RNI NO. KARKAN/2006/27779|Sunday, December 22, 2024
You are here: Home » breaking news » ಗೋಕಾಕ:ಎಲ್ಲ ದಾನಗಳಲ್ಲಿ ರಕ್ತದಾನ ಶ್ರೇಷ್ಠ ದಾನವಾಗಿದ್ದು: ನೀಲಪ್ಪ ಕೇವಟಿ

ಗೋಕಾಕ:ಎಲ್ಲ ದಾನಗಳಲ್ಲಿ ರಕ್ತದಾನ ಶ್ರೇಷ್ಠ ದಾನವಾಗಿದ್ದು: ನೀಲಪ್ಪ ಕೇವಟಿ 

ಎಲ್ಲ ದಾನಗಳಲ್ಲಿ ರಕ್ತದಾನ ಶ್ರೇಷ್ಠ ದಾನವಾಗಿದ್ದು: ನೀಲಪ್ಪ ಕೇವಟಿ

ಗೋಕಾಕ ಅ 26 : ಎಲ್ಲ ದಾನಗಳಲ್ಲಿ ರಕ್ತದಾನ ಶ್ರೇಷ್ಠ ದಾನವಾಗಿದ್ದು, ಇದರಿಂದ ಮತ್ತೊಬ್ಬರ ಜೀವ ಉಳಿಸಲು ಸಹಕಾರಿಯಾಗುತ್ತದೆ ಎಂದು ಕೌಜಲಗಿ ಗ್ರಾಪಂ ಅಧ್ಯಕ್ಷ ನೀಲಪ್ಪ ಕೇವಟಿ ಹೇಳಿದರು.
ಕೌಜಲಗಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಮ ಪಂಚಾಯತ ಸಮಿತಿಯ ಜಂಟಿ ಆಶ್ರಯದಲ್ಲಿ ಗುರುವಾರದಂದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜರುಗಿದ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಕ್ತವನ್ನು ತಯಾರಿಸಲು ಸಾಧ್ಯವಿಲ್ಲ. ಅದನ್ನು ದಾನಿಗಳಿಂದಲೇ ಪಡೆಯಬೇಕು. ರಕ್ತದಾನ ಮಾಡುವುದರಿಂದ ದೇಹದಲ್ಲಿ ಯಾವುದೇ ರೀತಿಯ ದುಷ್ಪರಿಣಾಮ ಆಗುವುದಿಲ್ಲ. ಜೀವನ್ಮರಣದ ಮಧ್ಯೆ ಹೋರಾಡುತ್ತಿರುವ ರೋಗಿಗಳಿಗೆ ರಕ್ತ ಕೊಡುವುದರಿಂದ ಅವರ ಜೀವ ಉಳಿಯುತ್ತದೆ. ಆದ್ದರಿಂದ ರಕ್ತದಾನದಲ್ಲಿ ಪ್ರತಿಯೊಬ್ಬರ ಪಾಲ್ಗೊಳ್ಳುವಿಕೆ ಅವಶ್ಯವಾಗಿದೆ ಎಂದು ಕೇವಟಿ ಹೇಳಿದರು.
ಚಿಕ್ಕೋಡಿ ಅಪರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವ್ಹಿ. ಮುನ್ಯಾಳ, ಬೆಳಗಾವಿ ಬೀಮ್ಸ್ ವೈದ್ಯಾಧಿಕಾರಿ ಡಾ.ಸಿ.ಬಿ. ಹೊಸಪೇಟೆ, ಗೋಕಾಕ ಪಿಎಲ್‍ಡಿ ಬ್ಯಾಂಕಿನ ನಿರ್ದೇಶಕ ಅಶೋಕ ಉದ್ದಪ್ಪನವರ, ತಾಪಂ ಸದಸ್ಯ ಶಾಂತಪ್ಪ ಹಿರೇಮೇತ್ರಿ, ಅಡಿವೆಪ್ಪ ದಳವಾಯಿ, ರಾಯಪ್ಪ ತಳವಾರ, ಸಿದ್ದಪ್ಪ ಹಳ್ಳೂರ, ಬಸು ಜೋಗಿ, ಜಗದೀಶ ಭೋವಿ, ಮಂಜುನಾಥ ರಾಜೇಂದ್ರ ಸಣ್ಣಕ್ಕಿ, ಜಕೀರ ಜಮಾದಾರ, ರಮೇಶ ದಳವಾಯಿ, ಅಶೋಕ ಶಿವಾಪೂರ, ಚಂದ್ರು ಧೂಳಪ್ಪನವರ, ಮಂಜುನಾಥ ಭೋವಿ, ರಾಮಪ್ಪ ಈಟಿ, ನಾರಾಯಣ ಕೌಜಲಗಿ, ಡಿ.ಜೆ. ಮುಲ್ತಾನಿ, ವೆಂಕಟೇಶ ದಳವಾಯಿ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರವಿ ನಾಡಗೌಡರ, ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಡಾ.ಬಸನಗೌಡ ಈಶ್ವರಪ್ಪಗೋಳ, ಮುಂತಾದವರು ಉಪಸ್ಥಿತರಿದ್ದರು.

Related posts: