RNI NO. KARKAN/2006/27779|Tuesday, November 5, 2024
You are here: Home » breaking news » ಗೋಕಾಕ:ಬೆಟಗೇರಿ ಗ್ರಾಮದ ಶ್ರೀ ದುರ್ಗಾದೇವಿ ಜಾತ್ರಾಮಹೋತ್ಸವ ಸಂಪನ್ನ

ಗೋಕಾಕ:ಬೆಟಗೇರಿ ಗ್ರಾಮದ ಶ್ರೀ ದುರ್ಗಾದೇವಿ ಜಾತ್ರಾಮಹೋತ್ಸವ ಸಂಪನ್ನ 

ಬೆಟಗೇರಿ ಗ್ರಾಮದ ಶ್ರೀ ದುರ್ಗಾದೇವಿ ಜಾತ್ರಾಮಹೋತ್ಸವ ಸಂಪನ್ನ

ಬೆಟಗೇರಿ ನ 8 : ಗ್ರಾಮದ ಶ್ರೀ ದುರ್ಗಾದೇವಿ ಜಾತ್ರಾಮಹೋತ್ಸವ ಪ್ರತಿವರ್ಷದ ಸಂಪ್ರದಾಯದಂತೆ ಈ ವರ್ಷವೂ ಇದೇ ಮಂಗಳವಾರ ನ.6 ರಿಂದ ಬುಧವಾರ ನ.7 ರ ವರೆಗೆ ವಿಜೃಂಭನೆಯಿಂದ ನಡೆಯಿತು.
ನ.6 ರಂದು ಬೆಳಿಗ್ಗೆ 5ಗಂಟೆಗೆ ಶ್ರೀ ದುರ್ಗಾದೇವಿ ಗದ್ದುಗೆಗೆ ಮಹಾಭಿಷೇಕ, ಮಹಾಪೂಜೆ ನಡೆದು, ಸಾಯಂಕಾಲ 5 ಗಂಟೆಗೆ ಪುರಜನರಿಂದ ಶ್ರೀದೇವಿಗೆ ಉಡಿ ತುಂಬುವ, ಪೂಜೆ ಪುನಸ್ಕಾರ ನೈವೆದ್ಯ ಅರ್ಪಣೆ ಸಲ್ಲಿಸುವ ಕಾರ್ಯಕ್ರಮ ಸಡಗರದಿಂದ ನಡೆದು, ಸಂಜೆ 7 ಗಂಟೆಗೆ ಪುರ ವಿವಿಧ ದೇವರ ಪಲ್ಲಕ್ಕಿಗಳ ಆಗಮನ, ಸುಮಂಗಲೆಯರಿಂದ ಆರತಿಮೇಳ ಹಾಗೂ ಸಕಲ ವಾಧ್ಯಮೇಳಗಳೊಂದಿಗೆ ಪಲ್ಲಕ್ಕಿಗಳನ್ನು ಸಡಗರದಿಂದ ಬರಮಾಡಿಕೊಳ್ಳಲಾಯಿತು. ರಾತ್ರಿ 10 ಗಂಟೆಗೆ ಸಿದ್ಧಾಪೂರದ ಕರೆಮ್ಮಾದೇವಿ ನಾಟ್ಯ ಸಂಘದವರಿಂದ ಘತ್ತರಗಿ ಭಾಗ್ಯವಂತಿದೇವಿ ಚರಿತ್ರೆ ನಾಟಕ ಪ್ರದರ್ಶನಗೊಂಡಿತು.
ನ.7 ರಂದು ಬೆಳಿಗ್ಗೆ 5 ಗಂಟೆಗೆ ವಾಲಗ ಕಟ್ಟುವ ಕಾರ್ಯಕ್ರಮ ನಡೆದು, ಶ್ರೀ ದುರ್ಗಾದೇವಿ ಗದ್ದುಗೆಗೆ ಮಹಾಪೂಜೆ, ಪುನಸ್ಕಾರ, ನೈವೇದ್ಯ ಅರ್ಪಿಸುವ ಕಾರ್ಯಕ್ರಮ ಜರುಗಿ, ಮುಂಜಾನೆ10ಗಂಟೆಗೆ ಮಹಾಪ್ರಸಾದ ಜರುಗಿದ ಬಳಿಕ ಗ್ರಾಮದ ದುರ್ಗಾದೇವಿ ದೇವಸ್ಥಾನ ಆವರಣದಲ್ಲಿ ಮಧ್ಯಾಹ್ನ 3 ಗಂಟೆಗೆ ಓಪನ್, ಆರಲ್ಲಿ, ನಾಲ್ಕಲ್ಲಿ, ಹಾಲಲ್ಲಿ ಟಗರಿನ ಕಾಳಗ ಸ್ಫರ್ಧೆ ಆಯೋಜಿಸಲಾಗಿತ್ತು,
ಒಂದರಕ್ಕಿಂತ ಒಂದು ಟಗರು ಸ್ಪರ್ದೆಯಲ್ಲಿ ಕಾಳಗ ಹಿಡಿದು ನೆರದಿದ್ದ ಜನರ ಮನ ರಂಜಿಸಿದವು. ಸ್ಥಳೀಯ ಶ್ರೀ ದುರ್ಗಾದೇವಿ ಜಾತ್ರಾಮಹೋತ್ಸವ ಸಮಿತಿಯವರ ಹಾಗೂ ಗಣ್ಯರ ಪ್ರಾಯೋಜಕತ್ವದಲ್ಲಿ ಆಕಷರ್Àಕ ನಗದು, ಡಾಲ್ ಬಹುಮಾನಗಳನ್ನು ಸ್ಫರ್ಧೆಯಲ್ಲಿ ವಿಜೇತ ಟಗರುಗಳಿಗೆ ನಗದು ಬಹುಮಾನ, ಪ್ರಶಸ್ತಿ ವಿತರಿಸಿದ ಬಳಿಕ ಬಂಡಾರ ಒಡೆಯುವ ಕಾರ್ಯಕ್ರಮ ಜರುಗಿ, ಜಾತ್ರಾ ಮಹೋತ್ಸವ ಸಮಾರೊಪಗೊಂಡಿತು.


ಸುಭಾಷ ಕರೆಣ್ಣವರ, ಮಾಯಪ್ಪ ಬಾಣಸಿ, ಸದಾಶಿವ ಕುರಿ, ಸಿದ್ರಾಮ ರಾಯಪ್ಪಗೋಳÀ, ನಾಗಪ್ಪ ಉದ್ದನ್ನವರ, ನಿಂಗಪ್ಪ ಬಾನಸಿ, ವಿಠ್ಠಲ ಬ್ಯಾಗಿ, ಕರೆಪ್ಪ ಗುರವ್ವಗೋಳ, ಭೀರಪ್ಪ ಬೆಣಚನಮರಡಿ, ವಿಠಲ ಹಿಡಕಲ್ ಸೇರಿದಂತೆ ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಗಣ್ಯರು, ದುರ್ಗಾದೇವಿ ದೇವರ ಜಾತ್ರಾ ಮಹೋತ್ಸವ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಟಗರಿನ ಕಾಳಗ ಸ್ಪರ್ದೆಯ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Related posts: