RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಕರಾಳ ದಿನ ಆಚರಣೆ ಎಂಇಎಸ್ ನಾಯಕರಿಗೆ ಕರವೇಯಿಂದ ಚಪ್ಪಲಿ ಸೇವೆ

ಗೋಕಾಕ:ಕರಾಳ ದಿನ ಆಚರಣೆ ಎಂಇಎಸ್ ನಾಯಕರಿಗೆ ಕರವೇಯಿಂದ ಚಪ್ಪಲಿ ಸೇವೆ 

ಕರಾಳ ದಿನ ಆಚರಣೆ ಎಂಇಎಸ್ ನಾಯಕರಿಗೆ ಕರವೇಯಿಂದ ಚಪ್ಪಲಿ ಸೇವೆ

ಗೋಕಾಕ ನ 1 : ಎಂಇಎಸ್ ಕರಾಳ ದಿನಾಚಾರಣೆ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಕಾರ್ಯಕರ್ತರು ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಅವರ ನೇತೃತ್ವದಲ್ಲಿ ಗುರುವಾರದಂದು ಪ್ರತಿಭಟನೆ ನಡೆಯಿಸಿದರು .

ಗುರವಾರ ಮಧ್ಯಾಹ್ನ ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ಕರವೇ ಕಾರ್ಯಕರ್ತರು ಎಂಇಎಸ್ ನಾಯಕರ ಅಣಕು ಪ್ರದರ್ಶನ ಮಾಡಿ ಅದಕ್ಕೆ ಚಪ್ಪಲಿ ಸೇವೆಗೈದು ಪ್ರತಿಕೃತಿ ದಹಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿ ನಾಡದ್ರೋಹಿ ಸಂಘಟನೆಯನ್ನು ನಿಷೇಧಿಸುವಂತೆ ಆಗ್ರಹಿಸಿದರು

ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಕರವೇ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ನಾಡವಿರೋಧಿ ಎಂಇಎಸ್ ಕರಾಳ ದಿನ ನೆಪದಲ್ಲಿ ಬೆಳಗಾವಿ ತಾಲೂಕಿನ ಕೊಂಡಸಕೋಪ್ಪ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಪ್ಪು ಬಾವುಟ ಹಾರಿಸಿರುವದು ತರವಲ್ಲ ಈ ಕೃತ್ಯ ವೆಸಗಿದ ನಾಡವಿರೋಧಿಗಳನ್ನು ಬಂಧಿಸಿ ಗಡಿಪಾರು ಮಾಡಬೇಕು ಇಲ್ಲದಿದ್ದರೆ ಜಿಲ್ಲಾದ್ಯಂತ ಉಗ್ರ ಪ್ರತಿಭಟನೆ ಮಾಡಲಾಗುವದು . ರಾಜಾದ್ಯಂತ ಹೋರಾಟಗಳನ್ನು ಮಾಡಿ ಜಿಲ್ಲಾಡಳಿತ , ಪೋಲಿಸ್ ಆಯುಕ್ತ , ಗೃಹ ಸಚಿವರಿಗೆ ಎಂಇಎಸ್ ಗೆ ಕರಾಳ ದಿನಾಚಾರಣೆ ಆಚರಿಸಲು ಅನುಮತಿ ನೀಡಬಾರದೆಂದು ಮನವಿ ಮಾಡಿದರು ಕೂಡಾ ರಾಜಕಾರಣಿಗಳ ಒತ್ತಾಯಕ್ಕೆ ಮನಿದು ಕನ್ನಡಿಗರ ಮನವಿಯನ್ನು ಧಿಕ್ಕರಿಸಿ ಜಿಲ್ಲಾಡಳಿತ ಮತ್ತು ಪೋಲಿಸ್ ಆಯುಕ್ತರು ಕರಾಳ ದಿನಾಚಾರಣೆ ಮಾಡಲು ಎಂಇಎಸ್ ಗೆ ಷರತ್ತುಬದ್ದ ಅನುಮತಿ ನೀಡಿ ಕನ್ನಡಿಗರ ಭಾವನೆಗಳಿಗೆ ಧಕ್ಕೆ ಉಂಟುಮಾಡಿರುವದು ಖಂಡನೀಯ ಪೋಲಿಸ ಇಲಾಖೆ ಷರತ್ತುಗಳನ್ನು ಉಲ್ಲಂಘಿಸಿ ನಾಡವಿರೋಧಿ ಎಂಇಎಸ್ ಸಂಘಟನೆ ಕನ್ನಡ ಶಾಲೆ ಮೇಲೆ ಕಪ್ಪು ಭಾವುಟ ಹಾರಿಸದವರನ್ನು ಆದಷ್ಟು ಬೇಗ ಬಂಧಿಸಿ ಶಿಕ್ಷಿಸಬೇಕೆಂದು ಖಾನಪ್ಪನವರ ಜಿಲ್ಲಾಡಳಿ ಮತ್ತು ಪೋಲೀಸ ಆಯುಕ್ತರನ್ನು ಆಗ್ರಹಿಸಿದರು

Related posts: