಕ್ತಿತ್ವವನ್ನು ಜಗತ್ತಿಗೆ ಪರಿಚಯಿಸಿದ ಮಹಾನ ವ್ಯಕ್ತಿ ಶ್ರೀ ವಾಲ್ಮೀಕಿ ಮಹರ್ಷಿ :ಲಕ್ಷ್ಮಣ ಚಂದರಗಿ

ಬೆಟಗೇರಿ ಅ 24 : ಮಹರ್ಷಿ ವಾಲ್ಮೀಕಿ ಅವರು ವಿಶ್ವಕ್ಕೆ ಕೊಡುಗೆ ನೀಡಿದ ರಾಮಾಯಣ ಮಹಾಕಾವ್ಯ ಎಂದೆಂದಿಗೂ ಪ್ರಸ್ತುತವಾಗುವಂತದ್ದಾಗಿದೆ. ಶ್ರೀರಾಮನ ಆದರ್ಶದ ಅದ್ಬುತ್ ವ್ಯಕ್ತಿತ್ವವನ್ನು ಜಗತ್ತಿಗೆ ಪರಿಚಯಿಸಿದ ಮಹಾನ್ ಕವಿಯಾಗಿದ್ದಾರೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಲಕ್ಷ್ಮಣ ಚಂದರಗಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯ್ತಿ ಕಾರ್ಯಾಲಯದಲ್ಲಿ ಬುಧವಾರ ಅ.24 ರಂದು ನಡೆದ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಹರ್ಷಿ ವಾಲ್ಮೀಕಿ ಭಾವ ಚಿತ್ರಕ್ಕೆ ಪೋಜೆ, ಪುಷ್ಪಾರ್ಪನೆ ಸಲ್ಲಿಸಿದ ಬಳಿಕ ಮಾತನಾಡಿದರು. ಸ್ಥಳೀಯ ಗ್ರಾಪಂ ಪಿಡಿಒ ಬಿ.ಎಫ್.ದಳವಾಯಿ, ಕಾರ್ಯದರ್ಶಿ ಗೌಡಪ್ಪ ಮಾಳೇದ, ಕಾಕ್ರ್ಲ ಸುರೇಶ ಬಾಣಸಿ, ಗ್ರಾಪಂ ಸದಸ್ಯರು, ಸಿಬ್ಬಂದಿ, ಗ್ರಾಮಸ್ಥರು ಇತರರು ಇದ್ದರು.


ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ: ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಗಳಲ್ಲಿ ಬುಧವಾರ ಅ.24 ರಂದು ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮ ವಿಜೃಂಭನೆಯಿಂದ ಆಚರಿಸಲಾಯಿತು. ಗಂಡು ಮಕ್ಕಳ ಶಾಲೆಯ ಮುಖ್ಯ ಶಿಕ್ಷಕ ವೈ.ಸಿ.ಶೀಗಿಹಳ್ಳಿ ಅವರು ಮಹರ್ಷಿ ವಾಲ್ಮೀಕಿ ಭಾವ ಚಿತ್ರಕ್ಕೆ ಪೋಜೆ, ಪುಷ್ಪಾರ್ಪನೆ ಸಲ್ಲಿಸಿದರು. ಬಳಿಕ ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು. ಶಾಲೆಯ ವಿದ್ಯಾರ್ಥಿಗಳಿಂದ ಮಹರ್ಷಿ ವಾಲ್ಮೀಕಿ ಕುರಿತು ಭಾಷಣ, ವಿವಿಧ ಸ್ಪರ್ಧೆ ಆಯೋಜಿಸಲಾಗಿತ್ತು, ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಉಭಯ ಶಾಲೆಯ ಎಸ್‍ಡಿಎಮ್‍ಸಿ ಅಧ್ಯಕ್ಷರಾದ ರಮೇಶ ನೀಲಣ್ಣವರ, ಉದ್ದಪ್ಪ ಚಂದರಗಿ, ಹೆಣ್ಣು ಮಕ್ಕಳ ಶಾಲೆಯ ಪ್ರಧಾನ ಗುರು ಆರ್.ಬಿ.ಬೆಟಗೇರಿ, ಎಸ್‍ಡಿಎಮ್‍ಸಿ ಸದಸ್ಯರು, ಶಿಕ್ಷಕ, ಸಿಬ್ಬಂದಿ ವರ್ಗ, ಶಿಕ್ಷಣಪ್ರೇಮಿಗಳು, ವಿದ್ಯಾರ್ಥಿಗಳು, ಮತ್ತಿತರರು ಉಪಸ್ಥಿತರಿದ್ದರು.

Related posts: