RNI NO. KARKAN/2006/27779|Friday, November 8, 2024
You are here: Home » breaking news » ಗೋಕಾಕ:ಗಡಿ ಜಿಲ್ಲೆ ಬೆಳಗಾವಿಯ ಪ್ರತಿಯೊಂದು ಗ್ರಾಮಗಳಲ್ಲಿ ಕನ್ನಡವನ್ನು ಗಟ್ಟಿಗೊಳಿಸುವ ಕಾರ್ಯವಾಗಬೇಕಾಗಿದೆ : ಖಾನಪ್ಪನವರ

ಗೋಕಾಕ:ಗಡಿ ಜಿಲ್ಲೆ ಬೆಳಗಾವಿಯ ಪ್ರತಿಯೊಂದು ಗ್ರಾಮಗಳಲ್ಲಿ ಕನ್ನಡವನ್ನು ಗಟ್ಟಿಗೊಳಿಸುವ ಕಾರ್ಯವಾಗಬೇಕಾಗಿದೆ : ಖಾನಪ್ಪನವರ 

ಗಡಿ ಜಿಲ್ಲೆ ಬೆಳಗಾವಿಯ ಪ್ರತಿಯೊಂದು ಗ್ರಾಮಗಳಲ್ಲಿ ಕನ್ನಡವನ್ನು ಗಟ್ಟಿಗೊಳಿಸುವ ಕಾರ್ಯವಾಗಬೇಕಾಗಿದೆ : ಖಾನಪ್ಪನವರ

ಗೋಕಾಕ ನ 1 : ಗಡಿ ಜಿಲ್ಲೆ ಬೆಳಗಾವಿಯ ಪ್ರತಿಯೊಂದು ಗ್ರಾಮಗಳಲ್ಲಿ ಕನ್ನಡವನ್ನು ಗಟ್ಟಿಗೊಳಿಸುವ ಕಾರ್ಯ ಕನ್ನಡ ಪರ ಸಂಘಟನೆಗಳಿಂದ ಆಗಬೇಕಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದರು.
ರಾಜ್ಯೋತ್ಸವ ಪ್ರಯುಕ್ತ ಗುರುವಾರದಂದು ನಗರದ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಮ್ಮಿಕೊಂಡಿದ್ದ ಅನ್ನಸಂತರ್ಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಳೆದ ಕೆಲವು ವರ್ಷಗಳಿಂದ ಒಂದಿಲ್ಲಾ ಒಂದು ಕಾರಣಗಳಿಂದ ಕನ್ನಡವನ್ನು ಅವಮಾನಿಸುವ ದುಸ್ಸಾಹಸ ನಡೆಯುತ್ತಿದೆ ಅದನ್ನು ಬೇರು ಸಮೇತ ಕಿತ್ತೆಸೆಯಲು ಜಿಲ್ಲೆಯಲ್ಲಿ ನೂರಕ್ಕೆ ನೂರರಷ್ಟು ಕನ್ನಡಮಯ ವಾತಾವರಣ ನಿರ್ಮಿಸಬೇಕಾಗಿದೆ. ಕನ್ನಡ ಕಾರ್ಯಕ್ರಮಗಳನ್ನು ನವ್ಹೆಂಬರ್ ತಿಂಗಳಿಗೆ ಮಾತ್ರ ಸೀಮಿತಗೊಳಿಸದೇ ವರ್ಷಾದ್ಯಂತ ಕನ್ನಡ ಪರ ಕಾರ್ಯಕ್ರಮಗಳನ್ನು ನಡೆಸಲು ಕನ್ನಡ ಪರ ಸಂಘಟನೆಗಳ ಮುಖಂಡರು ಮುಂದಾಗಬೇಕಾಗಿದೆ ಅಂದಾಗ ಮಾತ್ರ ಕನ್ನಡ ಗಟ್ಟಿತನ ಉಳಿಯಲು ಸಾಧ್ಯ. ಆ ದಿಶೆಯಲ್ಲಿ ಜಿಲ್ಲೆಯ ಎಲ್ಲ ಕನ್ನಡ ಪರ ಸಂಘಟನೆಗಳು ಮುಂದಾಗಬೇಕೆಂದು ಖಾನಪ್ಪನವರ ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ತಹಶೀಲ್ದಾರ ಜಿ.ಎಸ್. ಮಳಗಿ, ಡಿ.ವಾಯ್.ಎಸ್.ಪಿ. ಡಿ.ಟಿ. ಪ್ರಭು ಮಾತನಾಡಿ ಕನ್ನಡ ಭಾಷೆಯ ರಕ್ಷಣೆ ಜೊತೆಗೆ ಸಮಾಜ ಮುಖಿ ಕಾರ್ಯಗಳಲ್ಲಿಯೂ ಆಸಕ್ತಿ ತೋರಿ ರೋಗಿಗಳೊಂದಿಗೆ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿದ ಕರವೇಯ ಕಾರ್ಯವನ್ನು ಶ್ಲಾಘಸಿದರು.
ಈ ಸಂದರ್ಭದಲ್ಲಿ ಪಿ.ಎಸ್.ಐ. ರಘುನಾಥ ಚವ್ಹಾಣ, ಡಾ. ಬಾಗಲಕೋಟ, ಡಾ. ವಾಗ್ಮುಡೆ, ಕೃಷ್ಣಾ ಖಾನಪ್ಪನವರ, ಸಾಧಿಕ್ ಹಲ್ಯಾಳ, ದೀಪಕ್ ಹಂಜಿ, ನಿಜಾಮ ನದಾಫ್, ರಮೇಶ ಕಮತಿ, ಮಲ್ಲು ಸಂಪಗಾರ, ಮಹಾದೇವ ಮಕ್ಕಳಗೇರಿ, ಯಾಸೀನ ಮುಲ್ಲಾ, ಅಶೋಕ ಬಂಡಿವಡ್ಡರ, ಕೆಂಪಣ್ಣ ಕಡಕೋಳ, ರಾಮ ಪಿಡಾಯಿ, ಮಂಜು ಪ್ರಭುನಟ್ಟಿ, ಮಲ್ಲಪ್ಪ ತಲೆಪ್ಪಗೋಳ, ಭರಮಣ್ಣ ಪೂಜೇರಿ, ಲಕ್ಕಪ್ಪ ನಂದಿ, ಮುಗುಟ ಪೈಲವಾನ, ಯಾಸಿನ ಮುಲ್ಲಾ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Related posts: