RNI NO. KARKAN/2006/27779|Saturday, October 19, 2024
You are here: Home » breaking news » ಬೆಳಗಾವಿ:ಅನುಕಂಪ, ಹೊಂದಾಣಿಕೆಯೇ ಬಿಜೆಪಿ ಸೋಲಿಗೆ ಕಾರಣ : ಸಂಸದ ಅಂಗಡಿ

ಬೆಳಗಾವಿ:ಅನುಕಂಪ, ಹೊಂದಾಣಿಕೆಯೇ ಬಿಜೆಪಿ ಸೋಲಿಗೆ ಕಾರಣ : ಸಂಸದ ಅಂಗಡಿ 

ಅನುಕಂಪ, ಹೊಂದಾಣಿಕೆಯೇ ಬಿಜೆಪಿ ಸೋಲಿಗೆ ಕಾರಣ : ಸಂಸದ ಅಂಗಡಿ

ಬೆಳಗಾವಿ ನ 6 : ಜಮಖಂಡಿಯಲ್ಲಿ ಸಿದ್ದು ನ್ಯಾಮಗೌಡ ಅವರ ಅನುಕಂಪ ಹಾಗೂ ಬಳ್ಳಾರಿಯಲ್ಲಿ ಮೈತ್ರಿ ಪಕ್ಷಗಳ ಹೊಂದಾಣಿಕೆಯೇ ಬಿಜೆಪಿ ಸೋಲಿಗೆ ಕಾರಣವಾಗಿದೆ ಎಂದು ಬೆಳಗಾವಿ ಸಂಸದ ಸುರೇಶ ಅಂಗಡಿ ಅಭಿಪ್ರಾಯ ಪಟ್ಟಿದ್ದಾರೆ
ಉಪಚುನಾವಣೆ ಫಲಿತಾಂಶ ಹಿನ್ನೆಲೆಯಲ್ಲಿ ‌ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್​ ಅಂಗಡಿ, ಜಮಖಂಡಿಯಲ್ಲಿ ಅನುಕಂಪದ ಅಲೆಯಿಂದ ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡ ಗೆಲುವು ದಾಖಲಿಸಿದ್ದಾರೆ. ಬಳ್ಳಾರಿಯಲ್ಲಿ ಶ್ರೀರಾಮುಲು ಕೂಡ ಜನಪ್ರಿಯ ನಾಯಕರಾಗಿದ್ದಾರೆ. ಆದರೆ ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆಯೇ ಶ್ರೀರಾಮುಲು ಸಹೋದರಿ ಜೆ. ಶಾಂತಾ ಅವರ ಸೋಲಿಗೆ ಮುಖ್ಯ ಕಾರಣ ಎಂದರು.

ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಹೈಜಾಕ್ ಮಾಡಲಾಗಿದ್ದು, ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಅನುಮಾನ ಮೂಡತೊಡಗಿವೆ ಎಂದು ತಿಳಿಸಿದರು. ನಾವು ಬಲಾಢ್ಯರು ಎಂದು ತೋರಿಸಲು ಸಿಎಂ ಹೆಚ್​ಡಿಕೆ ಮುಂದಾಗಿದ್ದಾರೆ. ಸದ್ದಾಂ ಹುಸೇನ್ ಸಹ ಬಲಾಢ್ಯ ಇದ್ದ. ಆದರೆ ಮುಂದೆ ಅವನ ಕಥೆ ಏನಾಯಿತು ಎಂಬುವುದು ಇಡೀ ಜಗತ್ತಿಗೆ ಗೊತ್ತಿದೆ. ರಾಜಕಾರಣದಲ್ಲಿ ಹೈಜಾಕ್ ವ್ಯವಸ್ಥೆ ನಿಲ್ಲಬೇಕು ಎಂದು ಅಭಿಪ್ರಾಯಪಟ್ಟರು.

Related posts: