ಗೋಕಾಕ : ಕವಿಗಳು ಪ್ರಾಸಬದ್ಧವಾಗಿ ಕವನಗಳನ್ನು ರಚನೆ ಮಾಡುವಲ್ಲಿ ಏಡುವುತ್ತಿರುವುದು ಆತಂಕಕಾರಿ : ಭಾಗವಾನ ವಿಷಾದ
ಕವಿಗಳು ಪ್ರಾಸಬದ್ಧವಾಗಿ ಕವನಗಳನ್ನು ರಚನೆ ಮಾಡುವಲ್ಲಿ ಏಡುವುತ್ತಿರುವುದು ಆತಂಕಕಾರಿ : ಭಾಗವಾನ ವಿಷಾದ
ಗೋಕಾಕ ಅ 29 : ಆಧುನಿಕ ಯುಗದ ಕವಿಗಳು ಪ್ರಾಸಬದ್ಧವಾಗಿ ಕವನಗಳನ್ನು ರಚನೆ ಮಾಡುವಲ್ಲಿ ಏಡುವುತ್ತಿರುವುದು ಆತಂಕಕಾರಿ ವಿಷಯವೆಂದು ಬಿಡಿಂಗನವಲೆ ಭಾಗವಾನ ವಿಷಾಧಿಸಿದರು.
ಅವರು ಶುಕ್ರವಾರದಂದು ಭೂತಾನ ರಾಷ್ಟ್ರದ ರಾಜಧಾನಿ ಥಿಂಪೂ ನಗರದಲ್ಲಿ ನಡೆದ 19ನೇ ಭೂತಾನ ಅಂತರಾಷ್ಟ್ರೀಯ ಸಂಸ್ಕøತಿಕ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗದ್ಯ ಮತ್ತು ಪದ್ಯಗಳು ಸಾಹಿತಿಕವಾಗಿ ನಿಕಟ ಸಂಬಂಧವನ್ನು ಹೊಂದಿವೆ. ಗದ್ಯ ನಡೆದುಕೊಂಡು ಬಂದರೆ ಪದ್ಯಗಳು ಕುಣಿಯುತ್ತ ಬರುತ್ತವೆ. ಕವಿಗಳು ಇದನ್ನು ಅರಿತುಕೊಂಡು ಕವನ ರಚಿಸುವ ದಿಸೆಯಲ್ಲಿ ಮುನ್ನಡೆಯಬೇಕಾಗಿದೆ. ಇಂದಿನ ಆಧುನಿಕ ಭರಾಟೆಯಲ್ಲಿ ಸಿಲುಕಿ ಕವಿ ಮತ್ತು ಕವಿತೆಗಳು ಎರಡೂ ಮಾಯವಾಗುತ್ತಿವೆ. ಕವಿಗಳು ಮತ್ತು ಕವಿತೆಗಳ ಜೀವಂತ ಉಳಿಯಬೇಕಾದರೆ ಇಂತಹ ಕವಿಗೋಷ್ಠಿಗಳು ಮೇಲಿಂದ ಮೇಲೆ ಜರುಗಿದರೆ ಉದಯೋನ್ಮುಖ ಕವಿಗಳು ಹುಟ್ಟಿಕೊಳ್ಳಲು ಸಾಧ್ಯ. ಆ ನಿಟ್ಟಿನಲ್ಲಿ ಸಂಸ್ಕøತಿಯನ್ನು ಹೆಚ್ಚಾಗಿ ಪ್ರೀತಿಸುವ ಭೂತಾನ ರಾಷ್ಟ್ರದಲ್ಲಿ ಕನ್ನಡ ಸಮ್ಮೇಳನ ನಡೆಸಿ ಕಾರ್ಯಕ್ರಮಗಳನ್ನು ನಡೆಸಿರುವುದು ಸುತ್ಯಾರ್ಯ ಎಂದು ಭಾಗವಾನ ಹೇಳಿದರು. ಕವಿಗೋಷ್ಠಿಯಲ್ಲಿ ಮೈಸೂರಿನ ಶಿವಾನಂದ ಶೆಟ್ಟರ ಶ್ರೀ ಗಿರಿ ಯರಿಸ್ವಾಮಿ, ಬೆಳಗಾವಿ ಜಿಲ್ಲೆಯ ಗೋಕಾಕಿನ ಸಾಧಿಕ ಹಲ್ಯಾಳ, ಬೆಂಗಳೂರಿನ ವೇದಕುಮಾರ, ವಿಮಲಾ ಭಾಗವಹಿಸಿ ಕವನ ವಾಚನ ಮಾಡಿದರು.
ಡಾ|| ಅಶೋಕ ನರೋಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕವಿಗೋಷ್ಠಿಯನ್ನು ಶ್ರೀ ಗಿರಿ ಯರಿಸ್ವಾಮಿ ನಿರೂಪಿಸಿ ವಂದಿಸಿದರು. ಇದೇ ಸಂದರ್ಭದಲ್ಲಿ ಕವಿಗೋಷ್ಠಿಯಲ್ಲಿ ಭಾಗವಹಿಸಿ ಕವಿ ವಾಚಿಸಿದ ಎಲ್ಲ ಕವಿಗಳಿಗೆ ಭೂತಾನ ರಾಷ್ಟ್ರದ ಮಾಜಿ ಸಚಿವ ನಗೀಮಾ ಸಾಗಾಯಿ ತೇಶೆಂಪೊ ಅವರ ಮಗಳು ಕುಮಾರಿ ಲಿಂಚನಾ ಮಾಫಿಮಾ ಪ್ರಶಸ್ತಿ ಪತ್ರ ಮತ್ತು ಪಾರಿತೋಶಕ ಧರಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ, ಬಸವರಾಜ ಹತ್ತರಕಿ, ಬಾಹುಬಲಿ ಖಾರೆಪಠಾಣ, ನಾರಾಯಣ ವಾಗೂಲೆ, ಮಹಾಂತೇಶ ಹಿರೇಮಠ, ರಾಜೇಂದ್ರ ಕೆಂಚನಗುಡ್ಡ ಉಪಸ್ಥಿತರಿದ್ದರು.