ಬೆಳಗಾವಿ:ರೈತರಿಗೆ ಅರೇಸ್ಟ್ ವಾರೆಂಟ್ ಹಿನ್ನೆಲೆ : ಡಿಸಿ ನೇತೃತ್ವದಲ್ಲಿ ಬ್ಯಾಂಕ್ ಅಧಿಕಾರಿಗಳ ಸಭೆ
ರೈತರಿಗೆ ಅರೇಸ್ಟ್ ವಾರೆಂಟ್ ಹಿನ್ನೆಲೆ : ಡಿಸಿ ನೇತೃತ್ವದಲ್ಲಿ ಬ್ಯಾಂಕ್ ಅಧಿಕಾರಿಗಳ ಸಭೆ
ಬೆಳಗಾವಿ ನ 7 : ಸರಕಾರದ ನಿರ್ದೆಶನದ ನಂತರವೂ ಗಡಿ ಜಿಲ್ಲೆಯ ರೈತರಿಗೆ ಬ್ಯಾಂಕುಗಳು ನ್ಯಾಯಾಲಯದಿಂದ ಅರೇಸ್ಟ್ ವಾರೆಂಟ್ ಹೊರಡಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಬ್ಯಾಂಕುಗಳಿಗೆ ಬಿಸಿ ಮುಟ್ಟಿಸಲು ಮುಂದಾಗಿದೆ
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನಿರ್ದೇಶನದ ಮೇರೆಗೆ ಡಿಸಿ ಎಸ್.ಬಿ. ಬೊಮ್ಮನಹಳ್ಳಿ ಹಾಗೂ ಎಸ್ಪಿ ಸುಧೀರ್ ಕುಮಾರ ರೆಡ್ಡಿ ಜಿಲ್ಲೆಯ ಎಲ್ಲಾ ಬ್ಯಾಂಕ್ ಅಧಿಕಾರಿಗಳ ಹಾಗೂ ರೈತರ ಸಭೆ ನಡೆಸುತ್ತಿದ್ದಾರೆ.
ನಗರದ ಡಿಸಿ ಕಚೇರಿ ಸಭಾ ಭವನದಲ್ಲಿ ಸಭೆ ಆರಂಭವಾಗಿದ್ದು, ಎಲ್ಲಾ ಬ್ಯಾಂಕ್ಗಳ ಪ್ರತಿನಿಧಿಗಳು ಹಾಗೂ ರೈತ ಸಂಘಟನೆಯ ಮುಖಂಡರು ಪಾಲ್ಗೊಂಡಿದ್ದಾರೆ. ಆ್ಯಕ್ಸಿಸ್ ಬ್ಯಾಂಕ್ ಜಿಲ್ಲೆಯ 140 ರೈತರಿಗೆ ಚೆಕ್ ಬೌನ್ಸ್ ಪ್ರಕರಣದಡಿ ಕೋಲ್ಕತ್ತಾ ಕೋರ್ಟ್ ಮೂಲಕ ಅರೆಸ್ಟ್ ವಾರೆಂಟ್ ಜಾರಿಗೊಳಿಸಿತ್ತು. ಬ್ಯಾಂಕ್ ನೀತಿ ಖಂಡಿಸಿ ರಾಜ್ಯಾದಾದ್ಯಂತ ರೈತರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಆಕ್ಸಿಸ್ ಬ್ಯಾಂಕ್ ಕೇಸ್ ಹಿಂಪಡೆಯುವುದಾಗಿ ಘೋಷಿಸಿತ್ತು.
ಇಂದು ಡಿಸಿ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು, ಬ್ಯಾಂಕ್ಗಳ ಪ್ರತಿನಿಧಿಗಳ ಜತೆಗೆ ಡಿಸಿ ಚರ್ಚೆ ನಡೆಸಿದ್ದಾರೆ