RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಡಾ.ಬೆಟಗೇರಿ ಕೃಷ್ಣಶರ್ಮರು ಅಪ್ಪಟ್ಟ ದೇಶಿ ಕವಿ :ಎಮ್.ಐ.ನೀಲಣ್ಣವರ ಅಭಿಮತ

ಗೋಕಾಕ:ಡಾ.ಬೆಟಗೇರಿ ಕೃಷ್ಣಶರ್ಮರು ಅಪ್ಪಟ್ಟ ದೇಶಿ ಕವಿ :ಎಮ್.ಐ.ನೀಲಣ್ಣವರ ಅಭಿಮತ 

ಡಾ.ಬೆಟಗೇರಿ ಕೃಷ್ಣಶರ್ಮರು ಅಪ್ಪಟ್ಟ ದೇಶಿ ಕವಿ :ಎಮ್.ಐ.ನೀಲಣ್ಣವರ ಅಭಿಮತ

ಬೆಟಗೇರಿ ಅ 30 : ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಡಾ. ಬೆಟಗೇರಿ ಕೃಷ್ಣಶರ್ಮರು, ಪತ್ರಕರ್ತರಾಗಿ, ಕವಿಯಾಗಿ, ಕಥೆಗಾರರಾಗಿ, ಜಾನಪದ ತಜ್ಞರಾಗಿ ವಿವಿಧ ಕ್ಷೇತ್ರಗಳಲ್ಲಿ ಸಾರ್ಥಕ ಸೇವೆ ಸಲ್ಲಿಸಿದ್ದಾರೆಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ನ್ಯಾಯವಾದಿ ಎಮ್.ಐ.ನೀಲಣ್ಣವರ ಹೇಳಿದರು.
ಗ್ರಾಮದ ವೀರಸಂಗಪ್ಪ ವೀರಭದ್ರಪ್ಪ ದೇಯಣ್ಣವರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಂಗಳವಾರ ಅ.30 ರಂದು ನಡೆದ ಡಾ.ಬೆಟಗೇರಿ ಕೃಷ್ಣಶರ್ಮರ 37 ನೇ ಪುಣ್ಯತಿಥಿಯ ಪ್ರಯುಕ್ತ ದಿವ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿ, ಕೃಷ್ಣಶರ್ಮರು ಅಪ್ಪಟ್ಟ ದೇಶಿ ಕವಿಯಾಗಿದ್ದರು. ನಮ್ಮೊಂದಿಗಿರದಿದ್ದರು ಅವರ ಸಾಹಿತ್ಯದ ಕಂಪು ನಮ್ಮ ಮುಂದಿದೆ. ಕವಿಭೂಷಣನ ಪುಣ್ಯತಿಥಿಯ ದಿನದ ಸಂದಂರ್ಭದಲ್ಲಾದರೂ ನಾಡಿನ ಜನ ಒಂದಿಷ್ಟು ಅವರ ದಿವ್ಯ ಸ್ಮರಣೆ ಮಾಡಬೇಕಿದೆ ಎಂದರು.
ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಅವರು, ಡಾ.ಬೆಟಗೇರಿ ಕೃಷ್ಣಶರ್ಮರ ಬದುಕು, ಬರಹದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಥಳೀಯ ವೇದಮೂರ್ತಿ ಈರಯ್ಯ ಹಿರೇಮಠ ಸಾನಿಧ್ಯ ವಹಿಸಿ ಆನಂದ ಕಂದರ ಭಾವ ಚಿತ್ರಕ್ಕೆ ಪೂಜೆ, ಪುಷ್ಪಾರ್ಪಣೆ, ಕಾರ್ಯಕ್ರಮ ನೆರವೇರಿಸಿದರು.
ಶಾಲೆಯ ಎಸ್‍ಡಿಎಮ್‍ಸಿ ಮಾಜಿ ಅಧ್ಯಕ್ಷ ಶ್ರೀಶೈಲ ಗಾಣಗಿ, ಮಲ್ಲಿಕಾರ್ಜುನ ಹಿರೇಮಠ, ವಿದ್ಯಾಧರ ಬಿರಾದಾರ, ಶುಭಾ ಬಿ., ಜಯಶ್ರೀ ಇಟ್ನಾಳ, ಮಲ್ಹಾರಿ ಪೋಳ, ವೀಣಾ ಹತ್ತಿ, ಡಾ. ಶ್ರೀಶೈಲ ಖಡಕಭಾಂವಿ ಸೇರಿದಂತೆ ಸಾಹಿತ್ಯಾಭಿಮಾನಿಗಳು, ಗ್ರಾಮಸ್ಥರು, ಇತರರು ಉಪಸ್ಥಿತರಿದ್ದರು.
ಶಿಕ್ಷಕ ಮಂಜುನಾಥ ಹತ್ತಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮೋಹನ ತುಪ್ಪದ ವಂದಿಸಿದರು.
ಬಾಕ್ಸ್ ಐಟಮ್_ ಸ್ಮಾರಕ ಭವನ ನಿರ್ಮಾಣಕ್ಕೆ ಒತ್ತಾಯ : ಡಾ.ಬೆಟಗೇರಿ ಕೃಷ್ಣಶರ್ಮರ ಹುಟ್ಟೂರ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಕೇಲವು ದಶಕಗಳಿಂದ ಆನಂದಕಂದರ ಸ್ಮಾರಕ ಭವನ ಕಟ್ಟಡದ ಕನಸು ಕಾಣುತ್ತಿದೆ. ನಮ್ಮ ಕನ್ನಡ ಸಾರಸ್ವತ ಲೋಕಕ್ಕೆ ಅವಿಸ್ಮರಣೀಯ ಕೊಡುಗೆ ನೀಡಿದ ಕೃಷ್ಣಶರ್ಮರ ಹೆಸರು ಅವಿಸ್ಮರಣೀಯವಾಗಿ ಉಳಿಯಲು ಸರ್ಕಾರ, ಸಂಬಧಿಸಿದ ಇಲಾಖಾಧಿಕಾರಿಗಳು, ಜನಪ್ರತಿನಿಧಿಗಳು ಯಾವುದೇ ಪ್ರಯತ್ನ ಮಾಡುವುದಿರುವದು ಈ ನಾಡಿನ ಬಹುದೊಡ್ಡ ದುರಂತ. ಸ್ಮಾರಕ ಭವನ ಕಟ್ಟಡ ನಿರ್ಮಾಣದ ದಿವ್ಯ ನಿರ್¯ಕ್ಷ್ಯ ತೋರುತ್ತಿರುವ ಸರ್ಕಾರ, ಸಂಬಧಿಸಿದ ಇಲಾಖಾಧಿಕಾರಿಗಳು, ಜನಪ್ರತಿನಿಧಿಗಳ ಮೇಲೆ ಸ್ಥಳೀಯ ಗ್ರಾಮಸ್ಥರು, ಇಲ್ಲಿಯ ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ, ಇನ್ನಾದರೂ ಆನಂದಕಂದರ ಹುಟ್ಟುರೂ ಬೆಟಗೇರಿ ಗ್ರಾಮದಲ್ಲಿ ಶೀಘ್ರ ಸ್ಮಾರಕ ಭವನ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದ್ದಾರೆ.

Related posts: