ಯಮಕನಮರಡಿ:ಸತೀಶ ಪ್ರತಿಭಾ ಪುರಸ್ಕಾರ ಸಾಂಸ್ಕೃತಿಕ ಕಾರ್ಯಕ್ರಮ ರಾಜ್ಯದಲ್ಲಿ ಇತಿಹಾಸ ಸೃಷ್ಠಿಸುತ್ತಿದೆ : ಶಾಸಕ ಸತೀಶ
ಸತೀಶ ಪ್ರತಿಭಾ ಪುರಸ್ಕಾರ ಸಾಂಸ್ಕೃತಿಕ ಕಾರ್ಯಕ್ರಮ ರಾಜ್ಯದಲ್ಲಿ ಇತಿಹಾಸ ಸೃಷ್ಠಿಸುತ್ತಿದೆ : ಶಾಸಕ ಸತೀಶ
ಯಮಕನಮರಡಿ ನ 11 : ಗ್ರಾಮೀಣ ಪ್ರತಿಭೆಗಳನ್ನು ರಾಜ್ಯ ಮತ್ತು ರಾಷ್ಟ್ರಕ್ಕೆ ಪರಿಚಯಿಸುವ ಉದ್ದೇಶದಿಂದ ಕಳೆದ 8 ವರ್ಷಗಳಿಂದ ನಡೆಯುತ್ತಿರುವ ಸತೀಶ ಪ್ರತಿಭಾ ಪುರಸ್ಕಾರ ಸಾಂಸ್ಕೃತಿಕ ಕಾರ್ಯಕ್ರಮ ರಾಜ್ಯದಲ್ಲಿ ಇತಿಹಾಸ ಸೃಷ್ಠಿಸುತ್ತಿದೆ ಎಂದು ಕಾರ್ಯಕ್ರಮದ ರೂವಾರಿ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಹೇಳಿದರು
ಸತೀಶ ಜಾರಕಿಹೊಳಿ ಪೌಂಡೇಶನ್ ಆಶ್ರಯದಲ್ಲಿ ರವಿವಾರದಂದು ಯಮಕನಮರಡಿಯಲ್ಲಿ ಜರುಗಿದ 8 ನೇ ಸತೀಶ ಪ್ರತಿಭಾ ಪುರಸ್ಕಾರ ಅಂತಿಮ ಹಂತದ ಸ್ವರ್ಧಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು
ಕಳೆದ 8 ವರ್ಷಗಳಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳು ರಾಜ್ಯದ ವಿವಿಧ ಕಡೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರರ್ದಶಿಸಿ ಟಿ.ವಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮುಖೇನ ರಾಜ್ಯಕ್ಕೆ ಕೀರ್ತಿ ತರುತ್ತಿರುವದು ಶ್ಲಾಘನೀಯವಾಗಿದೆ . ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಕ್ರೀಡೆಯಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಗಿಟ್ಟಿಸಲು ಕಳೆದ 10 ವರ್ಷಗಳಿಂದ ಗೋಕಾಕದಲ್ಲಿ ಜರಗುವ ಕ್ರೀಡಾ ಸ್ವರ್ಧೆಗಳು ಸಹಕಾರಿಯಾಗಿರುವುದಕ್ಕೆ ನಮಗೆ ಅತೀವ ಸಂತೋಷತಂದಿದೆ ಎಂದ ಸತೀಶ ಜಾರಕಿಹೊಳಿ ಈ ಕಾರ್ಯಕ್ರಮ ಯಶ್ವಸಿಗೆ ಸಹಕರಿಸಿದ ಎಲ್ಲ ಸಂಘಟಕರಿಗೆ ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು
ವೇದಿಕೆಯಲ್ಲಿ ರಾಹುಲ್ ಜಾರಕಿಹೊಳಿ ,ಪ್ರೀಯಾಂಕಾ ಜಾರಕಿಹೊಳಿ , ಎಸ್.ಎ. ರಾಮಗಾನಟ್ಟಿ , ಸಂಘಟಕ ರಿಯಾಜ್ ಜೌಗಲಾ ಇದ್ದರು
ಕಾರ್ಯಕ್ರಮವನ್ನು ಶಿಕ್ಷಕರಾದ ಎ.ಜಿ.ಕೋಳಿ ,ರಾಮಪ್ಪ ಮೀರ್ಜಿ ನಿರೂಪಿಸಿದರು