RNI NO. KARKAN/2006/27779|Saturday, October 19, 2024
You are here: Home » breaking news » ಮೂಡಲಗಿ:ಅಧಿಕಾರ ಸಿಕ್ಕಾಗ ಮಾಡುವ ಸೇವಾ ಕಾರ್ಯಗಳೆ ನಮಗೆ ಶ್ರೀರಕ್ಷೆ : ಎಮ್ ಜಿ ದಾಸರ

ಮೂಡಲಗಿ:ಅಧಿಕಾರ ಸಿಕ್ಕಾಗ ಮಾಡುವ ಸೇವಾ ಕಾರ್ಯಗಳೆ ನಮಗೆ ಶ್ರೀರಕ್ಷೆ : ಎಮ್ ಜಿ ದಾಸರ 

ಅಧಿಕಾರ ಸಿಕ್ಕಾಗ ಮಾಡುವ ಸೇವಾ ಕಾರ್ಯಗಳೆ ನಮಗೆ ಶ್ರೀರಕ್ಷೆ : ಎಮ್ ಜಿ ದಾಸರ

ಮೂಡಲಗಿ ನ 20 : ನಾವು ಮಾಡುವ ಕೆಲಸ ಕಾರ್ಯಗಳ ಮೇಲೆ ನಮ್ಮ ಕುಟುಂಭಗಳು ಭದ್ರವಾಗಿರುತ್ತವೆ. ಅಧಿಕಾರ ಸಿಕ್ಕಾಗ ಮಾಡುವ ಸೇವಾ ಕಾರ್ಯಗಳೆ ನಮಗೆ ಶ್ರೀರಕ್ಷೆಯಾಗಿದ್ದು, ಶಿಕ್ಷಣ ಇಲಾಖೆಯಲ್ಲಿದ್ದು ಶೈಕ್ಷಣಿಕವಾಗಿ ವಿದ್ಯಾರ್ಥಿಗಳಿಗೆ ಶಿಕ್ಷಕರಿಗೆ ಅತ್ಯುತ್ತಮ ಉಪಯುಕ್ತ ಕಾರ್ಯಗಳನ್ನು ಮಾಡಬೇಕೆಂದು ಚಿಕ್ಕೋಡಿ ಡಿಡಿಪಿಐ ಎಮ್ ಜಿ ದಾಸರ ನುಡಿದರು.
ಅವರು ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಜರುಗಿದ ಶಿಕ್ಷಣಾಧಿಕಾರಿಗಳ ಸ್ವಾಗತ ಮತ್ತು ಬಿಳ್ಕೋಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಅಧಿಕಾರಿ ವರ್ಗದಲ್ಲಿ ವರ್ಗಾವಣೆ ಸಾಮಾನ್ಯವಾಗಿದ್ದು, ನಮಗೆ ಕೊಟ್ಟ ಕಾರ್ಯಕ್ಷೇತ್ರದಲ್ಲಿ ಯಶಸ್ವಿಯಾಗಿ ಕೆಲಸ ನಿರ್ವಹಿಸಬೇಕು. ಮೂಡಲಗಿ ಶೈಕ್ಷಣಿಕ ವಲಯ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮಿಂಚಲು ಇಲ್ಲಿಯ ಅಧಿಕಾರಿ ವರ್ಗ ಶಿಕ್ಷಕರ ಹಗಲಿರುಳು ಶ್ರಮದ ಪ್ರತೀಕವಾಗಿದೆ. ಶಿಕ್ಷಕ ವೃತ್ತಿ ಎಂದು ತಿಳಿಯದೆ ಸಾಮಾಜಿಕವಾಗಿ ಶೈಕ್ಷಣಿಕ ಕಾರ್ಯಚಟುವಟಿಕೆಗಳನ್ನು ಬಿತ್ತರಿಸುವ ಕಾರ್ಯ ಮಾಡಬೇಕು.
ಎ.ಸಿ ಗಂಗಾಧರ ಅವರನ್ನು ಚಿಕ್ಕೋಡಿಯ ಡಿ.ಡಿ.ಪಿಐ ಕಛೇರಿಯ ಶಿಕ್ಷಣಾಧಿಕಾರಿಗಳಾಗಿ ಹಾಗೂ ಎ.ಸಿ ಮನ್ನಿಕೇರಿ ಅವರನ್ನು ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಹುದ್ದೆ ಬದಲಾವಣೆಯಾಗಿರುವದಷ್ಟೇ, ಆದರೆ ಎರಡು ರತ್ನಗಳು ನಮ್ಮ ಜಿಲ್ಲೆಯಲ್ಲಿರುವದು ವಿಶೇಷವಾಗಿದೆ ಎಂದರು. ಸಮಾರಂಭದಲ್ಲಿ ಅನೇಕ ನೈತಿಕ ಮೌಲ್ಯಗಳುಳ್ಳ ನಿದರ್ಶನಗಳನ್ನು ನೀಡಿದರು.
ಚಿಕ್ಕೋಡಿ ಶಿಕ್ಷಣಾಧಿಕಾರಿಯಾಗಿ ವರ್ಗಾವಣೆ ಹೊಂದಿದ ಅನಿಲಕುಮಾರ ಗಂಗಾಧರ ಸತ್ಕಾರ ಸ್ವೀಕರಿಸಿ ಮಾತನಾಡಿ, ಕೇವಲ 14 ತಿಂಗಳಲ್ಲಿ ಮೂಡಲಗಿ ಶೈಕ್ಷಣಿಕ ವಲಯದಲ್ಲಿ ಹತ್ತಾರು ಮಹತ್ವಾಕಾಂಕ್ಷಿ ಯೋಜನೆಗಳನ್ನು ವ್ಯವಸ್ಥಿತ ರೀತಿಯಲ್ಲಿ ಕಾರ್ಯಗತಗೊಳಿಸಿದೆ. ವಲಯ ವ್ಯಾಪ್ತಿಯಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ಶಿಕ್ಷಕರಿಗೆ ಸೇವಾ ಕಾರ್ಯದ ಕುರಿತು ಮನವರಿಕೆ ಮಾಡಿಸಲಾಗಿದೆ. ಶಿಕ್ಷಕರಿಗೆ ದೊರೆಯುವ ಪ್ರತಿಯೊಂದು ಕಾರ್ಯಗಳು ವಿಳಂಬವಿರದೆ ಸಕಾಲಕ್ಕೆ ಸೇವೆ ಒದಗಿಸಿರುವ ತೃಪ್ತಿ ನೀಡಿದ್ದು, ಮುಂಬರುವ ದಿನಗಳಲ್ಲಿ ಮೂಡಲಗಿ ವಲಯ ರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಎಲ್ಲರೂ ಶ್ರಮಿಸೋಣ ಎಂದು ಹೇಳಿದರು.
ಮೂಡಲಗಿಗೆ ಬಿ.ಇ.ಒ ಆಗಿ ಅಜೀತ ಮನ್ನಿಕೇರಿ ಕಾರ್ಯಬಾರವಹಿಸಿ ಮಾತನಾಡಿ, ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಸೇವಾ ಭಾಗ್ಯ ನಮಗೆ ದೊರತಿರುವದು ಪುಣ್ಯದ ಕೆಲಸ. ಸದಾ ಶಿಕ್ಷಕರ ನಾಡಿ ಮೀಡಿತಗಳಿಗೆ ಸ್ಪಂದಿಸಿದರೆ ಮಾತ್ರ ಶೈಕ್ಷಣಿಕವಾಗಿ ಸಾಧನೆ ಗೈಯಲು ಸಾಧ್ಯವೆಂದು ಹೇಳಿದರು.
ಶಿಕ್ಷಕ ಸಂಘಟನೆಯ ಬಿ.ಆರ್ ಥರಕಾರ, ಎಮ್.ವಾಯ್ ಸಣ್ಣಕ್ಕಿ, ಆರ್.ಎಮ್ ಮಹಾಲಿಂಗಪೂರ, ಎ.ಪಿ ಪರಸಣ್ಣವರ ಮಾತನಾಡಿ ಶೈಕ್ಷಣಿಕ ವಲಯದಲ್ಲಿ ಇಬ್ಬರು ಅಧಿಕಾರಿಗಳ ಕಾರ್ಯವೈಕರಿ ಹಾಗೂ ಶಿಕ್ಷಕ ಸಮುದಾಯಕ್ಕೆ ಅವರು ನೀಡಿರುವ ಕೋಡುಗೆಗಳ ಕುರಿತು ಮಾತನಾಡಿದರು.
ಸಮಾರಂಭದಲ್ಲಿ ಚಿಕ್ಕೋಡಿ ಡಿ.ವಾಯ್.ಪಿ.ಸಿ ರೇವತಿ ಮಠದ, ಅಥಣಿ ಬಿ.ಇ.ಒ ಸಿ.ಎಮ್ ನ್ಯಾಮಗೌಡರ, ಪಿ.ಇ.ಒ ಎಸ್.ಎ ನಾಡಗೌಡರ, ಇ.ಸಿ.ಒ ಟಿ ಕರಿಬಸವರಾಜು, ಬಿ.ಆರ್.ಸಿ ಸಮನ್ವಯಾಧಿಕಾರಿ ಬಿ.ಎಚ್ ಮೋರೆ, ಬಿ.ಪಿ ಬಂದಿ, ಕೆ.ಎಲ್.ಮೀಶಿ, ಎ.ಬಿ ಚವಡನ್ನವರ, ತಾಲೂಕಾ ಶಿಕ್ಷಕ ಸಂಘಟನೆಯ ಎಸ್.ಐ ಬಾಗೋಜಿ, ಎಲ್.ಎಮ್ ಬಡಕಲ್, ಎಮ್.ಜಿ ಮಾವಿನಗಿಡದ, ಎಮ್.ಜಿ ಗಾಣಿಗೇರ, ಎಸ್.ಎಲ್ ಪಾಟೀಲ ಹಾಗೂ ಮೂಡಲಗಿ ವಲಯ ವ್ಯಾಪ್ತಿಯ ಪ್ರಾಥಮಿಕ, ಪ್ರೌಢ ಶಾಲಾ ಸರಕಾರಿ ಅನುದಾನಿತ, ಅನುದಾನ ರಹಿತ ಮುಖ್ಯಸ್ಥರು ಉಪಸ್ಥಿತರಿದ್ದರು.

Related posts: