ಘಟಪ್ರಭಾ:ಪರ ಭಾಷಾ ವ್ಯಾಮೋಹವನ್ನು ಬಿಟ್ಟು ತಮ್ಮ ಮಕ್ಕಳಿಗೆ ಕನ್ನಡವನ್ನು ಕಲಿಸಿ : ಕಾಶಿನಾಥ ಕುರಣಿ
ಪರ ಭಾಷಾ ವ್ಯಾಮೋಹವನ್ನು ಬಿಟ್ಟು ತಮ್ಮ ಮಕ್ಕಳಿಗೆ ಕನ್ನಡವನ್ನು ಕಲಿಸಿ : ಕಾಶಿನಾಥ ಕುರಣಿ
ಘಟಪ್ರಭಾ ನ 2 : ಪರ ಭಾಷಾ ವ್ಯಾಮೋಹವನ್ನು ಬಿಟ್ಟು ತಮ್ಮ ಮಕ್ಕಳಿಗೆ ಕನ್ನಡವನ್ನು ಕಲಿಸಿ ಎಂದು ಕರ್ನಾಟಕ ಯುವ ಸೇನೆ ಸಂಘಟನೆಯ ರಾಜ್ಯಾಧ್ಯಕ್ಷ ಕಾಶಿನಾಥ ಕುರಣಿ ಹೇಳಿದರು.
ಅವರು ಗುರುವಾರ ಮಲ್ಲಾಪೂರ ಪಿ.ಜಿ (ಘಟಪ್ರಭಾ) ಪಟ್ಟಣದ ಶ್ರೀ ವಿಠ್ಠಲ ಮಂದಿರದಲ್ಲಿ ಕರ್ನಾಟಕ ಯುವ ಸೇನೆÉಯಿಂದ ಹಮ್ಮಿಕೊಂಡ 63 ನೇ ಕನ್ನಡ ರಾಜ್ಯೋತಸ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ನಾವು ನಮ್ಮ ಮಕ್ಕಳನ್ನು ಬೇರೆ ಭಾಷೆಯನ್ನು ಕಲಿಸಿ ಅವರಲ್ಲಿ ಕನ್ನಡದ ಬಗ್ಗೆ ಪ್ರೇಮವನ್ನು ನಿರೀಕ್ಷಿಸಿಸುವುದು ತಪ್ಪಾಗುತ್ತದೆ. ಸರ್ಕಾರ ಕನ್ನಡದಲ್ಲಿ ಕಲಿತವರಿಗೆ ಮಾತ್ರ ಸರ್ಕಾರಿ ನೌಕರಿಯನ್ನು ನೀಡಬೇಕು. ಅಲ್ಲದೇ ನಾಡದ್ರೋಹಿ ಎಂ.ಇ.ಎಸ್ ಸಂಘಟನೆಗೆ ಕರಾಳ ದಿನಾಚರಣೆ ಆಚರನೆಗೆ ಅನುಮತಿ ನೀಡಿರುವುಕ್ಕೆ ಸರ್ಕಾರದ ಕ್ರಮವನ್ನು ಖಂಡಿಸಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಇಲ್ಲಿಯ ಗುಬ್ಬಲಗುಡ್ಡ ಕೆಂಪಯ್ಯಾಸ್ವಾಮಿ ಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ವಹಿಸಿದ್ದರು. ಸಂಘಟನೆಯ ರಾಜ್ಯ ಉಪಾಧ್ಯಕ್ಷ ಕೆಂಪಣ್ಣ ಚೌಕಶಿ, ಗ್ರಾ.ಪಂ ಅಧ್ಯಕ್ಷ ಎಸ್.ಐ.ಬೆಣವಾಡಿ, ಹಿರಿಯರಾದ ಸುಭಾಸ ಹುಕ್ಕೇರಿ ಮಾತನಾಡಿದರು.
ನಂತರ ಹಮ್ಮಿಕೊಂಡ ಮೆರವಣಿಗೆ ಹಿರಿಯರಿಂದ ತಾಯಿ ಭುವನೇಶ್ವರಿಯ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುದರೊಂದಿಗೆ ಚಾಲನೆ ನೀಡಲಾಯಿತು. ಪಟ್ಟಣದ ಶ್ರೀ ವಿಠ್ಠಲ ಮಂದಿರದಿಂದ ಪ್ರಾರಂಭಗೊಂಡು ಮೆರವಣಿಗೆಯು ಮೃತ್ಯುಂಜಯ ವೃತ್ತಕ್ಕೆ ಬಂದು ಸಮಾರೋಪಗೊಂಡಿತು. ಮುಂಜಾನೆ ನಡೆದ ಬೈಕ ರ್ಯಾಲಿಯಲ್ಲಿ ಸಂಘಟನೆಯ ನೂರಾರು ಕಾರ್ಯಕರ್ತರು ಪಾಲ್ಗೊಂಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ವೀರಣ್ಣಾ ರಾ.ಸಂಗಮನವರ, ಭರಮಣ್ಣಾ ಗಾಡಿವಡ್ಡರ, ಅಖಿಲೇಶ ಕಪರಟ್ಟಿ, ನಾಗಪ್ಪಾ ಹತ್ತಿಕಟಗಿ, ಅಪ್ಪಾರಾವ ರತ್ನಾಕರ, ಫಿರೋಜ ಸನದಿ, ವಿನಯ ಕೋರೆ, ಹಿರಿಯರಾದ ವಿಠ್ಠಲ ಹುಕ್ಕೇರಿ, ಸಿದ್ರಾಮ ಚೌಕಶಿ, ಪ.ಪಂ ಸದಸ್ಯರಾದ ಮಲ್ಲು ಕೋಳಿ, ಮಾರುತಿ ಹುಕ್ಕೇರಿ, ಗೋಕಾಕ ತಾಲೂಕಾಧ್ಯಕ್ಷ ದಸ್ತಗೀರ ಜಮಾದಾರ, ಉಪಾಧ್ಯಕ್ಷರಾದ ಭೀಮಪ್ಪಾ ಗಂಟ್ಟೆನ್ನವರ, ಶಂಕರ ಮುಗ್ಗನ್ನವರ, ಸ್ವಾಮಿ ಕೋಮಾರಿ, ಅಖಿಲೇಶ, ಹುಕ್ಕೇರಿ ತಾಲೂಕಾ ಅಧ್ಯಕ್ಷ ಸಲೀಮ ಮುಲ್ಲಾ, ಮಹಿಳಾ ಘಟಕ ಅಧ್ಯಕ್ಷೆ ಫರೀದಾ ಮುಲ್ಲಾ, ಉಪಾಧ್ಯಕ್ಷ ರಂಜಾನ ಮುಜಾವರ, ಮೋಶಿನ ಮುಲ್ಲಾ, ಬೈಲಹೊಂಗಲ ತಾಲೂಕಾಧ್ಯಕ್ಷ ಸುರೇಶ ಕೊಂಡೂರ, ಉಪಾಧ್ಯಕ್ಷ ರಮೇಶ ಸಂಕನ್ನವರ, ರವಿ ಸಂಕನ್ನವರ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.