RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಅರವಿಂದ ದಳವಾಯಿ ಆರೋಪದಲ್ಲಿ ಯಾವುದೇ ಹುರುಳಿಲ್ಲ : ಡಾ.ರಾಜೇಂದ್ರ ಸಣ್ಣಕ್ಕಿ

ಗೋಕಾಕ:ಅರವಿಂದ ದಳವಾಯಿ ಆರೋಪದಲ್ಲಿ ಯಾವುದೇ ಹುರುಳಿಲ್ಲ : ಡಾ.ರಾಜೇಂದ್ರ ಸಣ್ಣಕ್ಕಿ 

ಅರವಿಂದ ದಳವಾಯಿ  ಆರೋಪದಲ್ಲಿ ಯಾವುದೇ ಹುರುಳಿಲ್ಲ : ಡಾ.ರಾಜೇಂದ್ರ ಸಣ್ಣಕ್ಕಿ

ಗೋಕಾಕ ನ 19 : ಬರುವ ದಿ. 26ರಂದು ನಡೆಯಲಿರುವ ಕೌಜಲಗಿ ಬೀರದೇವರ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರನ್ನು ಕೈ ಬಿಟ್ಟಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೇಸ್ ಮುಖಂಡ ಅರವಿಂದ ದಳವಾಯಿ ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಪತ್ರಿಕೆಯಲ್ಲಿ ದಳವಾಯಿ ಅವರ ಹೆಸರು ಕೈ ಬಿಟ್ಟಿರುವುದಲ್ಲಿ ನನ್ನದೇನೂ ಪಾತ್ರವಿಲ್ಲ ಎಂದು ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಸೋಮವಾರದಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಕಳೆದ 20 ವರ್ಷಗಳಿಂದ ಕೌಜಲಗಿಯ ಬೀರದೇವರ ಜಾತ್ರೆಯು ನಡೆಯುತ್ತಿದ್ದು, ಇದಕ್ಕಾಗಿಯೇ ಜಾತ್ರಾ ಕಮೀಟಿ ಆಸ್ತಿತ್ವದಲ್ಲಿದೆ. ಪತ್ರಿಕೆಗಳಲ್ಲಿ ಯಾರ ಹೆಸರು ಮುದ್ರಿಸಬೇಕೆಂಬುದನ್ನು ಕಮೀಟಿಯೇ ನಿರ್ಧರಿಸುತ್ತದೆ. ಹೀಗಾಗಿ ದಳವಾಯಿ ಅವರು ತಮ್ಮ ಮೇಲೆ ಮಾಡಿರುವ ಆರೋಪ ರಾಜಕೀಯ ಪ್ರೇರಿತವಾದದ್ದು ಹಾಗೂ ಸತ್ಯಕ್ಕೆ ದೂರವಾಗಿದೆ ಎಂದು ತೀರಗೇಟು ನೀಡಿದ್ದಾರೆ.
ಮೂರು ವಿಧಾನ ಸಭೆ ಹಾಗೂ ಒಂದು ಬಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿ ಠೇವಣಿಯನ್ನು ಕಳೆದುಕೊಂಡಿರುವ ದಳವಾಯಿ ಅವರು, ಹತಾಶೆ ಮನೋಭಾವನೆಯಿಂದ ಇಂತಹ ಕ್ಷುಲಕ ಆರೋಪ ಮಾಡಿರುವುದು ಅವರ ಕೀಳುಮಟ್ಟದ ರಾಜಕೀಯವನ್ನು ಎತ್ತಿ ತೋರಿಸುತ್ತದೆ. ನಮ್ಮ ಬೀರದೇವರ ಜಾತ್ರೆಗೆ ಪ್ರತಿವರ್ಷದಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಆಮಂತ್ರಿಸುವ ಪರಿಪಾಠ ಇದ್ದೆ ಇದೆ. ಪ್ರತಿವರ್ಷ ಬಾಲಚಂದ್ರ ಜಾರಕಿಹೊಳಿ ಅವರು ಜಾತ್ರೆಗೆ ತನು-ಮನ-ಧನದಿಂದ ಸಹಾಯ ಸಹಕಾರ ಸಲ್ಲಿಸುತ್ತಿದ್ದು, ನಮ್ಮ ಭಾಗದ ಶಾಸಕರು ಕೂಡಾ ಆಗಿದ್ದು, ಈ ವರ್ಷವೂ ಕೂಡಾ ಶಾಸಕರನ್ನು ಜಾತ್ರಾ ಕಮೀಟಿಯವರು ಆಮಂತ್ರಿಸಿದ್ದಾರೆಂದು ಅವರು ತಿಳಿಸಿದ್ದಾರೆ.
ಅಲ್ಲದೇ ಕಳೆದ 10 ವರ್ಷಗಳಿಂದ ನಮ್ಮ ಸಮಾಜದ ಅಗ್ರಗಣ್ಯ ನಾಯಕರಾದ ಮಾಜಿ ಸಿಎಮ್ ಸಿದ್ದರಾಮಯ್ಯ ಹಾಗೂ ಹಾಗೂ ಎಮ್‍ಎಲ್‍ಸಿ ವಿವೇಕರಾವ ಪಾಟೀಲ ಅವರನ್ನು ಜಾತ್ರೆಯ ಆಮಂತ್ರಣ ಪತ್ರಿಕೆಯಲ್ಲಿ ಭಾವಚಿತ್ರವನ್ನು ಪ್ರಕಟಿಸಲಾಗುತ್ತಿದೆ. ಅವರ ಅನುಮತಿ ಪಡೆಯುವ ಪ್ರಶ್ನೆಯೇ ಇರುವದಿಲ್ಲ. ಇದು ನಮ್ಮ ಪ್ರೀತಿ ಹಾಗೂ ಗೌರವ ನೀಡುವ ಕಾರ್ಯವಾಗಿದೆ. ಇದನ್ನು ಕೇಳುವ ನೈತಿಕತೆ ದಳವಾಯಿ ಅವರಿಗಿಲ್ಲ, ಮೂಲತ: ಕೌಜಲಗಿ ಗ್ರಾಮದವರಾದ ಅರವಿಂದ ದಳವಾಯಿ ಅವರು ಗ್ರಾಮಗಳಲ್ಲಿ ನಡೆಯುವ ಸಾಮಾಜಿಕ, ಧಾರ್ಮಿಕ ಕಾರ್ಯಗಳಿಗೆ ಯಾವುದೇ ರೀತಿಯ ಸಹಾಯ ನೀಡಿರುವ ಉದಾಹರಣೆ ಇಲ್ಲ, ಜನರಿಗೆ ಸುಳ್ಳು ಹೇಳುವುದೇ ಇವರ ಜಾಯಮಾನವಾಗಿದೆ ಎಂದು ಸಣ್ಣಕ್ಕಿ ತಿಳಿಸಿದ್ದಾರೆ.
ಧಾರ್ಮಿಕ ಕಾರ್ಯಗಳಲ್ಲಿ ವಿನಾಕಾರಣ ರಾಜಕೀಯ ಬೇರೆಸುತ್ತಿರುವ ದಳವಾಯಿಯಂತಹ ಸ್ವಯಂ ಘೋಷಿತ ಮುಖಂಡನಿಂದ ಯಾವುದೇ ಪಾಠ ಕಲಿಯುವ ಅಗತ್ಯವಿಲ್ಲ. ಆಮಂತ್ರಣ ಪತ್ರಿಕೆಯಲ್ಲಿ ದಳವಾಯಿ ಹೆಸರು ಇಲ್ಲದಿರುವುದಕ್ಕೆ ನನಗೂ ಅವರ ಬಗ್ಗೆ ಕನಿಕರ ಭಾವನೆ ಉಂಟಾಗಿದೆ. ಹೇಳಿಕೊಂಡು ಹೆಸರು ಹಾಕಿಸಿಕೊಳ್ಳುವ ಜಾಯಮಾನ ಮೊದಲಿನಿಂದಲೂ ದಳವಾಯಿ ಅವರ ಪರಿಪಾಠವಾಗಿದೆ. ಕುರುಬ ಸಮಾಜದ ಪ್ರಗತಿಯಲ್ಲಿ ದಳವಾಯಿ ಸಾಧನೆ ಶೂನ್ಯವಾಗಿದೆ. ಇಂತವರನ್ನು ಸಮಾಜ ಹೇಗೆ ನಂಬುತ್ತದೆ ಎಂಬುದನ್ನು ದಳವಾಯಿ ಅರ್ಥಮಾಡಿಕೊಳ್ಳಬೇಕು. ಪ್ರತಿ ಚುನಾವಣೆಗೊಮ್ಮೆ ಪಕ್ಷಗಳನ್ನು ಬದಲಾಯಿಸುತ್ತಾ ಜನರಿಗೆ ಮಂಕಬೂದಿಯನ್ನು ಎರಚುತ್ತಿರುವ ಅರವಿಂದ ದಳವಾಯಿ ಅವರು ಸುಮ್ಮಸುಮ್ಮನೆ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮುಂದುವರಿಸಿದರೇ ಅವರ ವಿರುದ್ಧ ಕಾನೂನಿನ ಮೊರೆ ಹೋಗಬೇಕಾಗುತ್ತದೆ ಎಂದು ಸಣ್ಣಕ್ಕಿ ಅವರು ಪ್ರಕಟನೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

Related posts: