RNI NO. KARKAN/2006/27779|Monday, December 23, 2024
You are here: Home » breaking news » ಮೂಡಲಗಿ:ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮರನ್ನು ನೆನಪಿಕೊಳ್ಳುವುದು ಭಾರತೀಯ ಸಂಸ್ಕುತಿಯಾಗಿದೆ; ಬಿ.ಜಿ ಗಡಾದ

ಮೂಡಲಗಿ:ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮರನ್ನು ನೆನಪಿಕೊಳ್ಳುವುದು ಭಾರತೀಯ ಸಂಸ್ಕುತಿಯಾಗಿದೆ; ಬಿ.ಜಿ ಗಡಾದ 

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮರನ್ನು ನೆನಪಿಕೊಳ್ಳುವುದು ಭಾರತೀಯ ಸಂಸ್ಕುತಿಯಾಗಿದೆ; ಬಿ.ಜಿ ಗಡಾದ

ಮೂಡಲಗಿ ನ 11 : ಭಾರತ ದೇಶ ವಿವಿಧ ಧರ್ಮ, ವಿವಿಧ ಭಾಷೆ ಅನೇಕ ಸಂಸ್ಸøತಿಗಳ ಭಾವೈಕ್ಯತೆಯ ಬೀಡಗಿದೆ. ಈ ನೆಲದಲ್ಲಿ ಜನಿಸಿದ ಪ್ರತಿಯೊಬ್ಬ ಪ್ರಜೆಯೂ ಪುಣ್ಯವಂತನು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮರನ್ನು ನೆನಪಿಕೊಳ್ಳುವುದು ಭಾರತೀಯ ಸಂಸ್ಸøತಿಯಾಗಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಹೇಳಿದರು.
ಅವರು ಶನಿವಾರ ಸಂಜೆ ವೆಂಕಟೇಶ ಚಿತ್ರ ಮಂದಿರದಲ್ಲಿ ಬಿಟಿಟಿ ಕಮೀಟಿ ಹಮ್ಮಿಕೊಂಡಿದ್ದ ಹಜರತ ಟಿಪ್ಪು ಸುಲ್ತಾನರ 268ನೇ ಜಯಂತ್ಯೋತ್ಸವದಲ್ಲಿ ಮಾತನಾಡಿ, ದೇಶಕ್ಕಾಗಿ ಹೋರಾಡಿದ ಮಹಾತ್ಮರ ಆದರ್ಶ ತತ್ವ ಶೌರ್ಯವನ್ನು ಕರಗತ ಮಾಡಿಕೊಂಡರೆ ಮಾತ್ರ ಭವ್ಯ ಭಾರತ ನಿರ್ಮಾಣವಾಗುವುದಕ್ಕೆ ಸಾಧ್ಯ. ಕೆಲವು ವರ್ಷಗಳಿಂದ ಮಹಾತ್ಮರ ಜಯಂತಿಗಳು ರಾಜಕೀಯವಾಗಿ ಮಾರ್ಪಟ್ಟಿರುವುದು ಬೇಸರದ ವಿಷಯವಾಗಿದೆ. ಸ್ವಾತಂತ್ರಕ್ಕಾಗಿ ಬ್ರಿಟಿಷರ ವಿರುದ್ದ ಕೆಚ್ಚೆದೆಯಿಂದ ಹೋರಾಡಿದ ಟಿಪ್ಪು ಸುಲ್ತಾನರನ್ನು ಒಂದೇ ಸಮುದಾಯಕ್ಕೆ ಸೀಮಿತಗೊಳಿಸುವುದು ಸರಿಯಲ್ಲ ಎಂದರು.


ಪುರಸಭೆ ಸದಸ್ಯ ಈರಣ್ಣ ಕೊಣ್ಣೂರ ಮಾತನಾಡಿ, ಕಳೆದ ಭಾರಿ ವಿಜ್ರಂಭಣೆಯಿಂದ ಜರುಗಿದ ಹಜರತ ಟಿಪ್ಪು ಜಯಂತಿಯೂ ಈ ಬಾರಿ ರಾಜಕೀಯ ಕುತಂತ್ರಕ್ಕೆ ಬಲಿಯಾಗಿರುವುದು ಬೇಸರದ ಸಂಗತಿಯಾಗಿದೆ. ರಾಜಕಾರಣಿಗಳ ಕುತಂತ್ರಕ್ಕೆ ಬಾಂದವ್ಯಗಳು ಬಲಿಯಾಗುತ್ತಿವೆ. ನಮ್ಮ ದೇಶದಲ್ಲಿ ಕ್ರಾಂತಿಕಾರಿ ಹೋರಾಟಗಾರರನ್ನು ಹಿಂದೆ ಸರಿಸುವ ಕಾರ್ಯ ಮೊದಲಿನಿಂದಲೂ ನಡೆದುಕೊಂಡು ಬಂದಿದ್ದು ಈಗಲೂ ಮುಂದುವರಿಯುತ್ತಿರುವುದು ವಿಷಾಧನೀಯವಾಗಿದೆ ಎಂದರು.
ದೇಶನೂರಿನ ನೂರುದ್ದೀನ್ ಪೀರಾ(ಸಮ್‍ಸುಲ್ಲಹಕ್) ಧರ್ಮಗುರುಗಳು ಆಶೀರ್ವಚನ ನೀಡಿ, ದೇಶಕ್ಕಾಗಿ ಹೋರಾಡಿದ ಯಾರೇ ಇರಲಿ ಅವರಿಗೆ ಗೌರವ ನೀಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ಇವರನ್ನು ಮರೆತರೇ ನಾವು ಮನುಷ್ಯರಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ಜಾತಿ ಧರ್ಮಕ್ಕಾಗಿ ಯುದ್ದಗಳು ನಡೆಯುತ್ತಿರಲಿಲ್ಲ. ಅಧಿಕಾರ, ಸಿಂಹಾಸನಕ್ಕಾಗಿ ಹೋರಾಡುತ್ತಿದ್ದರು ಈಗ ರಾಜಕೀಯಕ್ಕಾಗಿ ಜಾತಿಯ ಲೇಪ ಹಚ್ಚಲಾಗುತ್ತಿದೆ. ದಯಮಾಡಿ ಯಾರು ರಾಷ್ಟ್ರೀಯತೆಯಲ್ಲಿ ಜಾತ್ಯತೀತೆಯನ್ನು ತರಬೇಡಿ. ಯಾರಿಗೆ ದೇಶದ ಮೇಲೆ ಅಭಿಮಾನವಿರುವುದಿಲ್ಲ ಅವನಿಗೆ ಈ ಭೂಮಿಯ ಮೇಲೆ ಬದುಕುವ ಅರ್ಹತೆಯಿಲ್ಲ ಎಂದು ಹೇಳಿದರು.
ಪುರಸಭೆ ಮಾಜಿ ಸದಸ್ಯ ಮಲ್ಲಪ್ಪ ಮದುಗುಣಕಿ, ಬಿಟಿಟಿ ಕಮೀಟಿ ಉಪಾಧ್ಯಕ್ಷ ಮಲ್ಲಿಕ ಕಳ್ಳಿಮನಿ ಮಾತನಾಡಿದರು. ಮೌಲನ ನಿಜಾಮುದ್ದಿನ್ ಹಫೀಕ ಮಂತ್ರಪಠಿಸಿದರು. ಬಿಟಿಟಿ ಕಮೀಟಿ ಅಧ್ಯಕ್ಷ ಶರೀಫ ಪಟೇಲ್ ಅಧ್ಯಕ್ಷತೆವಹಿಸಿದ್ದರು.
ಕಾರ್ಯಕ್ರಮದಲ್ಲಿ ಮೌಲನ ಅಸ್ಕರ ಅಲಿ, ಕೌಸರ್ ರಾಜ, ಪುರಸಭೆ ಸದಸ್ಯ ಶಿವಾನಂದ ಸಣ್ಣಕ್ಕಿ, ಮುಖಂಡರಾದ ಎಸ್.ಆರ್ ಸೋನವಾಲ್ಕರ, ಬಿ.ಬಿ.ಹಂದಿಗುಂದ, ಅಮೀರಸಾಬ್ ಥರಥರಿ, ಹಸನಸಾಬ ಮುಕುಟಖಾನ, ಹುಸೇನಸಾಬ ಥರಥರಿ, ಅಬ್ದುಲರಹಮಾನ್ ತಾಂಬೋಳಿ, ಆದಂ ತಾಂಬೋಳಿ, ಚನ್ನಪ್ಪ ಅಥಣಿ, ಚೇತನ ನಿಶಾನಿಮಠ, ಸಂಜು ಕಮತೆ, ಯಲ್ಲಪ್ಪ ಸಣ್ಣಕ್ಕಿ, ಯುವ ಜೀವನ ಸೇವಾ ಸಂಸ್ಥೆ ಅಧ್ಯಕ್ಷ ಈರಪ್ಪ ಢವಳೇಶ್ವರ, ಬಿಟಿಟಿ ಕಮೀಟಿ ಕಾರ್ಯದರ್ಶಿ ಸಲೀಂ ಇನಾಮ್‍ದಾರ, ಮೈನೂ ಪಟೇಲ, ಇರ್ಷದ್ ಇನಾಮ್‍ದಾರ, ಮೋಸಿನ್ ಫೀರಜಾದೆ, ಮದರ ಜಕಾತಿ, ಹಸನ ಕುರುಬೇಟ, ದಿವಾನಸಾಬ್ ಮುತ್ರೋಜಿ, ಮುಸ್ತಾಪ ತಾಂಬೋಳಿ ಮತ್ತಿತರರು ಉಪಸ್ಥಿತರಿದ್ದರು.
ಬಿಟಿಟಿ ಕಮೀಟಿ ಉಪಾಧ್ಯಕ್ಷ ಮಲ್ಲಿಕ ಕಳ್ಳಿಮನಿ ಸ್ವಾಗತಿಸಿದರು. ಎಮ್.ಎಮ್. ಉಸ್ತಾದ್ ನಿರೂಪಿಸಿ, ವಂದಿಸಿದರು.

Related posts: