ಮೂಡಲಗಿ:ನ.21ರಂದು ಕಸಾಪ ಮೂಡಲಗಿ ಘಟಕ ಉದ್ಘಾಟನೆ
ನ.21ರಂದು ಕಸಾಪ ಮೂಡಲಗಿ ಘಟಕ ಉದ್ಘಾಟನೆ
ಮೂಡಲಗಿ ನ 19 : ನೂತನ ಮೂಡಲಗಿ ತಾಲೂಕಿನಲ್ಲಿ ಕನ್ನಡ ನಾಡು, ನುಡಿ, ಜಲಕ್ಕಾಗಿ ಹಾಗೂ ಕನ್ನಡ ಕಟ್ಟುವ ಉದ್ದೇಶದಿಂದ ಕನ್ನಡ ಸಾಹಿತ್ಯ ಪರಿಷತ್‍ನ ನೂತನ ಘಟಕದ ಉದ್ಘಾಟನಾ ಸಮಾರಂಭವನ್ನು ನ.21 ಬುಧವಾರ ಮುಂಜಾನೆ 10 ಗಂಟೆಗೆ ಸ್ಥಳೀಯ ಚೈತನ್ಯ ಆಶ್ರಮ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕ.ಸಾ.ಪ ಮೂಡಲಗಿ ಘಟಕದ ನೂತನ ಅಧ್ಯಕ್ಷ ಸಿದ್ರಾಮ ದ್ಯಾಗಾನಟ್ಟಿ ಹೇಳಿದರು.
ಅವರು ಭಾನುವಾರ ಸಾಯಂಕಾಲ ಸ್ಥಳೀಯ ವಿದ್ಯಾನಗರದ ಮುರಗೇಶ ಗಾಡವಿ ನಿವಾಸದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಕಸಾಪ ನೂತನ ಘಟಕದ ಉದ್ಘಾಟನಾ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮೂಡಲಗಿ ಸಿದ್ದ ಸಂಸ್ಥಾನಮಠದ ಪೀಠಾಧಿಪತಿ ಶ್ರೀ ಶ್ರೀಪಾದಬೋದ ಸ್ವಾಮಿಜೀ ವಹಿಸುವರು. ಗೋಕಾಕನ ಸಾಹಿತಿಗಳಾದ ಚಂದ್ರಶೇಖರ ಅಕ್ಕಿ ಉದ್ಘಾಟಿಸುವರು. ಬೆಳಗಾವಿ ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಅಧ್ಯಕ್ಷತೆವಹಿಸುವರು. ಮುಖ್ಯ ಅಥಿತಿಗಳಾಗಿ ತಾಲೂಕು ದಂಡಧಿಕಾರಿ ಜಿ.ಎಸ್ ಮಳಗಿ, ಪುರಸಭೆ ಮುಖ್ಯಧಿಕಾರಿ ಜಿ.ಆರ್.ಪೂಜೇರಿ, ಗೋಕಾಕ ಕಸಾಪ ಅಧ್ಯಕ್ಷ ಮಹಾಂತೇಶ ತಾವಂಶಿ, ನಿಕಟಪೂರ್ವ ಅಧ್ಯಕ್ಷ ಬಾಲಶೇಖರ ಬಂದಿ ಆಗಮಿಸುವರು. ಕನ್ನಡಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಗೌರವ ಕೋಶಧ್ಯಕ್ಷ ಮುರಗೇಶ ಗಾಡವಿ, ಕಾರ್ಯದರ್ಶಿ ಬಸವರಾಜ ಕೋಟಿ, ನಿಕಟಪೂರ್ವ ಅಧ್ಯಕ್ಷ ಬಾಲಶೇಖರ ಬಂದಿ, ಸದಸ್ಯ ಯಲ್ಲಲಿಂಗ ವಾಳದ, ಸಿ.ಬಿ.ಪೂಜೇರಿ, ಬಿ.ಎಮ್ ನಂದಿ ಉಪಸ್ಥಿತರಿದ್ದರು.