ಮೂಡಲಗಿ:ಹೊಳಿಗೆ ಊಟದ ಕಾರ್ಯಕ್ರಮ ಮಾಡುತ್ತಿರುವದು ಪ್ರಶಂಸನೀಯವಾಗಿದೆ : ಬಿ.ಇ.ಒ ಎ.ಸಿ ಗಂಗಾಧರ
ಹೊಳಿಗೆ ಊಟದ ಕಾರ್ಯಕ್ರಮ ಮಾಡುತ್ತಿರುವದು ಪ್ರಶಂಸನೀಯವಾಗಿದೆ : ಬಿ.ಇ.ಒ ಎ.ಸಿ ಗಂಗಾಧರ
ಮೂಡಲಗಿ ನ 16 : ಸರಕಾರವು ಮಕ್ಕಳಿಗೆ ಮದ್ಯಾಹ್ನದ ಅವದಿಯಲ್ಲಿ ಕಲಿಕೆಯ ಜೊತೆಯಲ್ಲಿ ಪೌಷ್ಠಿಕ ಆಹಾರ ಕೊಡುವದರಿಂದ ಕಲಿಕಾ ಗುಣಮಟ್ಟ ಮತ್ತಷ್ಟು ಹೆಚ್ಚಿಸಿದಂತಾಗುವದೆಂದು ಬಿಸಿಯೂಟ ಯೋಜನೆ ಜಾರಿಮಾಡಿದೆ. ಸ್ಥಳೀಯವಾಗಿ ಹೊಳಿಗೆ ಊಟದ ಕಾರ್ಯಕ್ರಮ ಮಾಡುತ್ತಿರುವದು ಪ್ರಶಂಸನೀಯವಾಗಿದೆ ಎಂದು ಮೂಡಲಗಿ ಬಿ.ಇ.ಒ ಎ.ಸಿ ಗಂಗಾಧರ ನುಡಿದರು.
ಅವರು ಶುಕ್ರವಾರ ಸಮೀಪದ ಕಲ್ಲೋಳ್ಳಿಯ ಸರಕಾರಿ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯಲ್ಲಿ ಹಮ್ಮಿಕೊಂಡ ಮಕ್ಕಳ ದಿನೋತ್ಸವ ನಿಮಿತ್ಯ ಹೊಳಿಗೆ ಊಟದ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು. ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವದರಿಂದ ದೈಹಿಕವಾಗಿ ಪ್ರಬಲರಾಗುವ ಜೊತೆಯಲ್ಲಿ ಮಾನಸಿಕವಾಗಿ ಸದೃಢರಾಗಿ ಬೆಳೆಯುತ್ತಾರೆ. ಸರಕಾರ ಕೊಡುವ ಆಹಾರದ ಜೊತೆಯಲ್ಲಿ ಸ್ಥಳೀಯವಾಗಿ ದಾನಿಗಳಿಂದ ಚುನಾಯಿತ ಪ್ರತಿನಿಧಿಗಳಿಂದ ಎಸ್.ಡಿ.ಎಮ್.ಸಿಯವರ ಸಹಕಾರದೊಂದಿಗೆ ಇಂತಹ ಕಾರ್ಯವಾಗಲು ಸಾದ್ಯವಾಗಿದೆ. ಕಲಿಕೆ ಆಟೋಪಚಾರಗಳ ಜೊತೆಯಲ್ಲಿ ಆಹಾರ ಕ್ರಮದ ಕುರಿತು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕೆಂದು ಹೇಳಿದರು.
ಗೋಕಾಕ ಮದ್ಯಾಹ್ನ ಬಿಸಿಯೂಟದ ಸಹಾಯಕ ನಿರ್ದೇಶಕ ಎ.ಬಿ ಮಲಬನ್ನವರ ಮಾತನಾಡಿ, ಹೊಳಿಗೆಯಂತಹ ಪೌಷ್ಠಿಕಾಂಶಯುಳ್ಳ ಆಹಾರ ಮಕ್ಕಳಿಗೆ ಉಪಯುಕ್ತವಾಗಿದೆ. ಮಕ್ಕಳ ಆರೋಗ್ಯದಲ್ಲಿ ಆಹಾರ ಪದ್ದತಿಯು ಅತೀ ಮುಖ್ಯವಾಗಿದೆ. ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಿಸುವಲ್ಲಿ ಆಹಾರದ ಪ್ರಾಮುಖ್ಯತೆ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಗೋಕಾಕ ಬಿ.ಇ.ಒ ಡಿ.ಎಸ್ ಕುಲಕರ್ಣಿ, ಪಪಂ ಅಧ್ಯಕ್ಷೆ ಕಸ್ತೂರಿ ಕುರಬೇಟ, ಮುಖ್ಯಾಧಿಕಾರಿ ಅರುಣಕುಮಾರ, ಬಿ.ಆರ್.ಪಿಗಳಾದ ಕೆ.ಎಲ್.ಮೀಶಿ, ಎ.ಬಿ ಚವಡನ್ನವರ, ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಶಿವಾನಂದ ಹೆಬ್ಬಾರ, ಮಾಲಾ ದಬಾಡಿ, ಸಿ.ಎಲ್ ಬಡಿಗೇರಿ, ಎಸ್.ಬಿ ಗೋಸಬಾಳ, ಸಿ.ಆರ್.ಪಿಗಳಾದ ಜಿ.ಕೆ ಉಪ್ಪಾರ, ಆರ್.ಬಿ ಕಟಗಾವಲಿ, ಆರ್.ಕೆ ಪಾಟೀಲ್, ಕೆ.ಟಿ ಪಾಟೀಲ, ಎಸ್.ಎಸ್ ಹಿರೇಮಠ, ಆರ್.ಎಸ್ ಗುಡೆನ್ನವರ ಶಿಕ್ಷಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.