ಘಟಪ್ರಭಾ:ಸತ್ಕಾರ್ಯ ಮಾಡುವದರಿಂದ ಮನಷ್ಯನ ಮನಸ್ಸಿಗೆ ನೆಮ್ಮದಿ ಲಭಿಸುತ್ತದೆ: ಶ್ರೀ ಸಿದ್ದಯ್ಯಪ್ಪ ಮಹಾರಾಜರು
ಸತ್ಕಾರ್ಯ ಮಾಡುವದರಿಂದ ಮನಷ್ಯನ ಮನಸ್ಸಿಗೆ ನೆಮ್ಮದಿ ಲಭಿಸುತ್ತದೆ: ಶ್ರೀ ಸಿದ್ದಯ್ಯಪ್ಪ ಮಹಾರಾಜರು
ಘಟಪ್ರಭಾ ಅ 29 : ಸತ್ಕಾರ್ಯ ಮಾಡುವದರಿಂದ ಮನಷ್ಯನ ಮನಸ್ಸಿಗೆ ನೆಮ್ಮದಿ ಸುಖ ಶಾಂತಿ ಲಭಿಸುತ್ತದೆ ಎಂದು ಶ್ರೀ ಸಿದ್ದಯ್ಯಪ್ಪ ಮಹಾರಾಜರು ನುಡಿದರು.
ಅವರು ಸೋಮವಾರ ಘಟಪ್ರಭಾ ಮುಗಳಖೋಡ ಯಲ್ಲಾಲಿಂಗೇಶ್ವರ ಶಾಖಾ ಮಠದಲ್ಲಿ ಹಮ್ಮಿಕೊಂಡ ಶ್ರೀ ಹುಣಶಿಕಟ್ಟಿಯ ಶ್ರೀ ಗಿರಿಮಲ್ಲೇಶ್ವರ ಮಹಾರಾಜರ 23ನೇ ಪುಣ್ಯ ತಿಥಿ ಕಾರ್ಯಕ್ರಮದ ಪಾವನ ಸಾನಿದ್ಯ ವಹಿಸಿ ಮಾತನಾಡುತ್ತಿದ್ದರು. ಮನುಷ್ಯನಿಗೆ ಮುಕ್ತಿ ಸಿಗಬೇಕಾದರೆ ಅವರು ಗುರು ಉಪದೇಶ ಪಡೆಯಬೇಕು. ಗುರುಗಳನ್ನು ನಂಬಿ ಯಾರೂ ಕೆಟ್ಟವರಿಲ್ಲ. ಆದ್ದರಿಂದ ಎಲ್ಲರೂ ಗುರುಗಳು ತೋರಿಸಿದ ಮಾರ್ಗದಲ್ಲಿ ನಡೆದು ಪಾವನರಾಗಬೇಕೆಂದರು.
ಶ್ರೀ ಹುಣಶಿಕಟ್ಟಿ ಗಿರಿಮಲ್ಲೇಶ್ವರ ಮಹಾರಾಜರ ಭಾವ ಚಿತ್ರಕ್ಕೆ ಮುಗಳಖೋಡ ಮಠದ ಶ್ರೀ ಸಿದ್ದಯ್ಯಪ್ಪ ಮಹಾರಾಜರು ಪೂಜೆ ಸಲ್ಲಿಸಿದರು. ಸುಮಂಗಲಿಯರು ಆರತಿ, ಕುಂಭದೊಂದಿಗೆ ಪ್ರದಕ್ಷಣೆಗೆ ಮೆರಗು ನೀಡಿದರು.
ಈ ಸಂಧರ್ಭದಲ್ಲಿ ಮುಗಳಖೋಡ ಮಠದ ಭಕ್ತರಾದ ಪಿ.ಎ.ನಾಯಿಕ, ಸುರೇಶ ಪಾಟೀಲ, ಮಲ್ಲಪ್ಪ ಹುಕ್ಕೇರಿ, ರಾಜು ಕತ್ತಿ, ಜಿ.ಎಸ್. ರಜಪೂತ, ಎಸ್.ಎಚ್ ಗಿರಡ್ಡಿ, ಡಾ| ವಿಜಕುಮಾರ ಪಾಟೀಲ, ಈಶ್ವರ ಮಟಗಾರ, ನ್ಯಾಯವಾದಿ ಕೆಂಪಣ್ಣಾ ಚೌಕಾಶಿ, ಲಕ್ಷ್ಮಣ ಆಲೋಶಿ, ಕೆಂಪಣ್ಣ ಜಂಬ್ರಿ, ಸೇರಿದಂತೆ ಅನೇಕ ಭಕ್ತರು ಇದ್ದರು.
ಕೊನೆಯಲ್ಲಿ ದಾನಮ್ಮಾ ಗುಡಿಯ ಅರ್ಚಕರಾದ ಶಂಕರ ಹಿರೇಮಠ ಅವರು ಎಲ್ಲರನ್ನೂ ವಂದಿಸಿದರು.