ಗೋಕಾಕ:ಗೋಕಾಕ ತಾಲೂಕಿನ ಕರವೇ ಕಾರ್ಯಕರ್ತರ ಕನ್ನಡ ಕಾಳಜಿ ಬೆಳಗಾವಿ ಜಿಲ್ಲೆಗೆ ಮಾದರಿಯಾಗಿದೆ : ಟಿ.ಎ.ನಾರಾಯಣಗೌಡ
ಗೋಕಾಕ ತಾಲೂಕಿನ ಕರವೇ ಕಾರ್ಯಕರ್ತರ ಕನ್ನಡ ಕಾಳಜಿ ಬೆಳಗಾವಿ ಜಿಲ್ಲೆಗೆ ಮಾದರಿಯಾಗಿದೆ : ಟಿ.ಎ.ನಾರಾಯಣಗೌಡ
ಗೋಕಾಕ ಅ 24 : ಗೋಕಾಕ ತಾಲೂಕಿನ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರ ಕನ್ನಡ ಕಾಳಜಿ ಬೆಳಗಾವಿ ಜಿಲ್ಲೆಗೆ ಮಾದರಿಯಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದರು
ಭೂತಾನ ರಾಷ್ಟ್ರದಲ್ಲಿ ಅಕ್ಟೋಬರ್ 27 ರಂದು ಜರಗುವ 19 ನೇ ಭೂತಾನ ರಾಷ್ಟ್ರೀಯ ಉತ್ಸವ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ವಿಚಾರಗೋಷ್ಠಿ ಮತ್ತು ಕವಿಗೋಷ್ಠಿಯಲ್ಲಿ ಭಾಗವಹಿಸಲು ಭೂತಾನ ರಾಷ್ಟ್ರದ ಥಿಂಪೂ ನಗರಕ್ಕೆ ತೆರಳಿದ ಗೋಕಾಕ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕಾ ಘಟಕದ ಅಧ್ಯಕ್ಷ ಮತ್ತು ಕಾರ್ಯದರ್ಶಿ ಅವರಿಗೆ ಬುಧವಾರದಂದು ಬೆಂಗಳೂರಿನಲ್ಲಿ ಆತ್ಮೀಯವಾಗಿ ಬೀಳ್ಕೊಟ್ಟು ಮಾತನಾಡಿದರು
ಕರ್ನಾಟಕ ರಕ್ಷಣಾ ವೇದಿಕೆಯಲ್ಲಿ ಸೇರ್ಪಡೆ ಗೊಂಡಾಗಿನಿಂದ ಒಂದಿಲೊಂದು ಕನ್ನಡ ಪರ ಕಾಳಜಿವುಳ ಕಾರ್ಯಕ್ರಮಗಳನ್ನು ಸಂಘಟಿಸಿ , ಕನ್ನಡದ ಹೆಸರನ್ನು ರಾಜ್ಯ ,ಹೊರ ರಾಜ್ಯಗಳಲ್ಲಿ ಹರಡಿಸಿ ದೂರದ ಭೂತಾನ ರಾಷ್ಟ್ರದಲ್ಲಿ ಕನ್ನಡದ ಬಗ್ಗೆ ಮಾತನಾಡಲು ಅವಕಾಶ ಸಿಕ್ಕಿರುವದು ತುಂಬಾ ಸಂತೋಷದ ಸಂಗತಿ ಭೂತಾನ ರಾಷ್ಟ್ರದಲ್ಲಿ ನಡೆಯುವ ಕನ್ನಡ ಕಾರ್ಯಕ್ರಮ ಯಶಸ್ಸು ಸಾಧಿಸಲ್ಲಿ , ಕರವೇ ಕಾರ್ಯಕರ್ತರ ಪ್ರಯಾಣ ಸುಖಕರವಾಗಲಿ ಎಂದು ನಾರಾಣಗೌಡರು ಹಾರೈಸಿ ಶುಭ ಕೋರಿದರು
ಈ ಸಂದರ್ಭದಲ್ಲಿ ಕರವೇ ತಾಲೂಕಾಧ್ಯಕ್ಷ ಬವರಾಜ ಖಾನಪ್ಪನವರ , ಸಾಧಿಕ ಹಲ್ಯಾಳ , ಬಸವರಾಜ ಹತ್ತರಕಿ, ಮಹಾಂತೇಶ ಹಿರೇಮಠ , ನಾರಾಯಣ ವಾಗುಲೇ, ರಾಜೇಂದ್ರ ಕೆಂಚನಗುಡ್ಡ, ಬಾಹುಬಲಿ ಖಾರೇಪಠಣಾ ಉಪಸ್ಥಿತರಿದ್ದರು