ಗೋಕಾಕ:ಸರಕಾರ ವಿಶಿಷ್ಠಚೇತನ ಮಕ್ಕಳ ಸರ್ವಾಂಗಿಣ ಬೆಳವಣಿಗೆಗಾಗಿ ಶ್ರಮಿಸುತ್ತಿದೆ : ಎ.ಬಿ.ಮಲಭನ್ನವರ
ಸರಕಾರ ವಿಶಿಷ್ಠಚೇತನ ಮಕ್ಕಳ ಸರ್ವಾಂಗಿಣ ಬೆಳವಣಿಗೆಗಾಗಿ ಶ್ರಮಿಸುತ್ತಿದೆ : ಎ.ಬಿ.ಮಲಭನ್ನವರ
ಗೋಕಾಕ ನ 3 : ಸರ್ಕಾರ ಹಲವಾರು ಸೌಲಭ್ಯಗಳನ್ನು ಕಲ್ಪಿಸಿ ವಿಶಿಷ್ಠಚೇತನ ಮಕ್ಕಳ ಸರ್ವಾಂಗಿಣ ಬೆಳವಣಿಗೆಗಾಗಿ ಶ್ರಮಿಸುತ್ತಿದೆ ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎ.ಬಿ.ಮಲಭನ್ನವರ ಹೇಳಿದರು.
ಸಮೀಪದ ತುಕ್ಕಾನಟ್ಟಿ ಗ್ರಾಮದ ಬಡ್ರ್ಸ್ ಶ್ರವಣ ಚೇತನ ಮಕ್ಕಳ ವಸತಿ ಶಾಲೆಯಲ್ಲಿ ಮಕ್ಕಳಿಗೆ ಹಾಲು ನೀಡುವ ಮೂಲಕ ಸರ್ಕಾರದ ಕ್ಷೀರ ಭಾಗ್ಯ ಯೋಜನೆಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ವಿಶಿಷ್ಠಚೇತನ ಮಕ್ಕಳಿಗೆ ಸೂಕ್ತವಾದ ಮಾರ್ಗದರ್ಶನ ಹಾಗೂ ಅವಕಾಶಗಳನ್ನು ಕಲ್ಪಿಸಿದರೇ ಅವರು ಕೂಡಾ ಯಾವುದೇ ಪ್ರತಿಭೆಗಳಿಗೆ ಕಡಿಮೆಯಿಲ್ಲದಂತೆ ವಿಶೇಷವಾದ ಪ್ರತಿಭೆಗಳಾಗುತ್ತಾರೆ. ಪಾಲಕರು ಹಾಗೂ ಶಿಕ್ಷಕರು ಸರ್ಕಾರದ ಸೌಲಭ್ಯಗಳ ಸದುಪಯೋಗದಿಂದ ವಿಶಿಷ್ಠ ಚೇತರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಡ್ರ್ಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಆರ್.ಎಮ್.ಪಾಟೀಲ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯ ಅಧಿಕಾರಿ ಎಮ್.ಬಿ.ಪಾಟೀಲ, ಗಣ್ಯರಾದ ಜಗದೀಶ ಬಾಗೇವಾಡಿ, ಆರ್.ಎಮ್.ಕೊಣಸಾಗರ, ಎಲ್.ಟಿ.ತೋಳಿ, ಮುಖ್ಯೋಪಾಧ್ಯಯ ಓಂಪ್ರಕಾಶ ಹುಳ್ಳಿ, ಆರ್.ಬಿ.ಜರಾಳೆ ಇದ್ದರು.