ಗೋಕಾಕ:ಹ್ಯಾಂಡ್‍ಬಾಲ್ ಪಂದ್ಯಾವಳಿಯಲ್ಲಿ ಸಿ.ಎಸ್.ಅಂಗಡಿ ಪ.ಪೂ ಮಹಾವಿದ್ಯಾಲಯದ ಬಾಲಕಿಯರ ತಂಡ ದ್ವಿತೀಯ ಸ್ಥಾನ
ಹ್ಯಾಂಡ್‍ಬಾಲ್ ಪಂದ್ಯಾವಳಿಯಲ್ಲಿ ಸಿ.ಎಸ್.ಅಂಗಡಿ ಪ.ಪೂ ಮಹಾವಿದ್ಯಾಲಯದ ಬಾಲಕಿಯರ ತಂಡ ದ್ವಿತೀಯ ಸ್ಥಾನ
ಗೋಕಾಕ ನ 4 : ಅಥಣಿಯ ಜೆ.ಎ. ಪ.ಪೂ ಮಹಾವಿದ್ಯಾಲಯದಲ್ಲಿ ನಡೆದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಮಟ್ಟದ ಹ್ಯಾಂಡ್‍ಬಾಲ್ ಪಂದ್ಯಾವಳಿಯಲ್ಲಿ ಇಲ್ಲಿಯ ಕೆಎಲ್‍ಇ. ಸಿ.ಎಸ್.ಅಂಗಡಿ ಪ.ಪೂ ಮಹಾವಿದ್ಯಾಲಯದ ಬಾಲಕಿಯರ ತಂಡ ದ್ವಿತೀಯ ಸ್ಥಾನ ಪಡೆದು, ಸೋನಾಲಿ ಕುಲಕರ್ಣಿ, ಭಾಗ್ಯಾ ಭಾವಿಕಟ್ಟಿ, ರುತ್ವೀಕಾ ಕೊಳಗಿ, ಲಕ್ಷ್ಮೀ ಗೌಡನವರ ಹಾಗೂ ಸುಮಯ್ಯಾ ಅವಟಿ ಈ ಐದು ವಿದ್ಯಾರ್ಥಿನಿಯರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ನಗರದ ಜೆ.ಎಸ್.ಎಸ್ ಪ.ಪೂ ಮಹಾವಿದ್ಯಾಲಯದಲ್ಲಿ ನಡೆದ ಜಿಲ್ಲಾ ಮಟ್ಟದ ಖೋ-ಖೋ ಪಂದ್ಯಾವಳಿಯಲ್ಲಿ ಬಾಲಕರ ತಂಡ ಪ್ರಥಮ ಸ್ಥಾನ ಪಡೆದು, ಮಂಜುನಾಥ ಹೊನಕುಪ್ಪಿ, ಮಾಳಪ್ಪಾ ಕೆಂಪಣ್ಣಗೋಳ, ಉಮೇಶ ಹಳ್ಳೂರ, ಹನಮಂತ ಗಾಡಿವಡ್ಡರ, ಮಹಾನಿಂಗ ಕುಂಚನೂರ, ಕೃಷ್ಣಾ ಪಡಸಲಗಿ ಹಾಗೂ ಬಾಲಕಿಯರ ತಂಡದಲ್ಲಿ ಗಂಗವ್ವಾ ಹೊಸಕುರುಬರ, ಮಾಳವ್ವಾ ಕೊಳವಿ, ಕಾವೇರಿ ಭಾಗೋಜಿ, ಬಸವ್ವಾ ನಾಯಿಕ, ಲಕ್ಕವ್ವಾ ಬಬಲೆನ್ನವರ, ರೇಣುಕಾ ಹನಮಣ್ಣವರ, ಕಾವೇರಿ ಬೆಳ್ಳಿ, ರೇಣುಕಾ ಹನಮಣ್ಣವರ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ನಿರ್ದೆಶಕ ಜಯಾನಂದ ಮುನವಳ್ಳಿ, ಆಡಳಿತಾಧಿಕಾರಿ ಜೆ.ಎಮ್.ಅಂದಾನಿ, ಪ್ರಾಚಾರ್ಯ ಕೆ.ಸಿ.ಹತಪಾಕಿ,ದೈಹಿಕ ಶಿಕ್ಷಣ ಉಪನ್ಯಾಸಕ ಎಸ್.ವಿ.ವಾಲಿ, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.