ಘಟಪ್ರಭಾ:ರಾಜಾಪೂರ ಜ್ಞಾನ ಗಂಗೋತ್ರಿ ಆಂಗ್ಲ ಮಾಧ್ಯಮ ಶಾಲೆಯಲ್ಲ್ಲಿ ಕನ್ನಡ ಡಿಂಡಿಮ
ರಾಜಾಪೂರ ಜ್ಞಾನ ಗಂಗೋತ್ರಿ ಆಂಗ್ಲ ಮಾಧ್ಯಮ ಶಾಲೆಯಲ್ಲ್ಲಿ ಕನ್ನಡ ಡಿಂಡಿಮ
ಘಟಪ್ರಭಾ ಅ 1 : ಇಡಿ ಕನ್ನಡಿಗರಲ್ಲಿ ಒಗ್ಗಟ್ಟಿನ ಭಾವನೆಯೊಂದನ್ನು ಪುಟಿದೆಬ್ಬಿಸುವ ನವೆಂಬರ ಒಂದರ ನಾಡಹಬ್ಬ ಕನ್ನಡ ರಾಜ್ಯೋತ್ಸವವನ್ನು ರಾಜಾಪೂರ ಗ್ರಾಮದ ಜ್ಞಾನ ಗಂಗೋತ್ರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಚರಿಸಲಾಯಿತು.
ಭಾರತದಲ್ಲಿ ಭಾಷಾವಾರು ರಾಜ್ಯ ರಚನೆಯೂ ಆರಂಭವಾದ ನಂತರ ಅದುವರೆಗೆ ಹಂಚಿ ಹೋಗಿದ್ದ ಕನ್ನಡ ನಾಡು 1956ರ ನವೆಂಬರ 1 ರಂದು ಒಂದು ರಾಜ್ಯವಾಗಿ ರೂಪುಗೊಂಡಿತು. ಈ ದಿನವನ್ನೆ ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ಎಂದು ಆಚರಿಸುತ್ತಾ ಬಂದಿದ್ದೇವೆ ಈ ಆಚರಣೆಗೆ ನಿಜವಾದ ಅರ್ಥ ಬರಬೇಕಾದರೇ ನಾವೆಲ್ಲರೂ ಕನ್ನಡದ ಉಳಿವಿಗಾಗಿ ಹೋರಾಡೋಣ ಎಂದು ಶಾಲೆಯ ಪ್ರಧಾನ ಗುರುಮಾತೆ ಶಾಮಲಾ ಬಡಿಗೇರ ಹೇಳಿದರು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯೋತ್ಸವ ಕಮೀಟಿಯ ಶ್ರೀ ಗೋಪಾಲ ಕೆಂಪವ್ವಗೋಳ, ವಿನಯ ಪಾಟೀಲ, ಕಿರಣ ಕಲ್ಲೋಳಿ, ಗುರು ಗಡಹಿಂಗ್ಲಜ, ರಾಘು ಪತ್ತಾರ, ವಿಠ್ಠಲ ಪಾಕನಟ್ಟಿ ಸೇರಿದಂತೆ ಗ್ರಾಮ ಪಂಚಾಯತ ಸದಸ್ಯರು ಶಾಲೆಯ ಸರ್ವ ಶಿಕ್ಷಕ/ಶಿಕ್ಷಕೀಯರು ಉಪಸ್ಥಿತರಿದ್ದರು.
ಶಾಲೆಯ ಸಹ ಶಿಕ್ಷಕಿ ಕು. ದೀಪಾ ಬಬಲಿ ಹಾಗೂ ಶ್ವೇತಾ ಹುಕ್ಕೇರಿ ನಿರೂಪಿಸಿದರು. ಕು. ದೀಪಾ ಕಬ್ಬೂರಮಠ ಸ್ವಾಗತಿಸಿದರು, ಕು. ಜ್ಯೋತಿ ಬಡಿಗೇರ ವಂದಿಸಿದರು.