ಗೋಕಾಕ:ರಾಜ್ಯದಲ್ಲಿ ಬಿಜೆಪಿ ಕಟ್ಟಿ-ಬೆಳೆಸುವಲ್ಲಿ ಅನಂತಕುಮಾರ ಅವರು ಮಹತ್ತರ ಪಾತ್ರ ವಹಿಸಿದ್ದರು : ಎಮ್.ಐ. ನೀಲಣ್ಣವರ
ರಾಜ್ಯದಲ್ಲಿ ಬಿಜೆಪಿ ಕಟ್ಟಿ-ಬೆಳೆಸುವಲ್ಲಿ ಅನಂತಕುಮಾರ ಅವರು ಮಹತ್ತರ ಪಾತ್ರ ವಹಿಸಿದ್ದರು : ಎಮ್.ಐ. ನೀಲಣ್ಣವರ
ಬೆಟಗೇರಿ ನ 12 : ಕೇಂದ್ರ ರಸಗೊಬ್ಬರ ಹಾಗೂ ರಾಸಾಯನಿಕ, ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ ಅವರ ನಿಧನಕ್ಕೆ ಸೋಮವಾರ ನ.12 ರಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಬಿಜೆಪಿ ಮುಖಂಡರು, ಕಾರ್ಯಕರ್ತರು ತೀವ್ರ ಸಂತಾಪ ಶೋಕ ಸೂಚಿಸಿದ್ದಾರೆ.
ಎಚ್.ಎನ್.ಅನಂತಕುಮಾರ ಅವರು ರಾಜ್ಯದ ಯಾವುದೇ ಸರ್ಕಾರ ಇದ್ದರು ಕೇಂದ್ರದ ಯೋಜನೆಗಳನ್ನು ರಾಜ್ಯಕ್ಕೆ ತರುವಲ್ಲಿ ಅನಂತಕುಮಾರ ಅವರ ಪಾತ್ರ ವಿಶೇಷವಾಗಿತ್ತು. ರಾಜ್ಯದಲ್ಲಿ ಬಿಜೆಪಿ ಕಟ್ಟಿ-ಬೆಳೆಸುವಲ್ಲಿ ಅನಂತಕುಮಾರ ಅವರು ಮಹತ್ತರ ಪಾತ್ರ ವಹಿಸಿದ್ದರು. ರಸಗೊಬ್ಬರ ಖಾತೆ ಸಚಿವರಾಗಿ ದೇಶದ ರೈತರಿಗೆ ಯೂರಿಯಾ ಕೊರತೆಯಾಗದಂತೆ ನೊಡಿಕೊಂಡ ಹೆಗ್ಗಳಿಕೆಗೆನ ಪಾತ್ರರಾಗಿದ್ದರು. ಅಲ್ಲದೇ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದು ಅನಂತಕುಮಾರರ ರಾಜಕೀಯ ಬದುಕಿನ ಕುರಿತು ಸ್ಥಳೀಯ ಬಿಜೆಪಿ ಮುಖಂಡ ಎಮ್.ಐ. ನೀಲಣ್ಣವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಮುಖಂಡರಾದ ಬಸವಂತ ಕೋಣಿ, ಈರಯ್ಯ ಹಿರೇಮಠ, ಬಸನಗೌಡ ದೇಯಣ್ಣವರ, ಈಶ್ವರ ಮೆಳೆಣ್ಣವರ, ರಾಮಣ್ಣ ಬಳಿಗಾರ, ಶಿವಾಜಿ ನೀಲಣ್ಣವರ, ಶ್ರೀಶೈಲ ಗಾಣಗಿ, ಟಿ.ಎಲ್.ಲೇಂಡ್ವೆ, ಈಶ್ವರ ಮುಧೋಳ, ಶ್ರೀಕಾಂತ ಕರೆಪ್ಪಗೋಳ, ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ತೀವ್ರ ಸಂತಾಪ ಶೋಕ ವ್ಯಕ್ತಪಡಿಸಿದ್ದಾರೆ.