ಘಟಪ್ರಭಾ:ಟ್ಯಾಕ್ಟರ್ ಬೈಕ್ ಡಿಕ್ಕಿ ಸ್ಥಳದಲ್ಲೇ ಇಬ್ಬರ ಸಾವು
ಟ್ಯಾಕ್ಟರ್ ಬೈಕ್ ಡಿಕ್ಕಿ ಸ್ಥಳದಲ್ಲೇ ಇಬ್ಬರ ಸಾವು
ಘಟಪ್ರಭಾ ನ 4 : ಇಲ್ಲಿಗೆ ಸಮೀಪದ ಜೆ.ಜಿ ಆಸ್ಪತ್ರೆಯ ನಿಸರ್ಗೋಪಚಾರ ಕೇಂದ್ರದ ಹತ್ತಿರ ದ್ವಿಚಕ್ರ ವಾಹನ ಹಾಗೂ ಕಬ್ಬು ತುಂಬಿದ ಟ್ಯಾಕ್ಟರ್ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರ ಇಬ್ಬರು ಸ್ಥಳದಲ್ಲೇ ಸಾವನಪ್ಪಿದ ಘಟನೆ ರವಿವಾರ ರಾತ್ರಿ 8 ಗಂಟೆ ಸುಮಾರಿಗೆ ಸಂಭವಿಸಿದೆ.
ಮೃತರಲ್ಲಿ ಓರ್ವ ಹುಕ್ಕೇರಿ ತಾಲೂಕಿನ ಕೊಟಬಾಗಿ ಗ್ರಾಮದ ಬಸವಣ್ಣಿ ಮಂತ್ರಿ (40) ಹಾಗೂ ಇನ್ನೋರ್ವ ಶಿರಡಾಣದ ಗ್ರಾಮದ ಕೆಂಪಣ್ಣ ಲಗಮಣ್ಣ ಪಾಟೀಲ (40) ಎಂದು ಗುರುತಿಸಲಾಗಿದೆ. ಹುಕ್ಕೇರಿ ಸಿ.ಪಿ.ಆಯ್. ಹಾಗೂ ಪಿ.ಎಸ್.ಆಯ್ ಸ್ಥಳಕ್ಕೆ ಭೆಟ್ಟಿ ನೀಡಿ ಪರಿಶೀಲನೆ ನಡೆಸಿದ್ದು, ಹುಕ್ಕೇರಿ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.