ಖಾನಾಪುರ:ಲಿಂಗನಮಠದಲ್ಲಿ ರೈತರಿಂದ ಕಬ್ಬಿನ ಲಾರಿ ತಡೆದು ಪ್ರತಿಭಟನೆ
ಲಿಂಗನಮಠದಲ್ಲಿ ರೈತರಿಂದ ಕಬ್ಬಿನ ಲಾರಿ ತಡೆದು ಪ್ರತಿಭಟನೆ
ಖಾನಾಪುರ ನ 18 : ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳು ವಚನಭ್ರಷ್ಟರಾಗಿದ್ದಾರೆ, ಬೆಳಗಾವಿ ಜಿಲ್ಲಾಧಿಕಾರಿ ಕಛೇರಿ ಎದುರಿಗೆ ಜಿಲ್ಲೆಯ ರೈತರು ಮತ್ತು ಕಬ್ಬು ಬೆಳೆಗಾರರು ಮಾಡಿದ ವಿನೂತನ ರೀತಿಯ ಪ್ರತಿಭಟನೆಗೆ ಮಣಿದು 19ರ ಸೋಮವಾರದಂದು ಬೆಳಗಾವಿಗೆ ಬಂದು ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತೆನೆಂದು ಮಾಧ್ಯಮದ ಎದುರು ಹೇಳಿಕೆ ನೀಡಿದಾಗ ರೈತರು ತಾತ್ಕಾಲಿಕವಾಗಿ ಪ್ರತಿಭಟನೆ ಹಿಂದಕ್ಕೆ ತೆಗೆದುಕೊಂಡಿದ್ದರು. ಆದರೆ ನಿನ್ನೆಯ ದಿನ ರಾಜಕಾರಣಿಗಳ ಮತ್ತು ಸಕ್ಕರೆ ಕಾರ್ಖಾನೆಗಳ ಒತ್ತಡಕ್ಕೆ ಮನಿದು ಸೋಮವಾರ ಬೆಳಗಾವಿಯಲ್ಲಿ ಹಮ್ಮಿಕೊಂಡ ರೈತರ ಸಭೆ ರದ್ದು ಮಾಡಲಾಗಿದ್ದು, ರೈತ ಮುಖಂಡರು ಬೆಂಗಳೂರಿಗೆ ಬನ್ನಿ ಸಭೆ ನಡೆಸೋಣ ಎಂದಾಗ, ರೈತರು ಸಿಎಂ ಹೇಳಿಕೆ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದೆವೆಂದು ಮಲಪ್ರಭಾ ಮತ್ತು ಕಳಸಾ ನದಿಗಳ ಶಾಶ್ವತ ಕುಡಿಯುವ ನೀರು ಹೋರಾಟ ಸಮಿತಿ ಅಧ್ಯಕ್ಷ ಮಹಾಂತೇಶ ಸಂಗೋಳ್ಳಿ ಮಾತನಾಡಿದರು.
ತಾಲೂಕಿನ ಲಿಂಗನಮಠ ಗ್ರಾಮದಲ್ಲಿ ರವಿವಾರದಂದು ಮಲಪ್ರಭಾ ಮತ್ತು ಕಳಸಾ ನದಿಗಳ ಶಾಶ್ವತ ಕುಡಿಯುವ ನೀರು ಹೋರಾಟ ಸಮಿತಿ, ಲಿಂಗನಮಠದ ಸುತ್ತಮುತ್ತಲಿನ ಕಬ್ಬು ಬೆಳೆಗಾರರು ಹಾಗೂ ರೈತ ಸಂಘದ ಪಧಾಧಿಕಾರಿಗಳು ಹಮ್ಮಿಕೊಂಡಂತಹ ಪ್ರತಿಭಟನೆಯಲ್ಲಿ ಮಾತನಾಡಿದರು.
ಕಳೆದ ದಿ.15 ಮತ್ತು 16ನೇ ನವೆಂವರದಂದು ಬೆಳಗಾವಿ ಜಿಲ್ಲಾಧಿಕಾರಿ ಕಛೇರಿ ಎದುರಿಗೆ ಹಮ್ಮಿಕೊಂಡಂತಹ ರೈತರ ಮತ್ತು ಕಬ್ಬು ಬೆಳೆಗಾರರ ಪ್ರತಿಭಟನೆಗೆ ಮಣಿದು ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯವರೆ ಖುದ್ದು ಬೆಳಗಾವಿಗೆ ಬರ್ತಿನಿ, ರೈತರಿಗೆ ಸುವರ್ಣಸೌಧಕ್ಕೆ ಅಹ್ವಾನಿಸಿ ರೈತರ ಜೋತೆಗೆ ಸಭೆ ನಡೆಸಿ ಚರ್ಚಿಸೋಣ ಹಾಗೂ ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತೆವೆ, ರೈತರು ತಮ್ಮ ಪ್ರತಿಭಟನೆಯನ್ನು ನಿಲ್ಲಿಸಿ ಎಂದು ಮನವರಿಕೆ ಮಾಡಿದಾಗ, ಮುಖ್ಯಮಂತ್ರಿಗಳ ಹೇಳಿಕೆಗೆ ಸ್ಪಂದಿಸಿ ರೈತರು ತಾತ್ಕಾಲಿಕವಾಗಿ ಹಿಂಪಡೆದಿದ್ದೆವು. ಆದರೆ ಬೆಳಗಾವಿ ಜಿಲ್ಲೆಯ ರಾಜಕಾರಣಿಗಳ ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲಿಕರ ಲಾಭಿಗೆ ಮಣಿದು ಸಿಎಂ ಕುಮಾರಸ್ವಾಮಿಯವರು ನಿನ್ನೆಯ ದಿನ ತಮ್ಮ ಹೇಳಿಕೆಯನ್ನು ಬದಲಿಸಿ, ವಚನಭ್ರಷ್ಟರಾಗಿದ್ದಾರೆ. ಜೋತೆಗೆ ಬೆಳಗಾವಿ ಸಭೆ ರದ್ದು ಮಾಡಲಾಗಿದೆ, ರೈತ ಮುಖಂಡರು ಅಷ್ಟೆ ಬೆಂಗಳುರಿಗೆ ಬನ್ನಿ ಹೇಳಿಕೆ ನಿಡಿದ್ದಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ರೈತರು ಬೆಲಗಳೂರಿಗೆ ಬರಲ್ಲ, ಸಿಎಂ ಕುಮಾರಸ್ವಾಮಿಯವರೇ ನಾಳೆಯ ದಿನ ಬೆಳಗಾವಿಗೆ ಬಂದು ರೈತರ ಜೋತೆಗೆ ಸಭೆ ನಡೆಸಬೇಕು, ಇಲ್ಲಾವಾದಲ್ಲೆ ರೈತರ ಹೋರಾಟ ಉಗ್ರ ಸ್ವರೂಪವಾಗುದುರಲ್ಲಿ ಸಂಶಯವಿಲ್ಲ ಎಂದು ನುಡಿದರು.
ರೈತರ ಪ್ರತಿಭಟನೆ ಅರಿತು ಖಾನಾಪುರ ತಹಶಿಲದಾರ ಶಿವಾನಂದ ಉಳ್ಳೆಗಡ್ಡಿ ಸ್ಥಳಕ್ಕೆ ಆಗಮಿಸಿ ರೈತರ ಮನವಿ ಸ್ವಿಕರಿಸಿದ ನಂತರ ಮಾತನಾಡಿದ ಅವರು ರೈತರು ನೀಡಿದ ಮನವಿಯನ್ನು ಜಿಲ್ಲಾಧಿಕಾರಿಗಲ ಮುಖಾಂತರ ಸಿಎಂ ಕುಮಾರಸ್ವಾಮಿಯವರಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತೆವೆನೆ ಎಂದಾಗ. ರೈತರು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಮೋಟಕುಗೊಳಿಸಿದರು.
ರೈತ ಮುಖಂಡ ಪಾಂಡುರಂಗ ಮಿಟಗಾರ ಮಾತನಾಡಿ ಕಳೆದ 3-4 ವರ್ಷಗಳಿಂದ ಬಾಕಿ ಉಳಿದಿರುವ ರೈತರ ಕಬ್ಬಿನ ಬಿಲ್ಲನ್ನು ತಕ್ಷಣವೇ ನೀಡಬೇಕು, ಈ ವರ್ಷದ ಕಬ್ಬಿಗೆ ಬೆಲೆ ನಿಗಧಿ ಮಾಡಿಯೇ ಕಾರ್ಖಾನೆಗಳನ್ನು ಪ್ರಾರಂಭಿಸಬೇಕು. ಇದರ ಜೋತೆಗೆ ಸಿಎಂ ಕುಮಾರಸ್ವಾಮಿ ಮಾತುಕೊಟ್ಟ ಪ್ರಕಾರನಾಳೆಯ ದಿನ ಬೆಳಗಾವಿ ಬಂದು ರೈತರ ಸಭೆ ನಡೆಸಿ ಸಮಸ್ಯೆಯನ್ನು ಬಗೆಹರಿಸಬೇಕು. ಒಂದು ವೇಳೆ ರೈತರ ಸಮಸ್ಯೆಗಳಿಗೆ ತಕ್ಷಣವೆ ಸ್ಪಂಧಿಸದೆ ಇದ್ದರೆ ರೈತರ ಪ್ರತಿಭಟನೆ ಹೀಗೆ ಮುಂದುವರಿಸಲಾಗುವದು. ಜೋತೆಗೆ ಕಬ್ಬಿನ ಬೆಲೆ ನಿಗದಿ ಆಗುವವರೆಗೂ ಕಬ್ಬಿನ ಲಾರಿಗಳನ್ನು ತಡೆದು ಮತ್ತು ಕಬ್ಬು ಕಟಾವು ಮಾಡಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಬಸಲಿಂಗಪ್ಪ ಬಿಜಾಪುರ, ಬಾಳಪ್ಪಾ ಮಾಟೋಳ್ಳಿ, ರಾಜು ರಪಾಟಿ, ಯಲ್ಲಪ್ಪಾ ಚೆನ್ನಾಪೂರ, ರಾಜು ಜಾನಿ ಡಿಸಿಲ್ವಾ, ಶಾಮೀರ ಹಟ್ಟಿಹೊಳಿ, ಗಫಾರಸಾಬ ಕಟ್ಟಿಮನಿ, ಸಂಜು ಪಾರಿಶ್ವಾಡ, ರಮೇಶ ಮಾಟೋಳಿ, ಅಕ್ಬರಸಾಬ ಖಾನಾಪುರ, ಮಾಜಿ ತಾಪಂ ಸದಸ್ಯ ಸುಭಾನಿ ನದಾಫ, ತವನಪ್ಪಾ ರಪಾಟಿ, ಕಲ್ಲಪ್ಪಾ ಸಂಗೋಳ್ಲಿ, ಸುರೇಶ ಮಾವಿನಕಟ್ಟಿ, ಲಿಂಗನಮಠ, ಕಕ್ಕೇರಿ, ಹುಲಿಕೇರಿ, ಕಡಬಗಟ್ಟಿ, ಗುಂಡೊಳ್ಳಿ ಗ್ರಾಮದ ನೂರಾರು ಸಂಖ್ಯೆಯ ರೈತರು ಭಾಗವಹಿಸಿದ್ದರು.