RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಕಬ್ಬು ಬೆಳೆಗಾರರ ಹಿತ ಕಾಯುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ : ಈರಣ್ಣ ಕಡಾಡಿ

ಗೋಕಾಕ:ಕಬ್ಬು ಬೆಳೆಗಾರರ ಹಿತ ಕಾಯುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ : ಈರಣ್ಣ ಕಡಾಡಿ 

ಕಬ್ಬು ಬೆಳೆಗಾರರ ಹಿತ ಕಾಯುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ : ಈರಣ್ಣ ಕಡಾಡಿ
ಗೋಕಾಕ ನ 3 : ಕಬ್ಬು ಬೆಳೆಗಾರರ ಹಿತ ಕಾಯುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಜಿ.ಪಂ ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದರು

ಶನಿವಾರದಂದು ನಗರದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು

ಕಬ್ಬು ಬೆಳಗಾರರ ಹಿತ ರಕ್ಷಣಾ ವೇದಿಕೆ ವತಿಯಿಂದ ನವೆಂಬರ 5 ರಂದು ಮೂಡಲಗಿ ಪಟ್ಟಣದಲ್ಲಿ ಕಬ್ಬು ಬೆಳೆಗಾರರ ಜಾಗೃತಿ ಸಮಾವೇಶ ಹಮ್ಮಿಕೋಳ್ಳಲಾಗಿದೆ ಈ ಸಮಾವೇಶ ರಾಜಕೀಯ ರಹಿತ ಮತ್ತು ಯಾವುದೇ ಕಾರಖಾನೆಯನ್ನು ಟಾರ್ಗೆಟ್ ಮಾಡಿ ಮಾಡುವ ಸಮಾವೇಶವಲ್ಲ ಇಂದು ರೈತರ ಹಿತ ರಕ್ಷಣೆಗಾಗಿ , ರೈತರ ಆತ್ಮಹತ್ಯೆಯನ್ನು ತಡೆಯಲ್ಲು ಕೈಗೊಡಂತ ಸಮಾವೇಶವಾಗಿದೆ ಈ ಸಮಾವೇಶದಲ್ಲಿ ಮಾಹಾ ಸಸಂದ ಸೇತ್ಕರಿ ಸಂಘಟನೆಯ ಅಧ್ಯಕ್ಷ ರಾಜು ಶೆಟ್ಟಿ ಉತ್ತರ ಪ್ರದೇಶದ ವ್ಹಿ .ಎಮ್ ಸಿಂಗ್ , ರೈತಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ , ಜಿಲ್ಲೆಯ ಕೆಲ ಮಾಜಿ ಮತ್ತು ಹಾಲಿ ಶಾಶಕರು ಪಾಲ್ಗೋಳಲ್ಲಿದ್ದಾರೆ

ಕಬ್ಬು ಹಂಗಾಮಿ ಪ್ರಾರಂಭ ಮಾಡುವ ಮೊದಲು ಎಸ್ ಎ ಬಿ ಹಾಗೂ ಎಫ್ ಆರ್.ಪಿ ಕಾನೂನು ಅನ್ವಯ ದರ ನಿಗದಿ ಮಾಡುವಂತೆ ಒತ್ತಾಯಿಸಲಾಗುವದು. ಪಕ್ಕದ ಮಹಾ , ಹರಾಯಾಣ,ಗುಜರಾತ ಸೇರಿದಂತೆ ಹಲವು ರಾಜ್ಯಗಳಲ್ಲಿ ಸರಕಾರಗಳು ನಿಗದಿ ಪಡೆಸಿದಂತೆ ಕರ್ನಾಟಕದಲ್ಲಿಯೂ ಕಬ್ಬು ಬೆಳೆಗಾರರಿಗೆ ದರ ನೀಡಬೇಕು. ಇದರ ಬಗ್ಗೆ ರಾಜ್ಯದ ಸರಕಾರಗಳು ರೈತರನ್ನು ಮತ್ತು ಅಧಿಕಾರಿಗಳನ್ನು ಅಧ್ಯಯನಕ್ಕೆ ಕಳುಹಿಸಿ ವರದಿ ತರಿಸಿದರು ಸಹ ಸರಕಾರ ಆ ವರದಿಯನ್ನು ಜಾರಿ ಮಾಡಿಲ್ಲಾ ಜಗ್ಗದೀಶ ಶೆಟ್ಟರ್ ಮುಖ್ಯಮಂತ್ರಿ ಯಾಗಿದ್ದಾಗ ಎಸ್.ಎ.ಪಿ ದರ ನಿಗದಿ ಮಾಡಿದರು ಸಹ ಇಂದಿನ ಸರಕಾರ ಅದನ್ನು ಜಾರಿಗೆ ತರುತ್ತಿಲ್ಲಾ ಸಕ್ಕರೆ ಉತ್ಪಾದನೆ ಮೇಲೆ ದರ ನಿಗದಿಮಾಡಿ ರೈತರಿಗೆ ವಂಚಿಸುತ್ತಿದ್ದಾರೆ ಈ ಪದ್ಧತಿಯನ್ನು ಕೈಬಿಟ್ಟು ರೀಕ್ವರಿ ಮೇಲೆ ಕಬ್ಬಿನ ದರ ನಿಗದಿಮಾಡಿ ರೈತರ ಹಿತ ಕಾಪಾಡಲು ಸರಕಾರ ಮುಂದಾಗಬೇಕು ಕಬ್ಬು ಕಟಾವ (ಗ್ಯಾಂಗ್) ಮಾಡುವವರ ಪ್ರಮಾಣ ಹೆಚ್ಚಿಗೆ ಮಾಡಬೇಕು ಇದರಿಂದ ಕಬ್ಬು ಬೆಳಗಾರರ ಮತ್ತು ರೈತರನ್ನು ಉಳಿಸಲು ಸಾಧ್ಯ ಎಂದು ಕಡಾಡಿ ಸರಕಾರವನ್ನು ಒತ್ತಾಯಿಸಿದರು .

ಬಿಜೆಪಿ ಮುಖಂಡ ಅಶೋಕ ಪೂಜಾರಿ ಮಾತನಾಡಿ ರೈತರ ಹಿತಾಶಕ್ತಿ ಕಾಯುವ ಮಹತ್ತರ ಉದ್ದೇಶದಿಂದ ಕಬ್ಬು ಬೆಳೆಗಾರರ ಹಿತ ರಕ್ಷಣಾ ವೇದಿಕೆಯಿಂದ ಕಬ್ಬು ಬೆಳಗಾರರ ಜಾಗೃತ ಸಮಾವೇಶ ನಡೆಸಲಾಗುತ್ತಿದೆ . ಸರಕಾರ ರೈತರ ಹಿತ ಕಾಪಾಡುವಲ್ಲಿ ವಿಫಲವಾಗಿವೆ . ಜಿಲ್ಲೆ ಮತ್ತು ರಾಜ್ಯಾದ್ಯಂತ ಸಕ್ಕರೆ ಕಾರಖಾನೆಗಳು ರೈತರಿಗೆ ಬಿಲ್ಲ ನೀಡದೆ ಮೋಸಮಾಡುತ್ತಿದ್ದಾರೆ . ರೈತ ತಾನು ಪೂರೈಸಿದ ಕಬ್ಬಿನ ಬಿಲ್ಲಗೋಸ್ಕರ ನ್ಯಾಯಾಲಯದಲ್ಲಿ ಮುಕ್ಕದ್ದಮೆ ಹೂಡಿದರೆ ಮುಂದಿನ ಹಂಗಾಮಿನಲ್ಲಿ ಅಂತಹ ರೈತರ ಕಬ್ಬು ತರಿಸುಕೋಳ್ಳುತ್ತಿಲ್ಲಾ ಕಾರಖಾನೆಯವರು ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಅದನ್ನು ತಡೆಗಟ್ಟುವ ನೀಟ್ಟಿನಲ್ಲಿ ಈ ಸಮಾವೇಶವನ್ನು ಪಕ್ಷಾತೀತವಾಗಿ ನಡೆಸಲು ನಿರ್ಧರಿಸಲಾಗಿದೆ . ಸಮಾವೇಶದಲ್ಲಿ ಸರಕಾರ ತತಕ್ಷಣದಲ್ಲಿ ಬಾಕಿ ಉಳಿಸಿಕೊಂಡ ಬಿಲ್ಲನ್ನು ನೀಡಬೇಕು ಎಂದು ಒತ್ತಾಯಿಸಲಾಗುವದು . ಈ ಸಮಾವೇಶದಲ್ಲಿ ಎಲ್ಲ ರೈತಬಾಂಧವರು ಪಕ್ಷ ಬೇಧ ಮರೆತು ಪಾಲ್ಗೋಳಬೇಕೆಂದು ಪೂಜಾರಿ ಮನವಿ ಮಾಡಿದರು

ಪತ್ರಿಕಾ ಗೋಷ್ಠಿಯಲ್ಲಿ ರೈತ ಮುಖಂಡರಾದ ಪ್ರಕಾಶ ಬಾಗೋಜಿ , ಪ್ರದೀಪ ಪೂಜಾರಿ , ಯಲ್ಲಪ್ಪಾ ತಿಗಡಿ ಸೇರಿದಂತೆ ಅನೇಕರು ಇದ್ದರು.

Related posts: