RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ತಾಲೂಕಿನ 3 ಹೋಬಳಿಗಳಲ್ಲಿ ಜಾರಿ : ಎಮ್. ಎಮ್. ನಧಾಪ್

ಗೋಕಾಕ:ತಾಲೂಕಿನ 3 ಹೋಬಳಿಗಳಲ್ಲಿ ಜಾರಿ : ಎಮ್. ಎಮ್. ನಧಾಪ್ 

ತಾಲೂಕಿನ 3 ಹೋಬಳಿಗಳಲ್ಲಿ ಜಾರಿ : ಎಮ್. ಎಮ್. ನಧಾಪ್

ಗೋಕಾಕ ನ 9 : ಪ್ರಸ್ತುತ ಹಿಂಗಾರು ಹಾಗೂ ಬೇಸಿಗೆ ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯನ್ನು ತಾಲೂಕಿನ 3 ಹೋಬಳಿಗಳಲ್ಲಿ ಜಾರಿಗೊಳಿಸಲಾಗಿದ್ದು ಎಂದು ಸಹಾಯಕ ಕೃಷಿ ನಿರ್ದೇಶಕ ಎಮ್. ಎಮ್. ನಧಾಪ್ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟನೆಯಯಲ್ಲಿ ತಿಳಿಸಿರುವ ಅವರು, ಪ್ರಮುಖ ಬೆಳೆಗಳನ್ನು ವಿಮಾ ವ್ಯಾಪ್ತಿಗೆ ಒಳಪಡಿಸಲು ಗ್ರಾಮ ಪಂಚಾಯತಿ ಮಟ್ಟದಲ್ಲಿ ಹಾಗೂ ಉಳಿದ ಬೆಳೆಗಳನ್ನು ಹೋಬಳಿ ಮಟ್ಟದಲ್ಲಿ ಅನುಷ್ಠಾನಗೊಳಿಸಲಾಗಿದ್ದು, ಅದರ ವಿವರ ಈ ರೀತಿಯಾಗಿ ಇದೆ.

ಹಿಂಗಾರು ಹಂಗಾಮಿಗೆ ಅಧಿಸೂಚಿತ ಅರಭಾಂವಿ ಹೋಬಳಿಯಲ್ಲಿ ಜೋಳ (ನೀರಾವರಿ), ಕಡಲೆ (ನೀರಾವರಿ), ಸೂರ್ಯಕಾಂತಿ (ನೀರಾವರಿ), ಗೋಕಾಕ ಹೋಬಳಿಯಲ್ಲಿ ಜೋಳ (ನೀರಾವರಿ), ಜೋಳ (ಮಳೆಯಾಶ್ರಿತ), ಮುಸುಕಿನ ಜೋಳ (ಮಳೆಯಾಶ್ರಿತ), ಗೋಧಿ (ಮಳೆಯಾಶ್ರಿತ), ಕಡಲೆ (ನೀರಾವರಿ), ಕಡಲೆ (ಮಳೆಯಾಶ್ರಿತ), ಸೂರ್ಯಕಾಂತಿ (ನೀರಾವರಿ), ಸೂರ್ಯಕಾಂತಿ (ಮಳೆಯಾಶ್ರಿತ), ಕುಸುಬೆ (ಮಳೆಯಾಶ್ರಿತ). ಕೌಜಲಗಿ ಹೋಬಳಿಯಲ್ಲಿ ಜೋಳ (ನೀರಾವರಿ), ಜೋಳ (ಮಳೆಯಾಶ್ರಿತ), ಮುಸುಕಿನ ಜೋಳ (ಮಳೆಯಾಶ್ರಿತ), ಗೋಧಿ (ಮಳೆಯಾಶ್ರಿತ), ಕಡಲೆ (ನೀರಾವರಿ), ಕಡಲೆ (ಮಳೆಯಾಶ್ರಿತ), ಸೂರ್ಯಕಾಂತಿ (ನೀರಾವರಿ), ಸೂರ್ಯಕಾಂತಿ (ಮಳೆಯಾಶ್ರಿತ), ಕುಸುಬೆ (ಮಳೆಯಾಶ್ರಿತ) ಬೆಳೆಗಳಾಗಿವೆ.

ಹಿಂಗಾರು ಹಂಗಾಮಿಗೆ ಅಧಿಸೂಚಿತ ಪಂಚಾಯತಿ ಮಟ್ಟದ ಬೆಳೆಗಳ ವಿವರ:-ಮುಸುಕಿನ ಜೋಳ (ನೀರಾವರಿ), ಗೋಧಿ (ನೀರಾವರಿ) ಬೆಳೆಗಳಿಗೆ ಒಳಪಡುವ ಗ್ರಾಮ ಪಂಚಾಯತಿಗಳಲ್ಲಿ ಬಡಿಗವಾಡ, ತುಕ್ಕಾನಟ್ಟಿ,ನಾಗನೂರು (ಪ.ಪಂ), ಮೂಡಲಗಿ (ಪ.ಪಂ), ಶಿವಾಪೂರ(ಹ), ಹಳ್ಳೂರ, ಮುನ್ಯಾಳ, ಧರ್ಮಟ್ಟಿ, ಮುಸಗುಪ್ಪಿ, ಕಲ್ಲೋಳಿ(ಪ.ಪಂ), ರಾಜಾಪೂರ, ದುರದುಂಡಿ, ಮಲ್ಲಾಪೂರ ಪಿ.ಜಿ(ಪ.ಪಂ), ಕೊಣ್ಣೂರ (ಪುರಸಭೆ), ದುಪದಾಳ, ಶಿಂಧಿಕುರಬೇಟ, ಅರಭಾಂವಿ (ಪ.ಪಂ), ಲೋಳಸೂರ, ನಲ್ಲಾನಟ್ಟಿ, ಬಳೋಬಾಳ, ಹುಣಶ್ಯಾಳ ಪಿ.ಜಿ, ವಡೇರಹಟ್ಟಿ, ನಂದಗಾವ, ಖಾನಟ್ಟಿ, ಕುಂದರಗಿ, ಅಂಕಲಗಿ, ಅಕ್ಕತಂಗೇರಹಾಳ, ಗುಜನಾಳ ಶಿಲ್ತಿಬಾವಿ, ಕೊಳವಿ ಮಮದಾಪೂರ,ತವಗ, ಖನಗಾಂವ, ಮಕ್ಕಳಗೇರಿ, ಹಿರೇನಂದಿ, ಮಾಲದಿನ್ನಿ, ಹುಣಶ್ಯಾಳ ಪಿ.ವೈ, ಢವಳೇಶ್ವರ, ಅವರಾದಿ, ಯಾದವಾಡ, ಕುಲಗೋಡ, ತಪಸಿ, ಸುಣಧೋಳಿ, ತಳಕಟ್ನಾಳ, ಉದಗಟ್ಟಿ, ಮೆಳವಂಕಿ, ಬೆಟಗೇರಿ, ಗೋಸಬಾಳ, ಕಳ್ಳಿಗುದ್ದಿ. ಮುಸುಕಿನ ಜೋಳ(ನೀರಾವರಿ) ಬೆಳೆಗಳಿಗೆ ಒಳಪಡುವ ಗ್ರಾಮ ಪಂಚಾಯತಿಗಳಲ್ಲಿ ಪಾಮಲದಿನ್ನಿ, ದಂಡಾಪೂರ, ಗುಜನಟ್ಟಿ, ಮದವಾಲ, ಬೆಣಚಿನಮರಡಿ(ಉ), ತಿಗಡಿ, ಪಟಗುಂದಿ, ಕಾಮನಕಟ್ಟಿ. ಗೋಧಿ(ನೀರಾವರಿ) ಬೆಳೆಗಳಿಗೆ ಪಟಗುಂದಿ, ಕೌಜಲಗಿ ಒಳಪಡುವ ಗ್ರಾಮ ಪಂಚಾಯತಿಗಳಾಗಿವೆ.

 


ಬೆಳೆ ಸಾಲ ಪಡೆಯುವ ಹಾಗೂ ಪಡೆಯದ ರೈತರು ಬೆಳೆ ವಿಮೆ ಯೋಜನೆಯಡಿ ಪಾಲ್ಗೊಳ್ಳಲು ಹುರುಳಿ(ಮಳೆಯಾಶ್ರಿತ) ಬೆಳೆಗೆ ನವೆಂಬರ 15, ಮುಸುಕಿನಜೋಳ(ನೀರಾವರಿ) ಮತ್ತು ಗೋಧಿ(ನೀರಾವರಿ)ಬೆಳೆಗಳಿಗೆ ಡಿಸೆಂಬರ 15, ಕೊನೆಯ ದಿನ ಹಾಗೂ ಉಳಿದ ಹಿಂಗಾರು ಬೆಳೆಗಳಿಗೆ ನವೆಂಬರ 30. ಕೊನೆಯ ದಿನವಾಗಿರುತ್ತದೆ. ಮತ್ತು ಬೇಸಿಗೆ ಹಂಗಾಮಿನಲ್ಲಿ ಬೆಳೆ ವಿಮೆ ಯೋಜನೆಯಲ್ಲಿ ಪಾಲ್ಗೊಳ್ಳಲು 2019ರ ಫೆಬ್ರುವರಿ 28 ಕೊನೆಯ ದಿನವಾಗಿರುತ್ತದೆ
ಹೆಚ್ಚಿನ ಮಾಹಿತಿಗಾಗಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಕಂದಾಯ, ರಾಷ್ಟ್ರೀಕೃತ ಬ್ಯಾಂಕಗಳು, ಸಹಕಾರ ಸಂಘದ ಶಾಖೆಗಳು ಹಾಗೂ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದೆಂದು ಎಮ್ ಎಮ್ ನಧಾಪ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related posts: