ಗೋಕಾಕ:ಎಪಿಎಂಸಿ ಎರಡನೇ ಅವಧಿಗೆ ಅಧ್ಯಕ್ಷರಾಗಿ ಅಡಿವೆಪ್ಪ ಭೀಮಪ್ಪ ಕಿತ್ತೂರ ಉಪಾಧ್ಯಕ್ಷರಾಗಿ, ಮಾರುತಿ ಹರಿಜನ ಆಯ್ಕೆ
ಎಪಿಎಂಸಿ ಎರಡನೇ ಅವಧಿಗೆ ಅಧ್ಯಕ್ಷರಾಗಿ ಅಡಿವೆಪ್ಪ ಭೀಮಪ್ಪ ಕಿತ್ತೂರ ಉಪಾಧ್ಯಕ್ಷರಾಗಿ, ಮಾರುತಿ ಹರಿಜನ ಆಯ್ಕೆ
ಗೋಕಾಕ ಅ 26 : ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಎರಡನೇ ಅವಧಿಗೆ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಅಡಿವೆಪ್ಪ ಭೀಮಪ್ಪ ಕಿತ್ತೂರ ಅಧ್ಯಕ್ಷರಾಗಿ, ಮಾರುತಿ ಹರಿಜನ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ತಹಶೀಲ್ದಾರ ಜಿ.ಎಸ್. ಮಳಗಿ ಪ್ರಕಟಿಸಿದರು.
ಇಂದಿಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಭಾಗೃಹದಲ್ಲಿ ಜರುಗಿದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಎರಡೂ ಸ್ಥಾನಗಳಿಗೆ ತಲಾ ಒಂದೊಂದು ನಾಮಪತ್ರಗಳು ಸಲ್ಲಿಕೆಯಾಗಿದ್ದರಿಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಿತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಿತಿಯ ನಿರ್ದೇಶಕರಾದ ಅಶೋಕ ನಾಯಿಕ, ಬಾಹುಬಲಿ ಪಾಟೀಲ, ಲಕ್ಷ್ಮೀಬಾಯಿ ಕೊಂಗಾಲಿ, ಕೆಂಚಪ್ಪ ಸಕ್ರೆಪ್ಪಗೋಳ, ಶ್ರೀಪತಿ ಗಣೇಶವಾಡಿ, ಪರಸಪ್ಪ ಚೌಕಶಿ, ಅಕ್ಕವ್ವ ಭಾಂವಿಹಾಳ, ಶಂಕರ ಹುರಕಡ್ಲಿ, ಬಸವರಾಜ ಸಾಯನ್ನವರ, ಮಹಾಂತೇಶ ಕಲ್ಲೋಳಿ, ನೀಲಕಂಠ ಕಪ್ಪಲಗುದ್ದಿ, ನಾಮನಿರ್ದೇಶಿತ ಸದಸ್ಯರಾದ ಲಕ್ಕಪ್ಪ ಮಾಳಗಿ, ಅಖಿಲ್ ಕೋತವಾಲ, ಪುಷ್ಪಾ ಪೂಜೇರಿ, ಕಾರ್ಯದರ್ಶಿ ಬಿ.ಆರ್.ಜಾಲಿಬೇರಿ ಉಪಸ್ಥಿತರಿದ್ದರು.
ಅಭಿವೃದ್ಧಿಗೆ ಶ್ರಮಿಸುವೆ : ನಮ್ಮ ನಾಯಕರಾದ ಜಾರಕಿಹೊಳಿ ಸಹೋದರರ ಮಾರ್ಗದರ್ಶನದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಅಡಿವೆಪ್ಪ ಕಿತ್ತೂರ ತಿಳಿಸಿದರು.
ಚುನಾವಣೆ ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಎಲ್ಲ ದಿಗ್ದರ್ಶಕ ಮಂಡಳಿಯ ಸದಸ್ಯರು, ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರೈತರ ಅನುಕೂಲಕ್ಕಾಗಿ ಶ್ರಮಿಸುವುದಾಗಿ ಹೇಳಿದರು.
ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾದ ಅಡಿವೆಪ್ಪ ಕಿತ್ತೂರ ಹಾಗೂ ಮಾರುತಿ ಹರಿಜನ ಅವರನ್ನು ಸಭಾಗೃಹದಲ್ಲಿ ಸತ್ಕರಿಸಲಾಯಿತು.
ಪ್ರಭಾಶುಗರ ಉಪಾಧ್ಯಕ್ಷ ರಾಮಣ್ಣಾ ಮಹಾರಡ್ಡಿ, ನಿರ್ದೇಶಕ ಶಿವಲಿಂಗ ಪೂಜೇರಿ, ಮುಖಂಡರಾದ ಬಸವಂತ ಕಮತಿ, ಮಾಯಪ್ಪ ತಹಶೀಲ್ದಾರ, ಯುವ ಧುರೀಣರಾದ ನಾಗಪ್ಪ ಶೇಖರಗೋಳ, ನಿಂಗಪ್ಪ ಕುರಬೇಟ, ಮುಂತಾದವರು ಉಪಸ್ಥಿತರಿದ್ದರು.